ರೈತನಿಗೆ ಸಿಕ್ಕಿತು ಡೈನೋಸರ್ ಅಸ್ಥಿಪಂಜರ: ಹರಾಜಿನಲ್ಲಿ ಬರೋಬ್ಬರಿ 450 ಕೋಟಿ ರೂ.ಗೆ ಮಾರಾಟ
ನಾವೆಲ್ಲಾ ಡೈನೋಸರನ್ನು ಟಿವಿಗಳಲ್ಲಿ, ಕಾರ್ಟೂನಿನಲ್ಲಿ ಸಿನಿಮಾದಲ್ಲಿ ನೋಡಿದ್ದೇವೆ. ಜರೋಸಿಕ್ ಪಾರ್ಕ್ ಸಿನಿಮಾ ಬಂದ ನಂತರವಂತೂ ಈ ಡೈನೋಸರಿನ ಕ್ರೇಜ್ ಮಕ್ಕಳಲ್ಲಿ ಹೆಚ್ಚಾಗಿದೆ. ಬಹುತೇಕ ಮಕ್ಕಳಿಗೆ ಡೈನೋಸರ್ ಬಹಳ ಇಷ್ಟ. ಡೈನೋಸರಿನಲ್ಲಿ ತುಂಬಾ ವಿಧವಿದೆ. ಕೆಲವು ಸಸ್ಯಹಾರಿಗಳಾದರೆ, ಇನ್ನು ಕೆಲವು ಮಾಂಸಾಹಾರಿಗಳು. ಡೈನೊಸರ್ ಬೇರೆ ಬೇರೆ ಗಾತ್ರದಲ್ಲಿದೆ. ಕೆಲವು ದೈತ್ಯ ಆಕಾರದ್ದಾಗಿದ್ದರೆ, ಇನ್ನು ಕೆಲವು ಮಧ್ಯಮ ಗಾತ್ರದಲ್ಲಿರುತ್ತದೆ. ಮತ್ತೆ ಕೆಲವು ತುಂಬಾ ಸಣ್ಣವು. ಇದೀಗ ಡೈನೋಸರಿನ ಅಸ್ಥಿಪಂಜರ ಸಿಕ್ಕಿದೆ.
ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಅಪರೂಪದ ಡೈನೋಸಾರ್ ಅಸ್ಥಿಪಂಜರ ಸಿಕ್ಕಿದೆ. ಈ ಅಸ್ಥಿಪಂಜರ ಇತಿಹಾಸ ಸೃಷ್ಟಿಸಿದೆ. ಇದು ಟಿ-ರೆಕ್ಸ್ ಪ್ರಭೇದ ಎಂದೇ ಹೇಳಲಾಗಿದೆ. ಇದೀಗ ಟೀ ರೆಕ್ಸಿನ ಅಸ್ಥಿಪಂಜರವನ್ನು ಖರೀದಿಸಲು ತಾ ಮುಂದು ನಾ ಮುಂದು ಎಂದು ಜನ ಖರೀದಿಗೆ ಮುಂದಾಗಿದ್ದರು. ಆದರೆ, ಇದು ಇಷ್ಟು ದೊಡ್ಡ ಮೊತ್ತಕ್ಕೆ ಮಾರಟವಾಗುತ್ತದೆ ಎನ್ನುವ ನಿರೀಕ್ಷೆ ಯಾರಿಗೂ ಇರಲಿಲ್ಲ.

ಆಕ್ಶನ್ ಹೌಸಿನಲ್ಲಿ ಬಿಡ್ :
ವರದಿಗಳ ಪ್ರಕಾರ, ಅಪರೂಪದ ಪ್ರಭೇದದ ಡೈನೋಸರಿನ ಅಸ್ಥಿಪಂಜರವನ್ನು ಇತ್ತೀಚೆಗೆ ನ್ಯೂಯಾರ್ಕಿನ ಪ್ರತಿಷ್ಠಿತ ಸೋಥೆಬಿಸ್ ಆಕ್ಶನ್ ಹೌಸಿನಲ್ಲಿ ಬಿಡ್ ಮಾಡಲಾಗಿತ್ತು. ಈ ಅಸ್ಥಿಪಂಜರಕ್ಕೆ ಪ್ರೀತಿಯಿಂದ ಜೋಡಿ ಎಂದು ಹೆಸರಿಡಲಾಗಿದೆ. ಈ ಅಪರೂಪದ ಅಸ್ಥಿಪಂಜರವನ್ನು ತಮ್ಮದಾಗಿಸಲು ಸುಮಾರು 12 ನಿಮಿಷಗಳವರೆಗೆ ಪ್ರಪಂಚದ ಬೇರೆ ಬೇರೆ ಕಡೆಯಿಂದ ಬಂದ ಜನ ಬಿಡ್ಡಿಗೆ ನಿಂತಿದ್ದರು. ಈ ಅಸ್ಥಿಪಂಜರ ಖರೀದಿಸಲು ಆರು ದೊಡ್ಡ ಖರೀದಿದಾರರ ನಡುವೆ ಈ ತೀವ್ರ ಪೈಪೋಟಿ ನಡೆಯಿತು. ಕೊನೆಗೆ ಟೀ ರೆಕ್ಸಿನ ಅಸ್ಥಿಪಂಜರ 4.73 ಮಿಲಿಯನ್ ಡಾಲರ್ ಅಥವಾ 450 ಕೋಟಿ ರೂ.ಗೆ ಮಾರಾಟ ಮಾಡಲಾಯಿತು.
