ಭಾರತದ ವಿರುದ್ಧ ಪರಮಾಣು ಬಾಂಬ್ ತಯಾರಿಸಿದ್ದು ಹೇಗೆ ಪಾಕಿಸ್ತಾನ್? ಭಯಾನಕ ಕಾರಣ ಇಲ್ಲಿದೆ ತಿಳಿಯಿರಿ!
ಭಾರತ & ಪಾಕಿಸ್ತಾನ ಎಷ್ಟು ಬಾರಿ ಯುದ್ಧ ಮಾಡಿದ್ರೂ ಭಾರತ ಸರಿಯಾಗಿ ಕೊಟ್ಟಿದ್ದು, ಪ್ರತಿಬಾರಿ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ್ದಾರೆ ಭಾರತದ ವೀರ ಸೈನಿಕರು. ಆದ್ರೂ ತನ್ನ ಕುತಂತ್ರ ಬುದ್ಧಿ ಬಿಡದ ಪಾಪಿ ಪಾಕಿಸ್ತಾನದ ನಾಯಕರು, ಭಾರತವನ್ನೇ ಟಾರ್ಗೆಟ್ ಮಾಡಿ ಪರಮಾಣು ಬಾಂಬ್ ಸಂಶೋಧನೆ ಮಾಡಿದ್ದರು. ಈ ಬಗ್ಗೆ ಭ್ರಷ್ಟಾಚಾರ ಆರೋಪಿ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಭಯಾನಕ ಮಾಹಿತಿ ನೀಡಿದ್ದಾರೆ.
ಹೌದು, ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ 4 ವರ್ಷದ ಬಳಿಕ ಪಾಕಿಸ್ತಾನ ನೆಲಕ್ಕೆ ಮರಳಿದ್ದಾರೆ. ಹಗರಣ ಹಿನ್ನೆಲೆ ಪಾಕಿಸ್ತಾನ ಬಿಟ್ಟು ಹೋಗಿದ್ದ ಪಾಕ್ ಮಾಜಿ ಪ್ರಧಾನಿ ನವಾಜ್ ಕಂಬ್ಯಾಕ್ ಮಾಡಿದ್ದು, 4 ವರ್ಷದಿಂದ ಲಂಡನ್ ಅಜ್ಞಾತವಾಸದಲ್ಲಿ ಇದ್ದ ನವಾಜ್‌ಗೆ ತವರಿನ ದರ್ಶನವಾಗಿದೆ. 73 ವರ್ಷ ವಯಸ್ಸಿನ ಪಾಕಿಸ್ತಾನ ಮಾಜಿ ಪಿಎಂ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಪಕ್ಷದ ಮುಖ್ಯಸ್ಥನೂ ಹೌದು. ಹೀಗೆ ನಿನ್ನೆ ತನ್ನ ಬೆಂಬಲಿಗರು, ಕಾರ್ಯಕರ್ತರನ್ನು ಉದ್ದೇಶಿಸಿ ರ‍್ಯಾಲಿ ವೇಳೆ ಮಾತನಾಡಿದ ನವಾಜ್ ಷರೀಫ್, ಪರಮಾಣು ಬಾಂಬ್ ಕುರಿತಾಗಿ ಹೊಸ ಬಾಂಬ್ ಸಿಡಿಸಿದ್ದಾರೆ.

41 ಸಾವಿರ ಕೋಟಿ ರೂಪಾಯಿ ಆಫರ್!
