ಕ್ವೆಟ್ಟಾದಲ್ಲಿ ಈ ವರ್ಷ ಉಗ್ರರ ದಾಳಿಯಲ್ಲಿ ಸತ್ತವರು 227 ಮಂದಿ

By: ವಿಕಾಸ್ ನಂಜಪ್ಪ
Subscribe to Oneindia Kannada

ಕ್ವೆಟ್ಟಾ, ಅಕ್ಟೋಬರ್ 25: ಕ್ವೆಟ್ಟಾದಲ್ಲಿ ಮತ್ತೊಮ್ಮೆ ದಾಳಿಯಾಗಿದೆ. 2016ರಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 227. ಈ ವರ್ಷದಲ್ಲೇ ಕನಿಷ್ಠ 36 ವಿವಿಧ ಕೃತ್ಯಗಳನ್ನು ಉಗ್ರರು ಮಾಡಿದ್ದಾರೆ. ಇವುಗಳಲ್ಲಿ 227 ಮಂದಿ ಪ್ರಾಣ ಕಳೆದುಕೊಂಡಿದ್ದು, 330ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸೋಮವಾರ ರಾತ್ರಿ ಪೊಲೀಸ್ ತರಬೇತಿ ಕಾಲೇಜಿನಲ್ಲಿ ನಡೆದ ಉಗ್ರರ ದಾಳಿಯಲ್ಲಿ 57 ಕೆಡೆಟ್ ಗಳು ಸಾವನ್ನಪ್ಪಿದ್ದಾರೆ. ಈ ಉಗ್ರರು ಆಫ್ಘನಿಸ್ತಾನದ ಉಗ್ರರೊಂದಿಗೆ ಸಂಪರ್ಕದಲ್ಲಿದ್ದರು. ಆದರೆ ಯಾವ ಸಂಘಟನೆ ಈ ಕೃತ್ಯ ಎಸಗಿದೆ ಎಂಬುದು ಸ್ಪಷ್ಟವಾಗಿದೆ 2006, 2008ರಲ್ಲೂ ಈ ತರಬೇತಿ ಕಾಲೇಜಿನ ಮೇಲೆ ದಾಳಿಯಾಗಿತ್ತು.[ಕ್ವೆಟ್ಟಾದಲ್ಲಿ ಭೀಕರ ಹತ್ಯಾಕಾಂಡ : 57 ಕೆಡೆಟ್ ಗಳ ಮಾರಣಹೋಮ]

Terror attack

2006: ಆಗ ಕಾಲೇಜಿನ ಮೇಲೆ ನಡೆದ ದಾಳಿಯಲ್ಲಿ ಭಯೋತ್ಪಾದನಾ ನಿಗ್ರಹ ದಳದ ಆರು ಪೊಲೀಸರು ಮೃತಪಟ್ಟಿದ್ದರು. ಐದು ಪ್ರಬಲ ಸ್ಫೋಟಗಳು ಸಂಭವಿಸಿದ್ದವು.

2008: ಉಗ್ರರು ರಾಕೆಟ್ ಹಾಗೂ ಗುಂಡುಗಳಿಂದ ದಾಳಿ ನಡೆಸಿದ್ದರು. ಅ ದಾಳಿಯಲ್ಲಿ ವ್ಯಕ್ತಿಯೊಬ್ಬನಿಗೆ ಗಾಯವಾಗಿತ್ತು. ಅದೇ ದಿನ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಸ್ಫೋಟವಾಗಿತ್ತು.[ಪಾಕಿಸ್ತಾನದ ಕ್ವೆಟ್ಟಾದ ಆಸ್ಪತ್ರೆಯಲ್ಲಿ ಸ್ಫೋಟ, 93 ಸಾವು]

ಕಳೆದ ಆಗಸ್ಟ್ ನಲ್ಲಿ ಕ್ವೆಟ್ಟಾದ ಆಸ್ಪತ್ರೆ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ 73 ಮಂದಿ ಸಾವನ್ನಪ್ಪಿದರು. ವಕೀಲರು ತಮ್ಮ ಸಹವರ್ತಿಯೊಬ್ಬರ ಸಾವಿನ ಶೋಕಾಚರಣೆಯಲ್ಲಿ ಭಾಗವಹಿಸಲು ತೆರಳಿದ್ದ ವೇಳೆ ಘಟನೆ ಸಂಭವಿಸಿತ್ತು. ಆ ದಾಳಿಯ ಜವಾಬ್ದಾರಿಯನ್ನು ಐಎಸ್ ಗುಂಪು ಹಾಗೂ ಜಮಾತ್ ಉಲ್ ಅಹ್ರಾರ್ ಹೊತ್ತಿಕೊಂಡಿದ್ದವು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Quetta has been attacked yet again. The death toll in incidents of terror at Quetta for the year 2016 is at 227. In the year 2016 alone there have been at least 36 different incidents of terror at Quetta in which around 227 have lost their lives while over 330 have been injured.
Please Wait while comments are loading...