ಶಾಕಿಂಗ್: ಉತ್ತರ ಕೊರಿಯಾದ ಸುಪ್ರೀಂ ಲೀಡರ್ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಗಂಭೀರ.?

ಪ್ಯೊಂಗ್ಯಾಂಗ್, ಏಪ್ರಿಲ್ 21: ಕ್ಷಿಪಣಿ ಪ್ರಯೋಗ ಮತ್ತು ಅಣ್ವಸ್ತ್ರ ವಿಚಾರಗಳಿಂದಲೇ ಸದಾ ಸುದ್ದಿ ಮಾಡುವವರು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್. ಅತ್ತ ಇಡೀ ವಿಶ್ವ ಕೊರೊನಾ ವೈರಸ್ ನಿಂದ ಹೆಣಗಾಡುತ್ತಿದ್ದರೆ, ಇತ್ತ ಉತ್ತರ ಕೊರಿಯಾದಲ್ಲಿ ಸಾಲು ಸಾಲು ಕ್ಷಿಪಣಿ ಪ್ರಯೋಗ ನಡೆಸಿ ಇತ್ತೀಚೆಗೆಷ್ಟೇ ಕಿಮ್ ಜಾಂಗ್ ಉನ್ ನಡುಕ ಹುಟ್ಟಿಸಿದ್ದರು.

Recommended Video

      ಅಮೇರಿಕಾದಲ್ಲಿರೋ ಕನ್ನಡತಿ ಭಾರತೀಯರಿಗೆ ಹೇಳಿದ್ದೇನು? | Girl From America Message for Kannadigas | Stay Home

      ಆದ್ರೀಗ, ಕಿಮ್ ಜಾಂಗ್ ಉನ್ ಬಗ್ಗೆ ಬೇರೆಯದ್ದೇ ವಿಷಯ ಕೇಳಿಬರುತ್ತಿದೆ. ಉತ್ತರ ಕೊರಿಯಾದ ಈ ಸುಪ್ರೀಂ ಲೀಡರ್ ಅನಾರೋಗ್ಯಕ್ಕೀಡಾಗಿದ್ದಾರಂತೆ. ಶಸ್ತ್ರಚಿಕಿತ್ಸೆ ಬಳಿಕ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಅಮೇರಿಕಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿಯ ಬಗ್ಗೆ ಅಮೇರಿಕಾ ಗುಪ್ತಚರ ಇಲಾಖೆ ಮಾಹಿತಿ ಕಲೆಹಾಕುತ್ತಿದೆ.

      ಅಜ್ಜನ ಜನ್ಮದಿನೋತ್ಸವಕ್ಕೆ ಚಕ್ಕರ್

      ಅಜ್ಜನ ಜನ್ಮದಿನೋತ್ಸವಕ್ಕೆ ಚಕ್ಕರ್

      ಏಪ್ರಿಲ್ 15 ರಂದು ನಡೆದ ತಮ್ಮ ಅಜ್ಜನ ಜನ್ಮದಿನೋತ್ಸವದ ಆಚರಣೆಯಲ್ಲಿ ಕಿಮ್ ಜಾಂಗ್ ಉನ್ ಪಾಲ್ಗೊಂಡಿರಲಿಲ್ಲ. ಆಗಲೇ, ಕಿಮ್ ಜಾಂಗ್ ಉನ್ ಅನಾರೋಗ್ಯದ ಬಗ್ಗೆ ಊಹಾಪೋಹ ಹುಟ್ಟಿಕೊಂಡಿತ್ತು. ಅದಕ್ಕೂ ನಾಲ್ಕು ದಿನಗಳ ಹಿಂದೆಯಷ್ಟೇ ಸರ್ಕಾರಿ ಸಭೆಯಲ್ಲಿ ಕಿಮ್ ಜಾಂಗ್ ಉನ್ ಹಾಜರ್ ಆಗಿದ್ದರು.

      ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಿಮ್ ಜಾಂಗ್ ಉನ್

      ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಿಮ್ ಜಾಂಗ್ ಉನ್

      ಏಪ್ರಿಲ್ 12 ರಂದು ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಕಿಮ್ ಜಾಂಗ್ ಉನ್ ಒಳಗಾಗಿದ್ದರು ಎಂದು ಡೈಲಿ ಎನ್.ಕೆ ಆನ್ ಲೈನ್ ಪತ್ರಿಕೆ ವರದಿ ಮಾಡಿದೆ. ಅತಿಯಾದ ಧೂಮಪಾನ ಮತ್ತು ಬೊಜ್ಜಿನಿಂದಾಗಿ ಅವರಿಗೆ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಸದ್ಯ ಹ್ಯಾಂಗ್ ಸಾನ್ ಕೌಂಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

