ಪಾಕಿಸ್ತಾನ ರೈಲಿನ ಬೆಂಕಿಯಲ್ಲಿ ಬೆಂದವರ ಸಂಖ್ಯೆ 71ಕ್ಕೆ ಏರಿಕೆ

ಇಸ್ಲಾಮಾಬಾದ್, ಅಕ್ಟೋಬರ್ 31: ಯಾತ್ರಾರ್ಥಿಗಳೇ ತುಂಬಿದ್ದ ಪಾಕಿಸ್ತಾನದ ತೇಜ್ಗಮ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸತ್ತವರ ಸಂಖ್ಯೆ 71ಕ್ಕೇರಿದೆ. 12ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ರೈಲಿನಲ್ಲಿ ತಮ್ಮನ್ನು ಕಾಪಾಡಿ ಎನ್ನುವ ಕೂಗು ಇನ್ನೂ ಕೇಳಿಬರುತ್ತಿದೆ. ರಕ್ಷಣಾ ಕಾರ್ಯ ಮುಂದುವರೆದಿದೆ.

ರೈಲಿನಲ್ಲಿ ಅಡುಗೆಗೆ ಬಳಸುತ್ತಿದ್ದ ಸಿಲಿಂಡರ್ ಈ ಬೆಂಕಿಗೆ ಕಾರಣ ಎನ್ನಲಾಗಿದೆ. ಸಿಲಿಂಡರ್ ಸ್ಫೋಟಗೊಂಡು 71 ಮಂದಿ ಪ್ರಾಣವನ್ನು ಬಲಿ ಪಡೆದಿದೆ. ಸಾಕಷ್ಟು ಮಂದಿ ಯಾತ್ರಾರ್ಥಿಗಳು ಲಾಹೋರ್‌ಗೆ ತೆರಳುತ್ತಿದ್ದರು.

Pakistan Train Fire Death Toll Rises To 71

ಅಡುಗೆ ತಯಾರಿಸುವ ವೇಳೆ ಎರಡು ಸಿಲಿಂಡರ್‌ಗಳು ಸ್ಪೋಟಗೊಂಡಿವೆ, ಪರಿಣಾಮ ಬೆಂಕಿ ಇಡೀ ರೈಲನ್ನೇ ಆವರಿಸಿಕೊಂಡಿದೆ ಎಂದು ಪಾಕಿಸ್ತಾನದ ರೈಲ್ವೆ ಅಧಿಕಾರಿ ಅಲಿ ನವಾಜ್ ತಿಳಿಸಿದ್ದಾರೆ.

ಸಾಮಾನ್ಯವಾಗಿ ಪಾಕಿಸ್ತಾನಿಗಳು ರೈಲಿನಲ್ಲಿ ಪ್ರಯಾಣಿಸುವ ವೇಳೆ ತಿಂಡಿ-ತಿನಿಸುಗಳನ್ನು ಕೊಂಡೊಯ್ಯುತ್ತಾರೆ. ತಕ್ಷಣ ಗಾಯಗೊಂಡವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ತೇಜ್ಗಾಬ್ ರೈಲು ಪಾಕಿಸ್ತಾನದ ಅತಿ ಹಳೆಯ ರೈಲುಗಳಲ್ಲಿ ಒಂದಾಗಿದೆ.

ಅದು ಕರಾಚಿ ಹಾಗೂ ರಾವಲ್ಪಿಂಡಿ ನಡುವೆ ಸಂಚರಿಸುತ್ತದೆ. ಪಾಕಿಸ್ತಾನದಲ್ಲಿ ರೈಲು ದುರಂತಗಳು ಸಾಮಾನ್ಯವಾಗಿ ಸಂಭವಿಸುತ್ತವೆ. ಜುಲೈನಲ್ಲಿ 23 ಮಂದಿ ರೈಲು ದುರಂತದಲ್ಲಿ ಮೃತಪಟ್ಟಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+