ಸ್ಪುಟ್ನಿಕ್ V ಕೊರೊನಾಗೆ ಹೊಸ ಅಸ್ತ್ರ:ಶೇ.91.6ರಷ್ಟು ಪರಿಣಾಮಕಾರಿ ಎಂದ ವಿಜ್ಞಾನಿಗಳು

ಮಾಸ್ಕೋ,ಫೆಬ್ರವರಿ 02: ಸ್ಪುಟ್ನಿಕ್ V ಕೊರೊನಾ ಲಸಿಕೆಯು ಕೊವಿಡ್ ವಿರುದ್ಧ ಹೋರಾಡಲು ಹೊಸ ಅಸ್ತ್ರವಾಗಿದೆ. ಶೇ.91.6ರಷ್ಟು ಪರಿಣಾಮಕಾರಿಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ಕುರಿತು ದಿ ಲ್ಯಾನ್ಸೆಟ್ ಇಂಟರ್ ನ್ಯಾಷನಲ್ ಮೆಡಿಕಲ್ ನಿಯತಕಾಲಿಕೆಯಲ್ಲಿ ತಿಳಿಸಲಾಗಿದೆ. ಲಸಿಕೆಯ ಕೊನೆಯ ಹಂತದ ಕ್ಲಿನಿಕಲ್ ಪ್ರಯೋಗದ ವಿಮರ್ಶೆ ಉಲ್ಲೇಖಿಸಿ ವರದಿ ಮಾಡಲಾಗಿದೆ.

ಸ್ಪುಟ್ನಿಕ್ ವಿ ಲಸಿಕೆಯ ಪ್ರಯೋಗದಲ್ಲಿ ಪಾರದರ್ಶಕತೆ ಇಲ್ಲ, ಆತುರದಿಂದ ಬಿಡುಗಡೆ ಮಾಡಲಾಗಿದೆ ಎಂದು ಟೀಕೆ ಮಾಡಲಾಗಿತ್ತು. ಆದರೆ ಅದರ ಫಲಿತಾಂಶಗಳು ಸ್ಪಷ್ಟವಾಗಿವೆ. ಲಸಿಕೆಯ ವೈದ್ಯಕೀಯ ತತ್ವ ಅನಾವರಣಗೊಂಡಿದೆ.

 Russias Sputnik V Vaccine 91.6Per Cent Effective In late-Stage Trial

ಕೊರೊನಾವನ್ನು ನಿಗ್ರಹಿಸಲು ಜಗತ್ತಿಗೆ ಮತ್ತೊಂದು ಅಸ್ತ್ರ ಸಿಕ್ಕಿದೆ ಎಂದು ಲಂಡನ್ ಇಯನ್ ಜಾನ್ಸ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಹೈಜೀನ್ ಟ್ರಾಫಿಕ್ ಮೆಡಿಸಿನ್ ವಿಭಾಗದ ಪ್ರೊ.ಪೊಲ್ಲಿ ರಾಯ್ ಹೇಳಿದ್ದಾರೆ.

ಕೊರೊನಾ ವಿರುದ್ಧ ಹೋರಾಡಲು ಜಗತ್ತಿಗೆ ಮತ್ತೊಂದು ಆಯುಧ ಸಿಕ್ಕಿದೆ ಎಂದು ಲಸಿಕೆಯ ಮೂರನೇ ಹಂತದ ಪ್ರಯೋಗ ಫಲಿತಾಂಶಗಳನ್ನು ವಿಶ್ಲೇಷಿಸಿ ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲಸಿಕೆಯ ಕೊನೆಯ ಹಂತದಪ್ರಯೋಗಕ್ಕೂ ಮೊದಲೇ ಅದನ್ನು ಬಳಕೆಗೆ ನೀಡುವ ರಷ್ಯಾದ ನಿರ್ಧಾರವನ್ನು ವಿಜ್ಞಾನಿಗಳು ಸಮರ್ಥಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+