• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಿಲ್ಗಿಟ್, ಬಲ್ಟಿಸ್ತಾನ ಚುನಾವಣೆ: ಇಮ್ರಾನ್ ನಡೆಗೆ ಪಿಒಕೆ ಜನರಿಂದ ವಿರೋಧ

|

ನವದೆಹಲಿ, ಮೇ 12:ಗಿಲ್ಗಿಟ್-ಬಾಲ್ಟಿಸ್ತಾನ ನದಲ್ಲಿ ಚುನಾವಣೆ ನಡೆಸಲು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನಡೆಗೆ ಪಾಕಿಸ್ತಾನದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದ್ದು, ಪಿಒಕೆಯ ಮಾನವ ಹಕ್ಕುಗಳ ಕಾರ್ಯಕರ್ತರು ಆಕ್ಷೇಪಿಸಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮಾತನಾಡುತ್ತಿರುವ ಬೆನ್ನಲ್ಲೇ ಮಹತ್ವದ ಬೆಳವಣಿಗೆ ಇದಾಗಿದೆ.

ಪಾಕಿಸ್ತಾನದಲ್ಲಿ ಕೊರೊನಾ ಸೋಂಕಿತರ ಪತ್ತೆಗೆ ಗುಪ್ತಚರ ಸೇವೆ ಬಳಕೆ

ಗಿಲ್ಗಿಟ್-ಬಾಲ್ಟಿಸ್ತಾನನ ಜಮ್ಮು-ಕಾಶ್ಮೀರದ ಅವಿಭಾಜ್ಯ ಅಂಗವಾಗಿದ್ದು, 1947 ರಿಂದಲೂ ಪಾಕಿಸ್ತಾನ ಆಕ್ರಮಿಸಿಕೊಂಡಿದೆ. ಶತಾಯ ಗತಾಯ ಗಿಲ್ಗಿಟ್ ಬಾಲ್ಟಿಸ್ಥಾನದಲ್ಲಿ ಚುನಾವಣೆ ನಡೆಸಲು ಪಾಕಿಸ್ತಾನ ಷಡ್ಯಂತ್ರ ರೂಪಿಸಿದೆ ಎಂದು ಬ್ರಿಟನ್ ನಲ್ಲಿರುವ ಪಿಒಜೆಕೆಯ ಮಾನವಹಕ್ಕುಗಳ ಕಾರ್ಯಕರ್ತ ಅಮ್ಜದ್ ಅಯೂಬ್ ಮಿರ್ಜಾ ಹೇಳಿದ್ದಾರೆ.

ಗಿಲ್ಗಿಟ್ ನಲ್ಲಿ ಚುನಾವಣೆ ನಡೆಸುವ ಖಾನ್ ನಡೆಯನ್ನು ಅಕ್ರಮ ಎಂದು ಕರೆದಿರುವ ಪಾಕ್ ಆಕ್ರಮಿತ ಕಾಶ್ಮೀರದ ಮಾನವ ಹಕ್ಕುಗಳ ಕಾರ್ಯಕರ್ತರು, ಪಾಕಿಸ್ತಾನ ಪ್ರಾಯೋಜಿತ ಚುನಾವಣೆಯನ್ನು ಬಹಿಷ್ಕರಿಸುವಂತೆ ಗಿಲ್ಗಿಟ್-ಬಾಲ್ಟಿಸ್ತಾನದ ಜನತೆಗೆ ಕರೆ ನೀಡಿದ್ದಾರೆ.

ಪಾಕಿಸ್ತಾನದ ಈ ಕುಕೃತ್ಯವನ್ನು ಖಂಡಿಸುವುದಾಗಿ ಅಮ್ಜದ್ ಅಯೂಬ್ ಮಿರ್ಜಾ ಹೇಳಿದ್ದಾರೆ.ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್‌-ಬಾಲ್ಟಿಸ್ತಾನಗಳಲ್ಲಿ ಸ್ಥಳೀಯ ಚುನಾವಣೆ ನಡೆಸಬೇಕು. ಈ ಬಗ್ಗೆ 2018ರ ಆದೇಶಕ್ಕೆ ತಿದ್ದುಪಡಿ ತರಬೇಕು ಎಂದು ಪಾಕಿಸ್ತಾನ ಸುಪ್ರೀಂಕೋರ್ಟ್‌ ನೀಡಿದ ತೀರ್ಪಿನ ಬಗ್ಗೆ ಕೇಂದ್ರ ಸರ್ಕಾರ ಪ್ರಬಲ ಆಕ್ಷೇಪ ಮಾಡಿದೆ.

ಪಾಕಿಸ್ತಾನ ಬಲವಂತವಾಗಿ ಆತಿಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ಮಾಡುತ್ತಿರುವ ಬದಲಾವಣೆ ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಸ್ಪಷ್ಟವಾಗಿ ವಿದೇಶಾಂಗ ಇಲಾಖೆ ತಿಳಿಸಿದೆ.

ನವ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ ಕಚೇರಿಯ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಯಿಸಿಕೊಂಡು ಭಾರತದ ವತಿಯಿಂದ ಕಟು ಶಬ್ದಗಳ ಪ್ರತಿಭಟನೆ ವ್ಯಕ್ತಪಡಿಸಲಾಗಿದೆ.

English summary
A political and human right activists from Gilgit-Baltistan and Pakistan occupied Kashmir (PoK) called Islamabad's move to hold election illegal and unconstitutional' and urged people to boycott it. Gilgit-Baltistan, a part of the former state of Jammu and Kashmir, has been under Pakistans occupation since 1947.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X