ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಪ್ರಧಾನಿ ನವಾಜ್ ಷರೀಫ್ ವಿರುದ್ಧ ತನಿಖೆಗೆ ಕೋರ್ಟ್ ಆದೇಶ

By ವಿಕಾಸ್ ನಂಜಪ್ಪ
|
Google Oneindia Kannada News

ಇಸ್ಲಾಮಾಬಾದ್, ಏಪ್ರಿಲ್ 20: ಪಾಕಿಸ್ತಾನದ ಸುಪ್ರೀಂಕೋರ್ಟ್ ಗುರುವಾರ ಪನಾಮ ಪೇಪರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನವಾಜ್ ಷರೀಫ್ ವಿರುದ್ಧದ ತನಿಖೆಗೆ ಆದೇಶಿಸಿದೆ. ಪನಾಮ ಪೇಪರ್ಸ್ ಗೆ ಸಂಬಂಧಿಸಿದಂತೆ ಜಂಟಿ ವಿಚಾರಣಾ ತಂಡ ರಚಿಸಿ, ತನಿಖೆ ನಡೆಸಲು ಆದೇಶ ನೀಡಲಾಗಿದೆ.

ಐವರು ನ್ಯಾಯಮೂರ್ತಿಗಳನ್ನು ಒಳಗೊಂಡಿದ್ದ ಪೀಠವು ಪ್ರಕರಣದ ವಿಚಾರವಾಗಿ 3-2ರ ಮತದೊಂದಿಗೆ ತೀರ್ಪು ನೀಡಿದೆ. ತನಿಖಾ ತಂಡದಲ್ಲಿ ಎನ್ ಎಬಿ, ಎಫ್ ಐಎ, ವಿದೇಶಿ ವಿನಿಮಯ ನಿಯೋಗ, ಇಂಟರ್ ಸರ್ವೀಸ್ ಇಂಟಲಿಜೆನ್ಸ್ ಮತ್ತು ಮಿಲಿಟರಿ ಇಂಟೆಲಿಜೆನ್ಸ್ ನ ಅಧಿಕಾರಿಗಳು ಇರುತ್ತಾರೆ.

Nawaz Sharif

ಡೈರೆಕ್ಟರ್ ಜನರಲ್ ಶ್ರೇಣಿಯ ಎಫ್ ಐಎ ಅಧಿಕಾರಿ ತನಿಖೆಯ ನೇತೃತ್ವ ವಹಿಸಲಿದ್ದಾರೆ. ಸಂವಿಧಾನದ 184/3 ಸೆಕ್ಷನ್ ಅಡಿ ವಿಶೇಷ ಪೀಠವು ಪ್ರಕರಣದ ಪರಿಶೀಲನೆ ನಡೆಸಲಿದೆ. 540 ಪುಟಗಳ ತೀರ್ಪನ್ನು ನ್ಯಾಯಮೂರ್ತಿ ಖೋಸಾ ಓದಿದರು. ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಹಾಗೂ ನ್ಯಾಷನಲ್ ಅಕೌಂಟಬಿಲಿಟಿ ಬ್ಯೂರೋ ವಿಚಾರದ ತನಿಖೆ ನಡೆಸವಲ್ಲಿ ವಿಫಲವಾಗಿದೆ ಎಂದು ನ್ಯಾಯಮೂರ್ತಿಗಳು ಒತ್ತಿ ಹೇಳಿದ್ದಾರೆ.

ತೆರಿಗೆ ಉಳಿಸುವ ಸಲುವಾಗಿ ವಿದೇಶಗಳಲ್ಲಿ ಕಾನೂನುಬಾಹಿರವಾಗಿ ಹಣ ತೊಡಗಿಸಿರುವವರ ರಹಸ್ಯ ಮಾಹಿತಿಯನ್ನು ಕಾನೂನು ಸಂಸ್ಥೆಯೊಂದು ಪನಾಮ ಪೇಪರ್ಸ್ ಹೆಸರಲ್ಲಿ ಬಿಡುಗಡೆ ಮಾಡಿತ್ತು. ನವಾಜ್ ಷರೀಫ್ ಮಕ್ಕಳಾದ ಮರ್ಯಾಮ್, ಹಸನ್ ಮತ್ತು ಹುಸೇನ್ ವಿದೇಶದ ಹಲವು ಕಂಪೆನಿಗಳಲ್ಲಿ ವ್ಯವಹಾರ ನಡೆಸಿರುವ ಮಾಹಿತಿ ಬಹಿರಂಗವಾಗಿತ್ತು.

English summary
Pakistan Supreme Court orders probe against PM Nawaz Sharif on Panama Papers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X