America Bus Accident: ಅಮೆರಿಕಾದಲ್ಲಿ ಭೀಕರ ಬಸ್‌ ಅಪಘಾತ; 30ಕ್ಕೂ ಹೆಚ್ಚು ಮಂದಿ ಸಾವು

America Bus Accident: ಬಸ್ ಅಪಘಾತ ಸಂಭವಿಸಿ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ಅಮೆರಿಕದಲ್ಲಿ ಇಂದು (ಫೆಬ್ರವರಿ 10) ನಡೆದಿದೆ.

ಅಮೆರಿಕದ ಗ್ವಾಟೆಮಾಲಾ ನಗರದ ಹೊರವಲಯದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ನಗರದ ಅಗ್ನಿಶಾಮಕ ಇಲಾಖೆಯ ವಕ್ತಾರರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Over 30 Death due to Bus Accident in U S

75 ಜನರಿದ್ದ ಬಸ್‌ ಕಣಿವೆಗೆ ಉರುಳಿ ಬಿದ್ದಿದ್ದು, ಪರಿಣಾಮ ದುರಂತದಲ್ಲಿ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರೆ, ಇನ್ನೂ ಕೆಲವರು ಬಸ್‌ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಎನ್ನಲಾಗುತ್ತಿದೆ. ಈಗಾಗಲೇ 30 ಶವಗಳನ್ನು ಹೊರತೆಗೆಯಲಾಗಿದೆ. ಒಳಗೆ ಸಿಲುಕಿರುವವರನ್ನು ರಕ್ಷಿಸಲು ಅಗ್ನಿಶಾಮಕ ದಳ ಪ್ರಯತ್ನಿಸುತ್ತಿದೆ ಎಂದು ಅಗ್ನಿಶಾಮಕ ದಳ ವಕ್ತಾರ ಮೇನರ್ ರುವಾನೋ ಮಾಹಿತಿ ನೀಡಿದ್ದಾರೆ.

ನಗರದೊಳಗೆ ಮತ್ತು ಹೊರಗೆ ಜನನಿಬಿಡ ಮಾರ್ಗದಲ್ಲಿ ಬಸ್ ಚಲಿಸುತ್ತಿದ್ದ ವೇಳೆ ರಸ್ತೆ ಮತ್ತು ತೊರೆಯ ಮೇಲೆ ಹಾದುಹೋಗುವ ಹೆದ್ದಾರಿ ಸೇತುವೆಯಾದ ಪುಯೆಂಟೆ ಬೆಲಿಸ್‌ನಿಂದ ಸುಮಾರು 20 ಮೀಟರ್ ಅಂದರೆ 65 ಅಡಿ ದೂರದಲ್ಲಿ ಬಸ್‌ ಕಂದಕಕ್ಕೆ ಉರುಳಿ ಬಿದ್ದಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+