ಇಮ್ರಾನ್ ಖಾನ್ ಮನೆಯಲ್ಲಿ ಪೊಲೀಸರಿಂದ ಫುಲ್ ಸರ್ಚಿಂಗ್!

ಲಾಹೋರ್: ಪಾಕಿಸ್ತಾನದ ಹೈಡ್ರಾಮಾ ಇಲ್ಲಿಗೇ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಲಾಹೋರ್ ಹೈಕೋರ್ಟ್ 120 ಇಮ್ರಾನ್ ಬೆಂಬಲಿಗರನ್ನ ಜೈಲಿನಿಂದ ರಿಲೀಸ್ ಮಾಡಬೇಕು ಎಂದು ಆಗ್ರಹಿಸಿದ ಮರುಕ್ಷಣವೇ ಬೇರೆ ಆಟ ಶುರುವಾಗಿದೆ. ಇಮ್ರಾನ್ ಖಾನ್ ಮನೆಯಲ್ಲಿ ಪಂಜಾಬ್ ಪೊಲೀಸರ ಸರ್ಚಿಂಗ್ ಮುಂದುವರಿದಿದ್ದು, ಖಾನ್ ಬಂಧನಕ್ಕೂ ಸಕಲ ಸಿದ್ಧತೆ ಸಾಗಿದೆ ಎನ್ನಲಾಗ್ತಿದೆ.

ಉಗ್ರರ ತವರು ಪಾಕಿಸ್ತಾನದಲ್ಲಿ ಯಾರು ಉಗ್ರರು, ಯಾರು ಹೋರಾಟಗಾರರು, ಯಾರು ಹಿಂಸೆ ನಡೆಸಿದ್ದವರು ಎಂಬುದಕ್ಕೆ ವ್ಯತ್ಯಾಸ ಗೊತ್ತಿಲ್ಲ. ಇಮ್ರಾನ್ ಖಾನ್ (Imran Khan Arrest) ಪರವಾಗಿ ಪ್ರತಿಭಟನೆ ನಡೆಸಿದ್ದ ಬೆಂಬಲಿಗರನ್ನೂ ಉಗ್ರರು ಎಂದು ಕರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಆರೋಪದ ನಡುವೆ ಇಮ್ರಾನ್ ಮನೆಯಲ್ಲಿ ಸರ್ಚಿಂಗ್ ಮುಂದುವರಿದಿದ್ದು ಹೇಗಾದರೂ ಇಮ್ರಾನ್‌ಗೆ ಮತ್ತೆ ಜೈಲು ತೋರಿಸಬೇಕೆಂದು ಪಾಕ್ ಸರ್ಕಾರ ಪಣತೊಟ್ಟಂತೆ ಕಾಣುತ್ತಿದೆ. ಹೀಗಾಗಿ ನಿರಂತರವಾಗಿ ಇಮ್ರಾನ್ ಮನೆಯಲ್ಲಿ ಸರ್ಚಿಂಗ್ ನಡೀತಿದೆ.

Punjab police force still searching in Imran Khan house

2 ದಿನಗಳಿಂದ ನಿರಂತರ ಶೋಧ!

ಪಂಜಾಬ್ ಪೊಲೀಸರು ಸಂಪೂರ್ಣ ಸಿದ್ಧರಾಗಿ ಬಂದು ತಪಾಸಣೆ ಆರಂಭಿಸಿದ್ದಾರೆ. ಬರೋಬ್ಬರಿ 2 ದಿನಗಳಿಂದ ಇಮ್ರಾನ್ ಖಾನ್ ಮನೆಯಲ್ಲಿ ಶೋಧ ನಡೆಸಲಾಗುತ್ತಿದೆ. ಆದರೆ ಈವರೆಗೂ ಏನೇನ್ ಸಿಕ್ಕಿದೆ? ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ. ಹೀಗಾಗಿ ಇಮ್ರಾನ್ ಖಾನ್ ಬೆಂಬಲಿಗರು ರೊಚ್ಚಿಗೆದ್ದಿದ್ದು ಹೋರಾಟ ಭುಗಿಲೇಳುವ ಲಕ್ಷಣ ಕಾಣುತ್ತಿದೆ. ಮೇ 9ರ ನಂತರ ಭುಗಿಲೆದ್ದ ಹಿಂಸಾಚರದಲ್ಲಿ 50 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಪಾಕ್‌ಗೆ ಆಗಿದೆ. ಹೀಗಾಗಿ ಮತ್ತೆ ಹಿಂಸಾಚಾರ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಇಮ್ರಾನ್ ಖಾನ್ ವಿರುದ್ಧ ಪಿತೂರಿ?

ಪಾಕಿಸ್ತಾನ ಸೇನೆ & ಪಾಕಿಸ್ತಾನ ಕೇಂದ್ರ ಸರ್ಕಾರ ಇಮ್ರಾನ್ ಅರೆಸ್ಟ್ ಮಾಡಲು ಪಿತೂರಿ ಮಾಡಿದೆ. ಅದರಲ್ಲಿ ಇದೂ ಕೂಡ ಒಂದು ಎಂದು ಆರೋಪಿಸಲಾಗುತ್ತಿದೆ. ಇಮ್ರಾನ್ ಖಾನ್ ವಿರುದ್ಧ ಭಯೋತ್ಪಾದನೆಯ ಆರೋಪ ಹೊರಿಸಿ ಒಳಗೆ ಹಾಕಿದ್ರೆ ಹತ್ತಾರು ವರ್ಷ ಅಲ್ಲೇ ಲಾಕ್ ಮಾಡಬಹುದು. ಹಾಗೇ ಪಾಕ್ ಸೇನೆ, ISI ಬಗ್ಗೆ ಮಾತನಾಡಿದ ಇಮ್ರಾನ್‌ಗೆ (Pakistan) ಪಾಠ ಕಲಿಸಬಹುದು ಎಂಬ ತಂತ್ರ ಅಡಗಿರಬಹುದು. ಹೀಗೆ ಪಾಕಿಸ್ತಾನ ತಾನು ಎಂತಹ ದೇಶ ಅನ್ನೋದನ್ನ ಮತ್ತೊಮ್ಮೆ ಜಗತ್ತಿಗೇ ತೋರಿಸುತ್ತಿದೆ.

