ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಟಿ ಮುತ್ತಿಟ್ಟಿದಕ್ಕೆ ಕೊಟ್ಟಿದ್ದು 81 ಸಾವಿರ ಡಾಲರ್‌!

|
Google Oneindia Kannada News

ಲಾಸ್‌ ಎಂಜಲೀಸ್‌, ಸೆ. 9 : ಒಂದು ಮತ್ತಿನ ಬೆಲೆ ಅಬ್ಬಬ್ಬಾ ಎಂದರೆ ಎಷ್ಟಿರಬಹುದು? 10 ಸಾವಿರ, ಇಲ್ಲ 15 ಸಾವಿರ ಅಥವಾ ಒಂದು ಲಕ್ಷ ರೂಪಾಯಿ. ಅದೆಲ್ಲಾ ಇಲ್ಲಿ ಮಾರಾಟವಾದ ಮುತ್ತಿನ ಕಾಲು ಭಾಗಕ್ಕೂ ಬರಲ್ಲ ಬಿಡಿ. ಇಲ್ಲೊಂದು ಮುತ್ತು ಬರೋಬ್ಬರಿ 81 ಸಾವಿರ ಡಾಲರ್‌ಗೆ ಮಾರಾಟವಾಗಿದೆ.

ಇದು ಯಾವುದೋ ಸಮುದ್ರ ತಳದಲ್ಲಿ ಸಿಕ್ಕ ವಜ್ರಕ್ಕೆ ಸಮನಾದ ಮುತ್ತು ಅಂದುಕೊಂಡರೆ ತಪ್ಪಾಗುತ್ತದೆ. ಹಾಲಿವುಡ್‌ ತಾರೆ, ಮಾಡೆಲ್‌ ಏಲಿಜಬಿತ್‌ ಹರ್ಲೆ ತುಟಿಗೆ ನೀಡಿದ ಮುತ್ತಿಗೆ 81 ಸಾವಿರ ಡಾಲರ್‌ ನೀಡಲಾಗಿದೆ!

Elizabeth Hurley

ಏಲಿಟನ್‌ ಜಾನ್ಸ್‌ ಏಡ್ಸ್‌ ಫೌಂಡೇಶನ್‌ಗೆ ಒಂದು ಮುತ್ತಿನಿಂದ 81 ಸಾವಿರ ಡಾಲರ್‌ಗಳಷ್ಟು ದೊಡ್ಡ ಮಟ್ಟದ ದೇಣಿಗೆ ಏಕಕಾಲಕ್ಕೆ ದೊರೆತಿದೆ. ಮುತ್ತಿನ 'ಮತ್ತು' ಪಡೆದು ಹಣ ನೀಡಿದವ ಭಾರತೀಯ ಸಂಜಾತ ಎಂಬುದು ಮತ್ತೊಂದು ವಿಶೇಷ.(ನಟಿ ತುಟಿಯಲ್ಲಿ ರಕ್ತ ಜಿನುಗುವಂತೆ ಚುಂಬನ)

ಭಾರತೀಯ ಮೂಲಕ ಬ್ಯಾಂಕರ್‌ ಜುಲಿಯನ್‌ ಭಾರ್ತಿ ಈ ಮಟ್ಟಿನ ಹಣ ನೀಡಿ ನಟಿಗೆ ಚುಂಬಿಸಿದ್ದಾನೆ. ಇಂಗ್ಲೆಂಡ್‌ನ ಬೆರ್ಕ್‌ಶೈರ್‌ ನಗರದಲ್ಲಿ ಸಂಗೀತಗಾರ್ತಿಯೊಬ್ಬಳ ಸ್ಮರಣಾರ್ಥ ಹಮ್ಮಿಕೊಂಡಿದ್ದ ಪಾರ್ಟಿ ಈ ಮಟ್ಟಿನ ಕೊಟ್ಟು ತೆಗೆದುಕೊಳ್ಳುವ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.

ಗುಲಾಬಿ ಬಣ್ಣದ ಉಡುಗೆಯಲ್ಲಿ ಮಿಂಚುತಿದ್ದ 49 ವರ್ಷದ ಹರ್ಲೆಗೆ ಚುಂಬಿಸಿದ 27 ವರ್ಷದ ಬ್ಯಾಂಕರ್‌ 81 ಸಾವಿರ ಡಾಲರ್‌ ಪೇ ಮಾಡಿದ್ದಾರೆ. ಆದರೆ ಇದೊಂದು ಒಳ್ಳೆ ಕೆಲಸಕ್ಕೆ ಬಳಕೆಯಾಗಲಿದೆ ಎಂಬುದೇ ಸಮಾಧಾನದ ಸಂಗತಿ.

ಕ್ರಿಕೆಟಿಗ ಶೇನ್‌ ವಾರ್ನ್‌ ಅವರ ಒಂದು ಕಾಲದ ಗೆಳತಿಗೆ ಚುಂಬಿಸಿದ ಭಾರ್ತಿ ಅವಿವಾಹಿತನೇನಲ್ಲ. ಆದರೆ, ಈ ಸುದ್ದಿ ಕೇಳಿದ ಭಾರ್ತಿ ಹೆಂಡತಿ ಎನೂ ಅಂದುಕೊಂಡಿಲ್ಲವಂತೆ !

English summary
A kiss from model-actress Elizabeth Hurley sold for $81,000 at a fund raising auction for Elton John's AIDS Foundation. The smooch was bought by Indian-origin banker Julian Bharti as part of the auction and dinner at John's Woodside End of Summer Party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X