Breaking: ಉಕ್ರೇನ್-ರಷ್ಯಾ ನಡುವೆ ಶಾಂತಿಯುತ ಮಾತುಕತೆ ಶುರು
ಕೀವ್, ಫೆಬ್ರವರಿ 28: ರಷ್ಯಾ ಹಾಗೂ ಉಕ್ರೇನ್ ನಡುವೆ ಶಾಂತಿಯುತ ಮಾತುಕತೆ ಶುರುವಾಗಿದೆ.
ಸುಮಾರು ಒಂದು ವಾರದ ಸುಧೀರ್ಘ ಯುದ್ಧದ ಬಳಿಕ ರಷ್ಯಾ ಮತ್ತು ಉಕ್ರೇನ್ ಕೊನೆಗೂ ಮಾತುಕತೆಗೆ ಕುಳಿತಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಜತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ನೇತೃತ್ವದ ನಿಯೋಗ ಮಾತುಕತೆ ನಡೆಸುತ್ತಿದೆ.
ತಮ್ಮ ದೇಶದ ಮೇಲೆ ಆಕ್ರಮಣ ಮಾಡುವ ವಿಚಾರದಲ್ಲಿ ರಷ್ಯಾದೊಂದಿಗೆ ಬೆಲಾರಸ್ ಕೂಡ ಕೈಜೋಡಿಸಿದ್ದರಿಂದ ಬೆಲಾರಸ್‌ನಲ್ಲಿ ಮಾತುಕತೆಗೆ ಸಿದ್ಧವಿಲ್ಲ ಎಂದು ಉಕ್ರೇನ್ ಹೇಳಿತ್ತು.

ಈ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ನಡೆದ ಬಳಿಕ ಬೆಲಾರಸ್‌ನ ಗಡಿಯಲ್ಲಿ ರಷ್ಯಾದೊಂದಿಗೆ ಮಾತುಕತೆ ನಡೆಸಲು ಉಕ್ರೇನ್ ಅಧ್ಯಕ್ಷ ಒಪ್ಪಿಕೊಂಡಿದ್ದಾರೆ.
ಉಕ್ರೇನ್ ಕಳೆದ ಕೆಲವು ದಿನಗಳಿಂದ ಮಾತುಕತೆಗೆ ನಿರಾಕರಿಸಿತ್ತು, ಇದರಿಂದ ರಷ್ಯಾವು ಉಕ್ರೇನ್‌ನಲ್ಲಿ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸಿತ್ತು. ಬೆಲಾರಸ್ ಈ ಹಿಂದೆ ರಷ್ಯಾ ಹಾಗೂ ಉಕ್ರೇನ್ ನಡುವೆ ಮಾತುಕತೆ ನಡೆಸಿತ್ತು ಎನ್ನಲಾಗಿದೆ.
ಆದರೆ ದಾಳಿಗೆ ರಷ್ಯಾಗೆ ಸಹಾಯ ಮಾಡಿದೆ ಎನ್ನುವ ಆರೋಪ ಬೆಲಾರಸ್ ಮೇಲಿದ್ದು, ಅದರ ಮೇಲೂ ಹಲವು ನಿರ್ಬಂಧ ಹೇರಲಾಗಿದೆ. ಇದೇ ಕಾರಣವನ್ನು ಉಕ್ರೇನ್ ಅಧ್ಯಕ್ಷರೂ ಕೂಡ ಪ್ರಸ್ತಾಪಿಸಿ ಬೇರೆಡೆಗೆ ಮಾತುಕತೆಗೆ ಸಿದ್ಧ ಎಂದಿದ್ದರು.












Click it and Unblock the Notifications