ನಿರೀಕ್ಷೆಗೂ ಮೀರಿದ ಮೊತ್ತಕ್ಕೆ ಅಸ್ಥಿಪಂಜರ ಮಾರಾಟ :
ಹರಾಜು ಆರಂಭವಾಗುವ ಮೊದಲು, ಅಪರೂಪದ ಅಸ್ಥಿಪಂಜರ ಗರಿಷ್ಠ 6 ಮಿಲಿಯನ್ ಡಾಲರಿಂದ 9 ಮಿಲಿಯನ್ ಡಾಲರಿನವರೆಗೆ ಮಾರಾಟವಾಗಬಹುದು ಎಂದು ತಜ್ಞರು ಅಂದಾಜಿಸಿದ್ದರು. ಆದರೆ, ಜನ ಆನ್ ಲೈನ್ ಮತ್ತು ಫೋನ್ ಮೂಲಕ ಕೂಡಾ ಬಿಡ್ಡಿಂಗ್ ಮಾಡಲು ಪ್ರಾರಂಭಿಸಿದರು. ಹೀಗಾಗಿ ಈ ಅಸ್ಥಿಪಂಜರ ಎಲ್ಲಾ ಹಳೆಯ ದಾಖಲೆಯನ್ನು ಮುರಿದು ಮುಂದಕ್ಕೆ ಹೋಯಿತು. ಇತಿಹಾಸವನ್ನು ಹಿಂದೆ ತಿರುಗಿ ನೋಡಿದರೆ ಡೈನೋಸಾರಿನ ಪಳೆಯುಳಿಕೆ ಇಷ್ಟು ದೊಡ್ಡ ಮೊತ್ತದಲ್ಲಿ ಮಾರಾಟವಾಗಿದ್ದು ಇದು ಎರಡನೇ ಬಾರಿ. ಡೈನೋಸಾರಿನ ಅಸ್ಥಿಪಂಜರಕ್ಕೆ ನಿಗದಿಯಾದ ಎರಡನೇ ಅತಿ ದೊಡ್ಡ ಬೆಲೆಯಾಗಿದೆ. ಇದಕ್ಕೂ ಮುನ್ನ ಜುಲೈನಲ್ಲಿ ಮತ್ತೊಂದು ಟಿ-ರೆಕ್ಸ್ ಅಸ್ಥಿಪಂಜರ ಗಸ್ 5.01 ಮಿಲಿಯನ್ ಡಾಲರಿಗೆ ಮಾರಾಟವಾಗಿತ್ತು.
⚫️ New York'ta düzenlenen bir müzayedede, yaklaşık 67 milyon yıllık Nanotyrannus iskeleti 47,3 milyon dolara (yaklaşık 2 milyar TL) satıldı.➖İskelet, bugüne kadar satılan en pahalı ikinci dinozor fosili olarak kayıtlara geçti. https://t.co/k06rdKTh8K
— SİYAH SANCAK (@siyahsancakx) October 28, 2026
ಅಪರೂಪದ ಡೈನೋಸಾರಿನ ಅಸ್ಥಿಪಂಜರ :
ಜೋಡಿ ಎಂಬ ಹೆಸರಿನ ಈ ಡೈನೋಸಾರಿನ ಅಸ್ಥಿಪಂಜರ ಸುಮಾರು 9.6 ಅಡಿ ಎತ್ತರ ಮತ್ತು 19.6 ಅಡಿ ಉದ್ದವಿದೆ. ಇದನ್ನು ಭಯಂಕರ ಪರಭಕ್ಷಕ ಟಿ-ರೆಕ್ಸ್ ನ ಪ್ರಭೇದ ಎಂದು ಕರೆಯಲಾಗಿದೆ. ಇದು ಮಿನಿ ಟಿ-ರೆಕ್ಸ್ ನಂತೆಯೇ ಕಾಣುತ್ತದೆ. ವಿಜ್ಞಾನಿಗಳ ಪ್ರಕಾರ, ಇಡೀ ಜಗತ್ತಿನಲ್ಲಿ ಕೇವಲ ಮೂರು ನ್ಯಾನೊಟೈರಾನಸ್ ಅಸ್ಥಿಪಂಜರ ಮಾತ್ರ ಇಷ್ಟು ಉತ್ತಮ ಮತ್ತು ಸುರಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇದರ ತಲೆಬುರುಡೆ ಬಹುತೇಕ ಸಂಪೂರ್ಣವಾಗಿ ಸುರಕ್ಷಿತ ಮತ್ತು ಹಾಗೆಯೇ ಇದೆ.
ಈ ವಿಶಿಷ್ಟ ಅಸ್ಥಿಪಂಜರ 2019ರಲ್ಲಿ ಅಮೆರಿಕದ ಮೊಂಟಾನಾ ಪ್ರದೇಶದ ರಾಂಚ್ ಭೂಮಿಯಲ್ಲಿ ಪತ್ತೆಯಾಯಿತು. ಈ ಅಸ್ಥಿಪಂಜರ ಅಲ್ಲಿನ ರೈತ ಜೋಡಿ ಪಿಯರ್ಸನ್ ಎಂಬವರಿಗೆ ಸಿಕ್ಕಿದೆ. ನಂತರ ಇದಕ್ಕೆ ಜೋಡಿ ಎಂದು ಹೆಸರಿಸಲಾಯಿತು. ಐತಿಹಾಸಿಕ ಮತ್ತು ವೈಜ್ಞಾನಿಕ ಸಂಶೋಧನೆಗೆ ಸಾಮಾನ್ಯ ಜನರು ಹೇಗೆ ದೊಡ್ಡ ಕೊಡುಗೆ ನೀಡಬಹುದು ಎಂಬುದಕ್ಕೆ ಈ ಆವಿಷ್ಕಾರವು ಉತ್ತಮ ಉದಾಹರಣೆ ಎನ್ನುತ್ತಾರೆ ವಿಜ್ಞಾನಿಗಳು.


Click it and Unblock the Notifications
