ಪಾಕಿಸ್ತಾನದಲ್ಲಿ ಒಂದೇ ದಿನ 1841 ಕೇಸ್, 36 ಸಾವು

ಇಸ್ಲಾಮಾಬಾದ್, ಮೇ 19: ಪಾಕಿಸ್ತಾನದಲ್ಲಿ ಒಂದೇ ದಿನ 1841 ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, 36 ಮಂದಿ ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈಗ ಪಾಕಿಸ್ತಾನದಲ್ಲಿ ಒಟ್ಟು ಕೊವಿಡ್ ಸೋಂಕಿತರ ಸಂಖ್ಯೆ 44,000 ದಾಟಿದ್ದು, 939 ಜನರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಈವರೆಗೆ ಒಟ್ಟು 12,489 ರೋಗಿಗಳು ವೈರಸ್‌ನಿಂದ ಚೇತರಿಸಿಕೊಂಡಿದ್ದರೆ. ಎಂದು ಮಂಗಳವಾರ ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ ನಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಈವರೆಗೆ ಸಿಂಧ್‌ನಲ್ಲಿ 17,241, ಪಂಜಾಬ್‌ನಲ್ಲಿ 15,976, ಖೈಬರ್‌ನಲ್ಲಿ 6,230, ಬಲೂಚಿಸ್ತಾನದಲ್ಲಿ 2,820, ಇಸ್ಲಾಮಾಬಾದ್‌ನಲ್ಲಿ 1,034, ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ 550 ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 115 ಪ್ರಕರಣಗಳು ಪತ್ತೆಯಾಗಿವೆ.

Pakistan Reported 1841 New Cases Of COVID19

ಕಳೆದ 24 ಗಂಟೆಗಳಲ್ಲಿ 12,957 ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಒಟ್ಟಾರೆ ಇದುವರೆಗೂ 400,292 ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಲಾಕ್‌ಡೌನ್‌ ಕಾರಣದಿಂದ ಧಾರ್ಮಿಕ ಸಭೆಗಳು, ಪ್ರಾರ್ಥನೆಗೆ ನಿರ್ಬಂಧ ಹೇರಲಾಗಿತ್ತು. ಇದೀಗ, ರಂಜಾನ್ ಹಬ್ಬದ ಹಿನ್ನೆಲೆ ಪಾಕಿಸ್ತಾನದಲ್ಲಿ ಪ್ರಾರ್ಥನೆ ಮಾಡಲು ಷರತ್ತು ವಿಧಿಸಿ ಅವಕಾಶ ಮಾಡಿಕೊಡಲಾಗಿದೆ. ಪ್ರಾರ್ಥನಾ ಸಮಯದಲ್ಲಿ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದು ಸರ್ಕಾರ ಸೂಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+