• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಯಾನ್‌ ಹೋಸೆಯಲ್ಲಿ ಮೊಬೈಲ್ ಆಡಳಿತದ ಕನಸು ಬಿಚ್ಚಿಟ್ಟ ಮೋದಿ

|

ಸ್ಯಾನ್ ಹೋಸೆ, ಸೆಪ್ಟೆಂಬರ್ 28 : ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸ್ಯಾನ್ ಹೋಸೆಯಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಮ್ಯಾಡಿಸನ್‌ ಸ್ಕ್ವೇರ್‌ನಲ್ಲಿ ನಡೆದ ಮಾದರಿಯಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. [ಚಿತ್ರಗಳು : ಮೋದಿ ಅಮೆರಿಕ ಭೇಟಿ]

ಸ್ಯಾನ್‌ ಹೋಸೆಯ ಎಸ್ಎಪಿ ಸೆಂಟರ್‌ನಲ್ಲಿ ಮೋದಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಸುಮಾರು 18 ಸಾವಿರಕ್ಕೂ ಅಧಿಕ ಭಾರತೀಯರು ಮೋದಿ ಭಾಷಣ ಕೇಳಲು ಆಗಮಿಸಿದ್ದಾರೆ. ಪ್ರಧಾನಿ ಮೋದಿ ವೇದಿಕೆಗೆ ಆಗಮಿಸಿದ್ದು, ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಗಿದೆ. [ಸಿಲಿಕಾನ್ ವ್ಯಾಲಿಯಲ್ಲಿ ಮೋದಿ ಹೇಳಿದ್ದೇನು?]

'ನಿಮ್ಮನ್ನು ನೋಡಿ ನನ್ನ ಉತ್ಸಾಹ ಮತ್ತಷ್ಟು ಹೆಚ್ಚಾಗುತ್ತಿದೆ. ಇಂದು ಭಾರತದಲ್ಲಿ ವೀರ ಸೇನಾನಿ ಭಗತ್ ಸಿಂಗ್ ಜನ್ಮ ದಿನ' ಎಂದು ಹೇಳಿ ಮೋದಿ ಮಾತು ಆರಂಭಿಸಿದರು. ಮೋದಿ ಭಾಷಣದ ಮುಖ್ಯಾಂಶಗಳು ಇಲ್ಲಿವೆ....

* 'ಇಲ್ಲಿನ ನಾಗರಿಕರಿಗೆ ಭಾರತೀಯರನ್ನು ಕಂಡರೆ ಗೌರವಿದೆ. ಆ ಗೌರವನ್ನು ನಾನು ನಮಿಸುತ್ತೇನೆ. ಭಾರತೀಯರು ಅಮೆರಿಕಕ್ಕೆ ಬಂದು ಸಾಧನೆ ಮಾಡುತ್ತಿದ್ದಾರೆ. ಪ್ರಪಂಚದಲ್ಲಿ ಭಾರತಕ್ಕೆ ವಿಶೇಷ ಸ್ಥಾನ ಸಿಕ್ಕಿದೆ. ನೀವು ಕಂಪ್ಯೂಟರ್ ಮೇಲೆ ಬೆರಳು ಆಡಿಸಿ ಜಗತ್ತನ್ನು ಬದಲಾವಣೆ ಮಾಡಿದ್ದೀರಿ' [ವಿಶ್ವಸಂಸ್ಥೆಯಲ್ಲಿ ಮೋದಿ ಮಾಡಿದ ಭಾಷಣದ 10 ಅತ್ಯುತ್ತಮ ಉಲ್ಲೇಖ]

* 'ಬೆರಳ ತುದಿಯಲ್ಲಿ ಹೊಸ ಆವಿಷ್ಕಾರ ನಡೆಯುತ್ತಿದೆ. ಆದ್ದರಿಂದ ಪ್ರಪಂಚದಲ್ಲಿ ಭಾರತ ಹೊಸ ಭಾಷ್ಯ ಬರೆಯುತ್ತಿದೆ. ಈಗ ಭಾರತದ ಶಕ್ತಿಯಯನ್ನು ಜಗತ್ತಿಗೆ ಪರಿಚಯಿಸುವ ಸಮಯ ಬಂದಿದೆ. ಭಾರತದಲ್ಲಿ ಬ್ರೇನ್‌ನ ಬೆಳೆ ಬೆಳೆಯುತ್ತಿದೆ'.

