Russia-Ukraine War: ರಷ್ಯಾ - ಉಕ್ರೇನ್‌ ವಾರ್ ಲೆಕ್ಕಾಚಾರ ಉಲ್ಟಾಪಲ್ಟಾ; ಟ್ರಂಪ್‌ಗೆ ರಷ್ಯಾ ಡೋಂಟ್ ಕೇರ್!

Russia-Ukraine War: ರಷ್ಯಾ ಹಾಗೂ ಉಕ್ರೇನ್‌ ಯುದ್ಧ ನಿಲ್ಲುವ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಆಯ್ಕೆಯಾದ ಮೇಲೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಯುದ್ಧಗಳು ನಿಲ್ಲಲಿವೆ. ರಷ್ಯಾ ಹಾಗೂ ಉಕ್ರೇನ್‌ನ ವಾರ್‌ ನಿಲ್ಲಲಿದೆ ಎಂದೇ ಹೇಳಲಾಗಿತ್ತು. ಆದರೆ, ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮಾತಿಗೆ ರಷ್ಯಾ ಕ್ಯಾರೇ ಎಂದಿಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕರೆ ಮಾಡಿದ್ದ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ರಷ್ಯಾ ಹಾಗೂ ಉಕ್ರೇನ್‌ ಯುದ್ಧದ ಬಗ್ಗೆ ಮಾತನಾಡಿದ್ದರು. ಅಲ್ಲದೇ ಯುದ್ಧ ಮುಂದುವರಿಸದಂತೆ ಹೇಳಿದ್ದರು.

ಆದರೆ, ಇದೀಗ ಅಮೆರಿಕದ ಅಧ್ಯಕ್ಷರ ಮಾತಿಗೆ ರಷ್ಯಾ ಹಾಗೂ ಉಕ್ರೇನ್ಎರಡೂ ದೇಶಗಳು ಕ್ಯಾರೇ ಎಂದಿಲ್ಲ. ರಾತ್ರೋರಾತ್ರಿ ಎರಡೂ ದೇಶಗಳ ನಡುವೆ ಭಾರೀ ಪ್ರಮಾಣದಲ್ಲಿ ಯುದ್ಧ ಡ್ರೋನ್‌ಗಳ ಉಡಾವಣೆಯಾಗಿದೆ. ಯುಎಸ್‌ನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ವಾರ್‌ಗೆ ಸಂಬಂಧಿಸಿ ಮಾತನಾಡಿದ್ದರು. ಯಥಾಸ್ಥಿತಿ ಕಾಪಾಡಿಕೊಳ್ಳಿ ಯುದ್ಧ ಮುಂದುವರಿಸಬೇಡಿ ಎಂದಿದ್ದರು. ಆದರೆ, ಈಗ ರಾತ್ರೋ ರಾತ್ರಿ ಈ ಎರಡೂ ದೇಶಗಳ ನಡುವೆ ಭಾರೀ ಯುದ್ಧ ನಡೆದಿದೆ.

Russia-Ukraine War Russia-Ukraine War Calculation Overturned Russia don t care about Trump

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಗುರುವಾರವಷ್ಟೇ ಅಮೆರಿಕದ ಪ್ರೆಸಿಡೆಂಟ್‌ ಕಾಲ್‌ ಮಾಡಿ ಮಾತಾಡಿದ್ದರು. ಆದರೆ ಇಲ್ಲಿಯವರೆಗೆ ಈ ಬಗ್ಗೆ ಯಾವುದೇ ಪ್ರಮುಖ ಬದಲಾವಣೆಗಳನ್ನು ರಷ್ಯಾ ಮಾಡಿಲ್ಲ ಎನ್ನಲಾಗಿದೆ. ಯುರೋಪ್‌ನಲ್ಲಿ ಅಮೆರಿಕದ ಸೇನೆಯ ಬಗ್ಗೆ ಟ್ರಂಪ್‌ ಮಾತನಾಡಿದ್ದರು. ಪುಟಿನ್‌ಗೆ ಯುದ್ಧ ಮುಂದುವರಿಸದಂತೆ ಎಚ್ಚರಿಕೆಯನ್ನು ಸಹ ನೀಡಿದ್ದರು ಎಂದು ಹೇಳಲಾಗಿದೆ. ಅಮೆರಿಕ ಅಧ್ಯಕ್ಷರ ಸೂಚನೆ ನೀಡಿದ ಮೇಲೆಯೂ ರಷ್ಯಾ ಕ್ಯಾರೇ ಎನ್ನದೆ ಯುದ್ಧವನ್ನು ಮುಂದುವರಿಸಿದೆ.