      ಖಚಿತ ಮಾಹಿತಿ ಇಲ್ಲ

      ಖಚಿತ ಮಾಹಿತಿ ಇಲ್ಲ

      ಕಿಮ್ ಜಾಂಗ್ ಉನ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಪರಿಣಾಮ, ಏಪ್ರಿಲ್ 19 ರಂದು ಕೆಲ ವೈದ್ಯಕೀಯ ಸಿಬ್ಬಂದಿ ಪ್ಯೊಂಗ್ಯಾಂಗ್ ಗೆ ವಾಪಸ್ ತೆರಳಿದ್ದಾರೆ ಎಂದೂ ಡೈಲಿ ಎನ್.ಕೆ ವರದಿ ಮಾಡಿದೆ. ಆದರೆ ಈ ಬಗ್ಗೆ ರಾಷ್ಟ್ರೀಯ ಭದ್ರತಾ ಮಂಡಳಿ ಆಗಲಿ ಅಥವಾ ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿಯಾಗಲಿ ಖಚಿತ ಪಡಿಸಿಲ್ಲ.

      ಉತ್ತರ ಕೊರಿಯಾದಲ್ಲಿ ಕಿಮ್ ಜಾಂಗ್ ಉನ್ ಸಾಕ್ಷಾತ್ 'ದೇವರು'.!

      ಉತ್ತರ ಕೊರಿಯಾದಲ್ಲಿ ಕಿಮ್ ಜಾಂಗ್ ಉನ್ ಸಾಕ್ಷಾತ್ 'ದೇವರು'.!

      ಅಸಲಿಗೆ, ಉತ್ತರ ಕೊರಿಯಾದಿಂದ ಗುಪ್ತಚರ ಮಾಹಿತಿ ಸಂಗ್ರಹಿಸುವುದು ಅಷ್ಟು ಸುಲಭ ಅಲ್ಲ. ಇದು ಅಮೇರಿಕಾದ ಗುಪ್ತಚರಕ್ಕೆ ಅತ್ಯಂತ ಸವಾಲಿನ ಕೆಲಸ. ತಮ್ಮ ಸರ್ವಾಧಿಕಾರಿಯನ್ನು ಸಾಕ್ಷಾತ್ ದೇವರಂತೆ ಪರಿಗಣಿಸುವ ಉತ್ತರ ಕೊರಿಯಾದಲ್ಲಿ, ಕಿಮ್ ಜಾಂಗ್ ಉನ್ ಕುರಿತಾದ ಯಾವುದೇ ಮಾಹಿತಿಯನ್ನು ಯಾರೂ ಬಿಟ್ಟುಕೊಡುವುದಿಲ್ಲ. ಉತ್ತರ ಕೊರಿಯಾದಲ್ಲಿ ಮಾಧ್ಯಮಗಳಿಗೂ ಸ್ವಾತಂತ್ರ್ಯ ಇಲ್ಲ. ಹೀಗಾಗಿ, ಸರ್ಕಾರಿ ಸಭೆ-ಸಮಾರಂಭಗಳಲ್ಲಿ ಕಿಮ್ ಜಾಂಗ್ ಉನ್ ಗೈರಾದಾಗ ಅವರ ಅನಾರೋಗ್ಯದ ಬಗ್ಗೆ ಅನುಮಾನ ಉಂಟಾಗುವುದು ಸಹಜ.

      ಅನಾರೋಗ್ಯದ ಬಗ್ಗೆ ಗುಲ್ಲು

      ಅನಾರೋಗ್ಯದ ಬಗ್ಗೆ ಗುಲ್ಲು

      ಉತ್ತರ ಕೊರಿಯಾದ ಮಾಧ್ಯಮಗಳ ಮುಂದೆ ಕಿಮ್ ಜಾಂಗ್ ಉನ್ ಪ್ರತ್ಯಕ್ಷವಾಗಿದ್ದು ಏಪ್ರಿಲ್ 11 ರಂದು. ಏಪ್ರಿಲ್ 15 ರಂದು ಅವರ ಅಜ್ಜ ಕಿಮ್ ಸಂಗ್ ಜನ್ಮದಿನಾಚರಣೆಯಿದ್ದರೂ, ಕಿಂಗ್ ಜಾಂಗ್ ಉನ್ ಕಾಣಿಸಿಕೊಳ್ಳಲಿಲ್ಲ. ಇದಕ್ಕೆ ಕಾರಣ ಅನಾರೋಗ್ಯವೇ ಇರಬಹುದು ಎಂಬುದು ಹಲವರ ಅಭಿಪ್ರಾಯ. 2014 ರಲ್ಲೂ ತಿಂಗಳಾನುಗಟ್ಟಲೆ ಕಿಮ್ ಜಾಂಗ್ ಉನ್ ನಾಪತ್ತೆಯಾಗಿದ್ದರು. ಆಗಲೂ, ಅವರ ಆರೋಗ್ಯದ ಬಗ್ಗೆ ಗುಲ್ಲೆದ್ದಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+