* 'ಬುದ್ಧಿವಂತಿಕೆಯೇ ಭಾರತೀಯರ ಬಂಡವಾಳ, ಇದು ತಂತ್ರಜ್ಞಾನ ಕ್ಷೇತ್ರದಲ್ಲಿ ಇಂದು ಸಾಬೀತಾಗಿದೆ. ಇಂದು ಜಗತ್ತಿನ ಯಾವ ಮೂಲೆಗೆ ಹೋದರೂ ಭಾರತೀಯರ ಮೇಲೆ ವಿಶ್ವಾಸವಿಡುತ್ತಾರೆ. ಇದಕ್ಕೆ ಕಾರಣ ಬುದ್ಧಿವಂತಿಕೆ'.

* '125 ಕೋಟಿ ಭಾರತೀಯರು ನನಗೆ ಒಂದು ಜವಾಬ್ದಾರಿ ನೀಡಿದರು. ದೇಶದ ಅಭಿವೃದ್ಧಿಗಾಗಿ ನಾನು ಪ್ರತಿಕ್ಷಣವೂ ಕೆಲಸ ಮಾಡುತ್ತೇನೆ. ನನ್ನ ಜೀವವಿರುವ ತನಕ ದೇಶಕ್ಕಾಗಿ ಕೆಲಸ ಮಾಡುತ್ತೇನೆ'

* 'ಹಿಂದೆ ಉಪನಿಷತ್ತಿನಿಂದ ಭಾರತವನ್ನು ಗುರುತಿಸಲಾಗುತ್ತಿತ್ತು. ಇಂದು ಉಪನಿಷತ್ತಿಗಿಂತ ಮೇಲೆ ಹೋಗಿ ಉಪಗ್ರಹಗಳ ಬಗ್ಗೆ ಚರ್ಚೆಯಾಗುತ್ತಿದೆ. ಮಂಗಳಯಾನ ಮೊದಲ ಪ್ರಯತ್ನದಲ್ಲೇ ಯಶಸ್ಸುಕಂಡಿದೆ'

* 'ಭಾರತದ ಬಡತನದ ಬಗ್ಗೆ ನಮಗೆ ತಿಳಿದಿದೆ. ಯಾವಾಗ ಝಿರೋ ಬ್ಯಾಲೆನ್ಸ್ ಖಾತೆ ತೆರೆಯಲು ಅವಕಾಶ ಮಾಡಿಕೊಡಲಾಯಿತೋ ಎಲ್ಲರೂ ಬ್ಯಾಂಕ್‌ ಕಡೆ ಹೆಜ್ಜೆ ಹಾಕಿದರು. ಬಡವರಿಗಾಗಿ ಜನಧನ್ ಯೋಜನೆ ಜಾರಿಗೆ ತರಲಾಯಿತು.'

* 'ಗ್ಯಾಸ್ ಸಬ್ಸಿಡಿಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಲಾಗುತ್ತಿದೆ. ಈ ಮೂಲಕ ನಡೆಯುತ್ತಿದ್ದ ಅವ್ಯವಹಾರವನ್ನು ನಿಲ್ಲಿಸಲಾಗಿದೆ. ಮೊಬೈಲ್ ಆಡಳಿತ ಮೇಲೆ ಭಾರತ ಹೆಚ್ಚಿನ ಗಮನ ಹರಿಸಿದೆ. ಇದರಿಂದ ಅಭಿವೃದ್ಧಿಯ ವೇಗ ಹೆಚ್ಚಳವಾಗುತ್ತದೆ'

* ಭಾರತದಿಂದ ಸ್ಯಾನ್‌ ಫ್ರಾನ್ಸಿಸ್ಕೊ ನಗರಕ್ಕೆ ಡಿಸೆಂಬರ್‌ 2ರಿಂದ ನೇರ ಮತ್ತು ನಿಲುಗಡೆ ರಹಿತ ವಿಮಾನ ಸೇವೆಯನ್ನು ಆರಂಭಿಸುವುದಾಗಿ ಮೋದಿ ತಮ್ಮ ಭಾಷಣದ ಕೊನೆಯಲ್ಲಿ ಘೋಷಣೆ ಮಾಡಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi on Monday, September 28th address the Indian diaspora at a San Jose's SAP center. Your fingers created magic on the keyboard and this gave India a new identity said Modi in his speech.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more