ಅಂದಹಾಗೆ ನಿನ್ನೆ ತನ್ನ ದೇಶಕ್ಕೆ ಬಂದ ಹುಮ್ಮಸ್ಸಿನಲ್ಲಿ ಇದ್ದ ನವಾಜ್ ಷರೀಫ್, ಭರ್ಜರಿ ಭಾಷಣ ಮಾಡಿದ್ರು. ಈ ಸಂದರ್ಭದಲ್ಲಿ 1998ರ ಪಾಕಿಸ್ತಾನ ಪರಮಾಣು ಬಾಂಬ್ ಪರೀಕ್ಷೆ ವಿಚಾರವನ್ನ ಪ್ರಸ್ತಾಪ ಮಾಡಿದ ನವಾಜ್ ಷರೀಫ್, ಪಾಕಿಸ್ತಾನ ಪರಮಾಣು ಪರೀಕ್ಷೆಯನ್ನ ನಡೆಸದಂತೆ ಆಗಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಭರ್ಜರಿ ಆಫರ್ ಕೊಟ್ಟಿದ್ದರು ಅಂತಾ ಹೇಳಿದ್ದಾರೆ. ಅಂದಹಾಗೆ ಪಾಕಿಸ್ತಾನ ಈ ಪರೀಕ್ಷೆ ನಡೆಸಬಾರದು ಎಂದು, ಬಿಲ್ ಕ್ಲಿಂಟನ್ ಬರೋಬ್ಬರಿ 5 ಬಿಲಿಯನ್ ಅಮೆರಿಕನ್ ಡಾಲರ್ ಆಫರ್ ಮಾಡಿದ್ದರಂತೆ. ಅಂದರೆ ಅದರ ಈಗಿನ ಮೌಲ್ಯ ಸುಮಾರು 41,500 ರೂಪಾಯಿ.
ಪಾಕಿಸ್ತಾನ ಈಗ ಬೀದಿಗೆ ಬಿದ್ದಿದೆ!
ಹಾಗೇ ತನ್ನ ವಿರೋಧಿಗಳ ಬಗ್ಗೆ ಪುಂಖಾನುಪುಂಖ ಭಾಷಣ ಬಿಗಿದಿರುವ ನವಾಜ್ ಷರೀಫ್ ತನ್ನ ಬೆಂಬಲಿಗರ ಎದುರು ತಾನೇ ಪಾಕಿಸ್ತಾನವನ್ನು ಕಟ್ಟಿದ್ದು ಎಂದು ಬೀಗಿದರು. ಇದನ್ನ ಕೇಳಿದ ನವಾಜ್ ಬೆಂಬಲಿಗರು ಶಿಳ್ಳೆ, ಚಪ್ಫಾಳೆ ಹಾಕಿ ಸಂಭ್ರಮಿಸಿದರು. 4ನೇ ಬಾರಿಗೆ ಪಾಕ್ ಸಂಸತ್ ಅಧಿಕಾರ ಗಳಿಸುವ ಪ್ರಯತ್ನದಲ್ಲಿ ನವಾಜ್ ಪಾಕಿಸ್ತಾನಕ್ಕೆ ಮರಳಿದ್ದಾರೆ. ಪಾಕಿಸ್ತಾನದ ಏರ್ಪೋರ್ಟ್‌ಗೆ ದುಬೈನಿಂದ ಖಾಸಗಿ ವಿಮಾನದಲ್ಲಿ ನವಾಜ್ ಷರೀಫ್ ಬಂದಿಳಿದ ಮರುಕ್ಷಣವೆ ಪಾಕಿಸ್ತಾನದಲ್ಲಿ ಅವರ ಬೆಂಬಲಿಗರು ಸಂಭ್ರಮ ಶುರು ಮಾಡಿದರು.
ಮತ್ತೆ ಪಾಕಿಸ್ತಾನ ಉದ್ಧಾರ ಮಾಡ್ತಾರಂತೆ
ಕೊನೆಯದಾಗಿ ತಮಗೆ ಮತ್ತೊಮ್ಮೆ ಅಧಿಕಾರ ನೀಡಿ ಎಂಬುದನ್ನ ಕೇಳಿದ ನವಾಜ್ ಷರೀಫ್ ಈಗ ಪಾಕಿಸ್ತಾನ ಮತ್ತೆ ತನ್ನ ಹಳೆಯ ಗತ್ತು ತೋರಿಸಲಿದೆ ಎಂದರು. ಅಲ್ಲದೆ ಈಗ ಹಾಳು ಮಾಡಿರುವ ಆರ್ಥಿಕತೆಗೆ ಹೊಸ ಹುರುಪು ನೀಡುತ್ತೇನೆ ಎಂದಿದ್ದಾರೆ ನವಾಜ್. ಹೀಗೆ ಪಾಕ್ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗುತ್ತಿದ್ದು, ಮುಂದೆ ಮತ್ತಷ್ಟು ಪರಮಾಣು ಅಸ್ತ್ರಗಳನ್ನ ತಯಾರಿಸುವುದು ಫಿಕ್ಸ್ ಆಗಿದೆ.

