4 ವರ್ಷಗಳ ಬಳಿಕ ದೇಶಕ್ಕೆ ಮರಳಿದ ಭ್ರಷ್ಟಾಚಾರ ಆರೋಪಿ ಮಾಜಿ ಪ್ರಧಾನಿ!
ಭ್ರಷ್ಟರ ಕೂಪದಲ್ಲಿ ನರಳುತ್ತಿರುವ ಪಾಕಿಸ್ತಾನದಲ್ಲಿ ಇಂದು ಹಬ್ಬದ ವಾತಾವರಣ. ಹಾಗೇ ಪಾಕಿಸ್ತಾನದ ಗಲ್ಲಿ ಗಲ್ಲಿಯಲ್ಲೂ ಹದ್ದಿನ ಕಣ್ಣಿಡಲಾಗಿದೆ. ಉಗ್ರರು ಯಾವ ಸಮಯದಲ್ಲೂ ಬಾಂಬ್ ಸ್ಫೋಟಿಸುವ ಭಯ ಎದುರಾಗಿದೆ. ಹಾಗಾದರೆ ಪಾಕಿಸ್ತಾನದಲ್ಲಿ ಆಗ್ತಾ ಇರೋದು ಏನು? ಉಗ್ರರ ದಾಳಿ ಬಗ್ಗೆ ಮತ್ತೆ ಭಯ ಏಕೆ ಶುರುವಾಗಿದೆ?
ಉಗ್ರರ ಸ್ವರ್ಗ ಪಾಕಿಸ್ತಾನದ ಬಗ್ಗೆ & ಅಲ್ಲಿನ ರಾಜಕೀಯ ವ್ಯವಸ್ಥೆ ಕುರಿತು ಬಿಡಿಸಿ ಹೇಳುವ ಅಗತ್ಯತೆ ಇಲ್ಲ. ಯಾಕಂದ್ರೆ ಪಾಕಿಸ್ತಾನದ ಬಗ್ಗೆ ಇಡೀ ಜಗತ್ತಿಗೆ ಸತ್ಯ ಗೊತ್ತು. ದುಡ್ಡಿಗಾಗಿ ಅಲ್ಲಿನ ರಾಜಕಾರಣಿಗಳು ಭೀಕರ ಭ್ರಷ್ಟಾಚಾರ ಮಾಡಿ ಜೈಲು ಸೇರುತ್ತಾರೆ, ಇಲ್ಲ ದೇಶವನ್ನ ಬಿಟ್ಟು ಓಡಿ ಹೋಗುತ್ತಾರೆ. ಇದೇ ರೀತಿ ಭ್ರಷ್ಟಾಚಾರ ಆರೋಪದ ಅಡಿ ಜೈಲು ಸೇರಿದ್ದು, ಬಳಿಕ ದೇಶ ಬಿಟ್ಟು ಎಸ್ಕೇಪ್ ಆಗಿದ್ದ ಪಾಕ್‌ನ ಮಾಜಿ ಪ್ರಧಾನಿ ರೀ ಎಂಟ್ರಿ ಕೊಟ್ಟಿದ್ದಾರೆ.

ಭ್ರಷ್ಟಾಚಾರ ಆರೋಪಿಗೆ ಅದ್ಧೂರಿ ಸ್ವಾಗತ!
ಯೆಸ್ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಬರೋಬ್ಬರಿ 4 ವರ್ಷದ ಬಳಿಕ ಇಂದು ಪಾಕ್‌ಗೆ ಮರಳಿದ್ದಾರೆ. ಪನಾಮಾ ಪೇಪರ್ಸ್ ಹಗರಣ ಹಿನ್ನೆಲೆ ದೇಶ ಬಿಟ್ಟು ಹೋಗಿದ್ದ ಪಾಕ್ ಮಾಜಿ ಪ್ರಧಾನಿ ನವಾಜ್ ಕಂಬ್ಯಾಕ್ ಮಾಡಿದ್ದು, 4 ವರ್ಷದಿಂದ ಲಂಡನ್ ಅಜ್ಞಾತವಾಸದಲ್ಲಿ ಇದ್ದ ನವಾಜ್‌ಗೆ ತವರಿನ ದರ್ಶನವಾಗಿದೆ. 73 ವರ್ಷ ವಯಸ್ಸಿನ ಪಾಕಿಸ್ತಾನ ಮಾಜಿ ಪಿಎಂ, ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಪಕ್ಷದ ಮುಖ್ಯಸ್ಥನೂ ಹೌದು. ಈಗ 4ನೇ ಬಾರಿಗೆ ಪಾಕ್ ಸಂಸತ್ ಅಧಿಕಾರ ಗಳಿಸುವ ಪ್ರಯತ್ನದಲ್ಲಿ ನವಾಜ್ ಪಾಕಿಸ್ತಾನಕ್ಕೆ ಮರಳಿದ್ದಾರೆ. ಪಾಕಿಸ್ತಾನ ಏರ್ಪೋರ್ಟ್‌ಗೆ ದುಬೈನಿಂದ ಷರೀಫ್ ಖಾಸಗಿ ವಿಮಾನದಲ್ಲಿ ಬಂದಿಳಿದಿದ್ದಾರೆ.
