ವಿಡಿಯೋ ವೈರಲ್: ಹೂಡಿಕೆದಾರರನ್ನು ಸೆಳೆಯಲು ಬೆಲ್ಲಿ ಡಾನ್ಸರ್ಸ್ ಮೊರೆಹೋದ ಪಾಕಿಸ್ತಾನ!
Recommended Video
ಇಸ್ಲಾಮಾಬಾದ್, ಸೆಪ್ಟೆಂಬರ್ 09: ಹೂಡಿಕೆದಾರರನ್ನು ಸೆಳೆಯುವ ಸಲುವಾಗಿ ಅಜೆರ್ ಬೈಜಾನ್ ದೇಶದ ರಾಜಧಾನಿ ಬಾಕು ಎಂಬಲ್ಲಿ ಪಾಕಿಸ್ತಾನದ ಸರ್ಹದ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಯೋಜಿಸಿದ್ದ ಹೂಡಿಕೆದಾರರ ಸಮಾವೇಶ ಇದೀಗ ನಗೆಪಾಟಲಾಗಿದೆ.
ಈ ಸಮಾವೇಶದ ಸಂದರ್ಭದಲ್ಲಿ ಬೆಲ್ಲಿ ಡಾನ್ಸರ್ ಗಳಿಂದ ನೃತ್ಯ ಪ್ರದರ್ಶನದ ಕಾರ್ಯಕ್ರಮವನ್ನು ಪಾಕಿಸ್ತಾನ ಆಯೋಜಿಸಿದ್ದು ಪಾಕಿಸ್ತಾನಿಯರಲ್ಲೇ ಬೇಸರವನ್ನುಂಟು ಮಾಡಿದೆ.
ಈ ಡಾನ್ಸ್ ನ ಸುಮಾರು 1.19 ನಿಮಿಷಗಳ ವಿಡಿಯೋ ಕ್ಲಿಪ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೂಡಿಕೆದಾರರನ್ನು ಹಾಗೆಯೇ ಸೆಳೆಯುವ ಸಾಮರ್ಥ್ಯವಿಲ್ಲದ ಪಾಕಿಸ್ತಾನ ಇಂಥ ದಾರಿ ಹಿಡಿದಿದೆ ಎಂದು ಟ್ವಿಟ್ಟಿಗರು ಪಾಕಿಸ್ತಾನವನ್ನು ಲೇವಡಿ ಮಾಡಿದ್ದಾರೆ.
|
ಜನರಲ್ ಡಾಕ್ಟರೈಟ್ ಚೀಫ್ ಎಕನಾಮಿಸ್ಟ್
"ಜನರಲ್ ಡಾಕ್ಟರೈಟ್ ಚೀಫ್ ಎಕನಾಮಿಸ್ಟ್ ಪಾಕಿಸ್ತಾನಕ್ಕೆ ಹೂಡಿಕೆದಾರರನ್ನು ಸೆಳೆಯುವ ಸಲುವಾಗಿ ಪ್ರಮೋಶನ್ ಗೆಂದು ಅಜೆರ್ ಬೈಜಾನ್ ನ ಬಾಕುವಿನಲ್ಲಿ ನಡೆಸಿದ ಸಮಾವೇಶ ಇದು" ಎಂದು ಬುಖಾರಿ ಎಂಬುವವರು ವಿಡಿಯೋ ಸಮೇತ ಟ್ವೀಟ್ ಮಾಡಿದ್ದಾರೆ.

ಇಮ್ರಾನ್ ಖಾನ್ ಜೇಬಿಗೆ ಒಂದು ಡಾಲರ್!
"ರಷ್ಯನ್ ಡಾನ್ಸರ್ ಗಳ ಬೆಲ್ಲಿ ನೃತ್ಯದ ನಂತರ ಇಮ್ರಾನ್ ಖಾನ್ ಮತ್ತು ಶಾ ಮೊಹಮ್ಮದ್ ಖುರೇಶಿ ಅವರೂ ನೃತ್ಯ ಪ್ರದರ್ಶನ ನೀಡಿದ್ದಾರೆ. ಅದನ್ನು ನೋಡಿ ಸಂತೃಪ್ತರಾದ ಹೂಡಿಕೆದಾರರು ಅವರ ಜೇಬಿಗೆ 1 ಡಾಲರ್ ಹಾಕಿದ್ದಾರೆ" ಎಂದು ಪಾಕ್ ಬೆಗ್ಗರ್ ಎಂಬ ಟ್ವೀಟ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಇದು ಹೊಸ ಪಾಕಿಸ್ತಾನವೇ?
ಪ್ಯಾಟ್ರಿಯಾಟಿಕ್ ಇಂಡಿಯನ್ ಎಂಬ ಟ್ವಿಟ್ಟರ್ ಖಾತೆಯಿಂದ ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದು, "ಇದು ಭಿಕ್ಷುಕ ಇಮ್ರಾನ್ ಖಾನ್ ಅವರ ಹೊಸ ಪಾಕಿಸ್ತಾನವೇ? ಒಳ್ಳೆಯದು! ಒಂದು ಭಯೋತ್ಪಾದಕ, ಭ್ರಷ್ಟರಾಷ್ಟ್ರದಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ" ಎಂದಿದ್ದಾರೆ.

ಅವರ ಬಳಿ ಏನೂ ಇಲ್ಲ
ಬೆಲ್ಲಿ ಡಾನ್ಸ್ ಮಾಡಿ ಪ್ರಮೋಟ್ ಮಾಡುವುದನ್ನು ಬಿಟ್ಟರೆ ಹೂಡಿಕೆದಾರರನ್ನು ಸೆಳೆಯಲು ಪಾಕಿಸ್ತಾನದ ಬಳಿ ಏನಿದೆ? ಎಂದು ಪ್ರಶ್ನಿಸಿದ್ದಾರೆ ಓಮರ್ ಬಲೋಚ್!












Click it and Unblock the Notifications