ಆದಾಗ್ಯೂ, ಭಾನುವಾರ (ನ.10) ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳ ನಡುವೆ ದಾಖಲೆಯ ಡ್ರೋನ್ ದಾಳಿಗಳನ್ನು ನಡೆದಿವೆ. ಇನ್ನು ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ರಷ್ಯಾ ಒಂದೇ ದಿನದಲ್ಲಿ ಹಾಗೂ ಯಾವುದೇ ಮುನ್ಸೂಚನೆಯನ್ನು ನೀಡದೆ ಭಾರೀ ಡ್ರೋನ್‌ದಾಳಿ ನಡೆಸಿದೆ ಎಂದಿದ್ದಾರೆ. ರಷ್ಯಾ ಹಾಗೂ ಉಕ್ರೇನ್‌ನ ನಡುವೆ ವಾರ್‌ ಪ್ರಾರಂಭವಾದ ಮೇಲೆ ಇದೇ ಮೊದಲ ಬಾರಿ ದಾಖಲೆಯ ಪ್ರಮಾಣದ ಡ್ರೋನ್‌ ದಾಳಿ ಮಾಡಲಾಗಿದೆ ಎಂದಿದ್ದಾರೆ.

ರಷ್ಯಾ ಒಂದೇ ರಾತ್ರಿಯಲ್ಲಿ 145 ಡ್ರೋನ್‌ಗಳ ದಾಳಿ ಮಾಡಿದೆ. ಇದು ಯುದ್ಧದ ನಂತರ ಹಾರಿಸಲಾದ ದಾಖಲೆಯ ದಾಳಿ ಹಾಗೂ ಒಂದೇ ರಾತ್ರಿಯಲ್ಲಿ ಇಷ್ಟು ದಾಳಿಯಾಗಿಲ್ಲ ಎಂದಿದೆ. ಇನ್ನು ಉಕ್ರೇನ್‌ನ ಆರೋಪದ ಬಗ್ಗೆ ರಷ್ಯಾ ಸಹ ತಿರುಗೇಟು ನೀಡಿದೆ.

ರಷ್ಯಾದ ರಕ್ಷಣಾ ಸಚಿವಾಲಯವು ಉಕ್ರೇನ್‌ನಿಂದ ಹಾರಿಸಲಾಗಿರುವ 84 ಡ್ರೋನ್‌ಗಳನ್ನು ತಡೆದಿದೆ ಎಂದಿದೆ. ಅಲ್ಲದೇ ಆರು ಪ್ರದೇಶಗಳಲ್ಲಿ ಈ ದಾಳಿ ನಡೆದಿದೆ. ಮಾಸ್ಕೋ ಸಮೀಪದಲ್ಲೂ ಕೆಲವು ಹಾರಾಟ ನಡೆಸಿವೆ. ಇದರಿಂದ ವಿಮಾನ ಹಾರಾಟಗಳಿಗೆ ತೊಂದರೆಯಾಗಿರುವುದಾಗಿ ರಷ್ಯಾ ಹೇಳಿದೆ. ಅಲ್ಲದೇ ರಷ್ಯಾದ ಪ್ರಮುಖ ಮೂರು ವಿಮಾನ ನಿಲ್ದಾಣಗಳಲ್ಲಿ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿತ್ತು ಎಂದು ರಷ್ಯಾ ವರದಿ ಮಾಡಿದೆ.

ರಷ್ಯಾ ಉಕ್ರೇನ್‌ನ ವಿವಿಧ ಪ್ರದೇಶದಲ್ಲಿ 145 ಡ್ರೋನ್‌ಗಳನ್ನು ಉಡಾವಣೆ ಮಾಡಿದೆ ಎಂದು ಉಕ್ರೇನ್ ವಾಯುಪಡೆ ಹೇಳಿದೆ.

ಶನಿವಾರ ರಾತ್ರಿ ಹಲವು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದಿದೆ. ರಷ್ಯಾ ಹಾಗೂ ಉಕ್ರೇನ್‌ನ ನಡುವೆ 2022ರಿಂದ ವಾರ್‌ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+