#WATCH | Former PM and Pakistan Muslim League-Nawaz (PML-N) supremo Nawaz Sharif returned to Islamabad after four years.
— ANI (@ANI) October 21, 2023
(Earlier visuals) pic.twitter.com/lWhGVof7hN
ನವಾಜ್ ಜೈಲಿಗೆ ಹೋಗಿದ್ದು ಏಕೆ?
ಇಮ್ರಾನ್ ಅಧಿಕಾರಕ್ಕೆ ಬರುತ್ತಿದ್ದಂತೆ, ನವಾಜ್ ಷರೀಫ್‌ಗೆ ಜೈಲೂಟ ಫಿಕ್ಸ್ ಆಗಿತ್ತು. 71 ವರ್ಷ ವಯಸ್ಸಿನ ನವಾಜ್ ಷರೀಫ್ 2018ರಲ್ಲಿ ಪಾಕಿಸ್ತಾನದಲ್ಲಿ 2 ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದರು. ಜೈಲು ಸೇರುತ್ತಿದ್ದಂತೆ ಆರೋಗ್ಯದಲ್ಲಿ ಏರುಪೇರಾಗಿದೆ ಅಂತಾ ಹೇಳಿದ್ದರು. ಲಾಹೋರ್ ಹೈಕೋರ್ಟ್ ಅನುಮತಿ ಪಡೆದು, 2019ರಿಂದ ಚಿಕಿತ್ಸೆಗಾಗಿ ಲಂಡನ್‌ನಲ್ಲಿ ವಾಸ ಮಾಡ್ತಿದ್ದೀನಿ ಅಂತಾ ನವಾಜ್ ಷರೀಫ್ ಹೇಳಿದ್ದರು. ಈಗ ಪಾಕಿಸ್ತಾನಕ್ಕೆ ವಾಪಸ್ ಬಂದಿದ್ದು, ಮುಂಬರುವ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ಭಾರಿ ಕುತೂಹಲ ಕೆರಳಿಸಿದೆ.
#WATCH | Supporters of Former PM and Pakistan Muslim League-Nawaz (PML-N) supremo Nawaz Sharif gather at Minar-e-Pakistan in Lahore ahead of his arrival here.
— ANI (@ANI) October 21, 2023
Nawaz Sharif returned to Pakistan after four years. pic.twitter.com/RwlDJUVIjN
ಪಾಕಿಸ್ತಾನ ಲೋಕಸಭೆ ಒಟ್ಟು ಸದಸ್ಯ ಬಲ 342, ಭಾರತದ ರೀತಿ ಪಾಕಿಸ್ತಾನದಲ್ಲೂ 5 ವರ್ಷ ಅಧಿಕಾರವಧಿ ಇರುತ್ತದೆ. ಈ ಅವಧಿಯು ಆಗಸ್ಟ್ 12ಕ್ಕೆ ಕೊನೆಯಾಗುತ್ತಿತ್ತು. ಆದರೆ ಈ ಅವಧಿ ಪೂರ್ಣವಾಗುವ ಮೊದಲು ಅಂದರೆ ಆಗಸ್ಟ್ 9ಕ್ಕೆ ಪಾಕಿಸ್ತಾನದ ಸಂಸತ್ ವಿಸರ್ಜನೆಗೆ ಶಿಫಾರಸು ಕಳುಹಿಸಿದ್ದರು ಪಾಕ್ ಪ್ರಧಾನಿ. ಹೀಗಾಗಿ ಪ್ರಧಾನಿ ಶಿಫಾರಸು ಹಿನ್ನೆಲೆ ಪಾಕಿಸ್ತಾನ ಸಂಸತ್ತನ್ನು ವಿಸರ್ಜನೆ ಮಾಡಲಾಗಿತ್ತು. ಕೆಲತಿಂಗಳ ಹಿಂದೆ ಚುನಾವಣೆಗೂ ಡೇಟ್ ಫೈನಲ್ ಮಾಡಿದ್ದು, 2024ರ ಜನವರಿ ಕೊನೆಯ ವಾರದಲ್ಲಿ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಇನ್ನು ಈ ಬಾರಿ ಗೆದ್ದು ಬೀಗಲು ನವಾಜ್ ಷರೀಫ್ ಭರ್ಜರಿ ತಂತ್ರ ರೂಪಿಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications