ಕೊರೊನಾ ವೈರಸ್ ಜಾಗತಿಕ ಹವಾಮಾನದ ಮೇಲೆ ಏನು ಪರಿಣಾಮ ಬೀರಲಿದೆ?
ನವದೆಹಲಿ, ಏಪ್ರಿಲ್ 15: ಕೊವಿಡ್ 19 ಸಾಂಕ್ರಾಮಿಕ ರೋಗ ಇಡೀ ವಿಶ್ವವನ್ನೇ ಆವರಿಸಿದೆ. ಹಾಗಾದರೆ ಕೇವಲ ಜನರ ಮೇಲೆ ಮಾತ್ರವಲ್ಲ ಕೊರೊನಾ ವೈರಸ್ ಜಾಗತಿಕ ಹವಾಮಾನದ ಮೇಲೆ ಯಾವ ರೀತಿ ಪರಿಣಾಮವನ್ನುಂಟು ಮಾಡಿದೆ.
ಆದರೆ ಜನರ ಮೇಲೆ ದುಷ್ಪರಿಣಾಮ ಉಂಟು ಮಾಡಿರುವ ಕೊರೊನಾ ವೈರಸ್ ವಿಶ್ವದ ಹವಾಮಾನದ ಮೇಲೆ ಉತ್ತಮ ಪರಿಣಾಮವನ್ನೇ ಬೀರಿದೆ.
ಸದಾ ವಾಹನಗಳಿಂದ ಗಿಜಿಗುಡುತ್ತಾ, ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಸೂಸುತ್ತಿದ್ದ ದೇಶದ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯ ಕಡಿಮೆಯಾಗಿ ನೀಲಿ ಆಕಾಶ ಕಾಣಿಸುತ್ತಿದೆ. ಅಷ್ಟೇ ಅಲ್ಲದೆ ಮೊದಲ ಬಾರಿಗೆ ಹಿಮಾಲಯ ಪರ್ವತವೂ ಗೋಚರಿಸಿದೆ.

ಬೆಳಗ್ಗೆ ಏಳುತ್ತಿದ್ದಂತೆ ಸಾಕಷ್ಟು ಪಕ್ಷಿಗಳ ಕಲರವ ಕಿವಿಗೆ ಬೀಳುತ್ತೆ, ಹಿಂದೆಂದೂ ಕೇಳಿರದ ಪಕ್ಷಿಗಳ ಧ್ವನಿ ಕೇಳುತ್ತಿದೆ. ತಂಪಾದ ಗಾಳಿಯ ಅನುಭವವಾಗುತ್ತಿದೆ.
ಇನ್ನು ಎಲ್ಲಾ ನದಿಗಳು ತಿಳಿಯಾಗಿ ಮೀನುಗಳ ಚಲನೆ ಕಾಣಿಸುತ್ತಿದೆ. ಏಕಾಏಕಿ ಬಂದಿರುವ ಕೊರೊನಾ ಪಿಡುಗಿನಿಂದ ಗಾಳಿಯ ಗುಣಮಟ್ಟ ಉತ್ತಮವಾಗಿದೆ. ಹಾಗೂ ಅದರ ಪರಿಣಾಮ ಬೇಗ ಗೋಚರಿಸಿದೆ.
ಆದರೆ ಮುಂದಿನ ವರ್ಷವೂ ಇದೇ ರೀತಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಲಾಕ್‌ಡೌನ್ ಮುಗಿದು ಮತ್ತೆ ವಾಹನಗಳ ಸಂಚಾರ, ಕಾರ್ಖಾನಗಳು ಆರಂಭವಾದರೆ ಮೊದಲ ಸ್ಥಿತಿಗೆ ಬಂದು ನಿಲ್ಲುತ್ತೇವೆ.
ಆದರೆ ಕೊವಿಡ್ 19 ಸಾಂಕ್ರಾಮಿಕ ರೋಗ ಮನುಷ್ಯ ಪ್ರಕೃತಿಯ ಜೊತೆ ಬದುಕುವುದು ಹೇಗೆ ಎಂದು ಹೇಳಿಕೊಟ್ಟಿದೆ ಎಂದರೆ ತಪ್ಪಾಗಲಾರದು.












Click it and Unblock the Notifications