Punjab police force still searching in Imran Khan house

ಉಗ್ರರನ್ನೇ ಹೊರಗೆ ಬಿಡಲು ಹೇಳಿದ್ರಾ?

ಅಂದಹಾಗೆ ಮೊನ್ನೆಯಷ್ಟೇ ಇಮ್ರಾನ್ ಮನೆ ಒಳಗೆ 40 ಉಗ್ರರು ಅಡಗಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ಈ ಕಾರಣಕ್ಕೆ ಪಾಕ್‌ ಪಂಜಾಬ್ ಪ್ರಾಂತ್ಯದ ಸಾವಿರಾರು ಪೊಲೀಸರು ಇಮ್ರಾನ್ ಖಾನ್ ಮನೆ ಮೇಲೆ ದಾಳಿ ಮಾಡಿದ್ರು. ದಾಳಿ ವೇಳೆ 8 ಉಗ್ರರು ಲಾಕ್ ಆಗಿದ್ರು. ಇವರೆಲ್ಲಾ ಮೇ 9ರ ನಂತರ ಪಾಕಿಸ್ತಾನದಲ್ಲಿ ಗಲಾಟೆ ಮಾಡಿದ್ದರು ಎಂಬ ಆರೋಪ ಇತ್ತು. ಆದರೆ ಇದೀಗ ಭಯೋತ್ಪಾದನೆ ಆರೋಪ ಹೊತ್ತವರನ್ನೇ ರಿಲೀಸ್ ಮಾಡಲು ಪಾಕ್ ಹೈಕೋರ್ಟ್ ಆದೇಶ ನೀಡಿದ್ದು, ಲಾಹೋರ್ ಹೈಕೋರ್ಟ್ ಆದೇಶದ ಬಳಿಕ ಪಂಜಾಬ್ ಪೊಲೀಸರು ಇಮ್ರಾನ್ ಮನೆಯಲ್ಲಿ ಸರ್ಚಿಂಗ್ ಆಪರೇಷನ್ ಅನ್ನ ಮತ್ತಷ್ಟು ಹೆಚ್ಚಿಸಿದ್ದಾರೆ.

ಗನ್ ಹಿಡಿದು ನುಗ್ಗಿದ ಪೊಲೀಸ್ ಪಡೆ

ಜಮಾನ್ ಪಾರ್ಕ್‌ ಬಳಿ ಯಾವುದೇ ಸಮಯದಲ್ಲಿ ಹಿಂಸಾಚಾರ ಸ್ಫೋಟವಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಪೊಲೀಸ್ ಪಡೆ ಶಸ್ತ್ರಸಜ್ಜಿತರಾಗಿ ಸಿದ್ಧವಾಗಿದ್ದಾರೆ. ಇಮ್ರಾನ್‌ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆ ಬಂದ್‌ ಮಾಡಲಾಗಿದೆ. ಸ್ಥಳಗಳಲ್ಲಿ ಜಾಮರ್‌ ಅಳವಡಿಸಲಾಗಿದೆ. ಪೊಲೀಸರು ಕೆಲ ಶಂಕಿತ ಉಗ್ರರನ್ನು ಬಂಧೀಸಿದ್ದು, ಈ ಪೈಕಿ ಹಲವರು ಉಗ್ರರು ಎಂದು ಆರೋಪಿಸಲಾಗಿದೆ. ಕಳೆದ 2 ದಿನಗಳಿಂದ ಇಮ್ರಾನ್ ಮನೆಯಲ್ಲಿ ಸರ್ಚಿಂಗ್ ನಡೆಸಿದರೂ ಸೂಕ್ತ ಸಾಕ್ಷ್ಯಾಧಾರ ಸಿಗುತ್ತಿಲ್ಲ ಎನ್ನಲಾಗಿದೆ.

Punjab police force still searching in Imran Khan house

ಇದನ್ನೆಲ್ಲಾ ನೋಡಿ ಹೇಳೋದಾದ್ರೆ, ಹೇಗಾದರೂ ಮಾಡಿ ಇಮ್ರಾನ್‌ನ ಒಳಗೆ ಹಾಕಬೇಕು ಅನ್ನೋ ಹಠವನ್ನ ಪಾಕಿಸ್ತಾನ ಸೇನೆ ಮತ್ತು ಸರ್ಕಾರ ಸಾಧಿಸುತ್ತಿದೆ. ಆದರೆ ಇದ್ಯಾವುದೂ ವರ್ಕೌಟ್ ಆಗುತ್ತಿಲ್ಲ. ಹೀಗಾಗಿ ಸರ್ಚ್ ಆಪರೇಷನ್ ಮುಂದುವರಿದಿದ್ದು, ಇಮ್ರಾನ್ ಖಾನ್ ಮತ್ತೊಮ್ಮೆ ಜೈಲಿಗೆ ಹೋಗ್ತಾರಾ? ಎಂಬ ಡೌಟ್ ಅವರ ಕೋಟಿ ಕೋಟಿ ಅಭಿಮಾನಿಗಳನ್ನ ಕಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+