ನವಾಜ್ ಜೈಲಿಗೆ ಹೋಗಿದ್ದು ಏಕೆ?
ಇಮ್ರಾನ್ ಅಧಿಕಾರಕ್ಕೆ ಬರುತ್ತಿದ್ದಂತೆ, ನವಾಜ್ ಷರೀಫ್‌ಗೆ ಜೈಲೂಟ ಫಿಕ್ಸ್ ಆಗಿತ್ತು. 71 ವರ್ಷ ವಯಸ್ಸಿನ ನವಾಜ್ ಷರೀಫ್ 2018ರಲ್ಲಿ ಪಾಕಿಸ್ತಾನದಲ್ಲಿ 2 ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದರು. ಜೈಲು ಸೇರುತ್ತಿದ್ದಂತೆ ಆರೋಗ್ಯದಲ್ಲಿ ಏರುಪೇರಾಗಿದೆ ಅಂತಾ ಹೇಳಿದ್ದರು. ಲಾಹೋರ್ ಹೈಕೋರ್ಟ್ ಅನುಮತಿ ಪಡೆದು, 2019ರಿಂದ ಚಿಕಿತ್ಸೆಗಾಗಿ ಲಂಡನ್‌ನಲ್ಲಿ ವಾಸ ಮಾಡ್ತಿದ್ದೀನಿ ಅಂತಾ ನವಾಜ್ ಷರೀಫ್ ಹೇಳಿದ್ದರು. ಈಗ ಪಾಕಿಸ್ತಾನಕ್ಕೆ ವಾಪಸ್ ಬಂದಿದ್ದು, ಮುಂಬರುವ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ಭಾರಿ ಕುತೂಹಲ ಕೆರಳಿಸಿದೆ.
ಪಾಕಿಸ್ತಾನ ಲೋಕಸಭೆ ಒಟ್ಟು ಸದಸ್ಯ ಬಲ 342, ಭಾರತದ ರೀತಿ ಪಾಕಿಸ್ತಾನದಲ್ಲೂ 5 ವರ್ಷ ಅಧಿಕಾರವಧಿ ಇರುತ್ತದೆ. ಈ ಅವಧಿಯು ಆಗಸ್ಟ್ 12ಕ್ಕೆ ಕೊನೆಯಾಗುತ್ತಿತ್ತು. ಆದರೆ ಈ ಅವಧಿ ಪೂರ್ಣವಾಗುವ ಮೊದಲು ಅಂದರೆ ಆಗಸ್ಟ್ 9ಕ್ಕೆ ಪಾಕಿಸ್ತಾನದ ಸಂಸತ್ ವಿಸರ್ಜನೆಗೆ ಶಿಫಾರಸು ಕಳುಹಿಸಿದ್ದರು ಪಾಕ್ ಪ್ರಧಾನಿ. ಹೀಗಾಗಿ ಪ್ರಧಾನಿ ಶಿಫಾರಸು ಹಿನ್ನೆಲೆ ಪಾಕಿಸ್ತಾನ ಸಂಸತ್ತನ್ನು ವಿಸರ್ಜನೆ ಮಾಡಲಾಗಿತ್ತು. 2024ರ ಜನವರಿ ಕೊನೆಯ ವಾರದಲ್ಲಿ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ.












Click it and Unblock the Notifications