Nepal Floods: ನೇಪಾಳದಲ್ಲಿ ಭೀಕರ ಜಲಪ್ರಳಯ: ಪ್ರವಾಹದಲ್ಲಿ ಕೈಲಾಶ ಯಾತ್ರೆಗೆ ತೆರಳಿದ್ದ 105ಕ್ಕೂ ಹೆಚ್ಚು ಭಾರತೀಯರು ನಾಪತ್ತೆ!

Nepal Floods: ನೇಪಾಳದಲ್ಲಿ ಭೀಕರ ಜಲಪ್ರಳಯ ಸಂಭವಿಸಿದ್ದು, ಟಿಬೆಟ್‌ನಿಂದ ಹರಿದುಬಂದ ಭೋಟೆಕೋಶಿ ನದಿ ಪ್ರವಾಹಕ್ಕೆ ನೇಪಾಳದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ನೇಪಾಳದಲ್ಲಿ ಸಂಭವಿಸಿದ ಭಾರೀ ಪ್ರವಾಹದಲ್ಲಿ 105 ಜನ ಭಾರತೀಯರು ಸೇರಿದಂತೆ 384 ಪ್ರವಾಸಿಗರು ನಾಪತ್ತೆಯಾಗಿದ್ದಾರೆ. ಅಲ್ಲದೆ ಈ ಪ್ರವಾಹದಲ್ಲಿ ಇಲ್ಲಿಯ ವರೆಗೆ 16 ಜನ ಮೃತಪಟ್ಟಿದ್ದು, ಹಲವರು ಕಾಣೆಯಾಗಿದ್ದಾರೆ. ಅಲ್ಲದೆ, ಹಲವು ಜಲವಿದ್ಯುತ್ ಯೋಜನೆಗಳು ಮತ್ತು ರಸ್ತೆಗಳು ಈ ಪ್ರವಾಹದಲ್ಲಿ ನಾಶವಾಗಿವೆ.

ನೇಪಾಳ ಪ್ರವಾಸೋದ್ಯಮ ಮಂಡಳಿ ಬಿಡುಗಡೆ ಮಾಡಿದ ಪ್ರಾಥಮಿಕ ಪಟ್ಟಿಯ ಪ್ರಕಾರ, ಆಗಸ್ಟ್‌ 26ರ ಬುಧವಾರ ನೇಪಾಳದ ರಸುವಾ ಜಿಲ್ಲೆಯಲ್ಲಿ ಹಠಾತ್ ಪ್ರವಾಹ ಉಂಟಾದ ನಂತರ 384 ಪ್ರಯಾಣಿಕರು ಕಾಣೆಯಾಗಿದ್ದಾರೆ. ಪ್ರವಾಸಿಗರು ಎಲ್ಲಿದ್ದಾರೆ ಎನ್ನುವುದು ಇನ್ನೂ ಪತ್ತೆ ಆಗಿಲ್ಲ, ಈ ರೀತಿ ನಾಪತ್ತೆ ಆಗಿರುವ ಪ್ರವಾಸಿಗರಲ್ಲಿ ಭಾರತದ 105 ಜನರು ಸಹ ಇದ್ದರು. ಕಾಣೆಯಾದವರ ಪಟ್ಟಿಯಲ್ಲಿ 291 ವಿದೇಶಿ ಪ್ರಜೆಗಳು ಮತ್ತು 93 ನೇಪಾಳಿ ಪ್ರಜೆಗಳು ಸಹ ಸೇರಿದ್ದಾರೆ. ವಿದೇಶಿ ಪ್ರಯಾಣಿಕರಲ್ಲಿ ಭಾರತೀಯರು ಹೆಚ್ಚು ಇದ್ದಾರೆ. ಅಲ್ಲದೆ ಇವರಲ್ಲಿ 37 ಜನರನ್ನು ಅನಿವಾಸಿ ಭಾರತೀಯರು ಎಂದು ಗುರುತಿಸಲಾಗಿದೆ. ಕಾಣೆಯಾದವರನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಲಾಗಿದೆ.

Nepal Floods

ನೇಪಾಳದ ಪ್ರವಾಸೋದ್ಯಮ ಮಂಡಳಿಯು ಅಂಕಿಅಂಶಗಳು ಪ್ರಾಥಮಿಕವಾಗಿದ್ದು, ಪಟ್ಟಿ ಮಾಡಲಾದವರ ಸ್ಥಳ ಮತ್ತು ಸುರಕ್ಷತಾ ಸ್ಥಿತಿಯನ್ನು ಇನ್ನೂ ಪರಿಶೀಲನಾ ಹಂತದಲ್ಲಿದೆ ಎಂದೂ ಹೇಳಲಾಗಿದೆ. ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಪ್ರಯಾಣಿಕರು ಮತ್ತು ಅವರ ಕುಟುಂಬದವರು ಆತಂಕಕ್ಕೆ ಒಳಗಾಗಬಾರದು ಎಂದೂ ಹೇಳಲಾಗಿದೆ.

Nepal Floods: ನೇಪಾಳದಲ್ಲಿ ಸಂಭವಿಸಿದ್ದೇನು ?

ನೇಪಾಳದ ಟಿಬೆಟ್‌ನ ಗಡಿ ಭಾಗದಲ್ಲಿ ರಸುವಾದಲ್ಲಿ ಭೋಟೆ ಕೋಶಿ ನದಿಯ ಮೂಲಕ ಬೆಳಿಗ್ಗೆ 9 ಗಂಟೆ ಸುಮಾರಿಗೆ ಹಠಾತ್ ಪ್ರವಾಹ / ಜಲಪ್ರಳಯ ಸಂಭವಿಸಿದೆ. ಈ ಪ್ರವಾಹವು ನದಿ ಹರಿಯುವ ಪ್ರದೇಶದ ಉದ್ದಕ್ಕೂ ವ್ಯಾಪಕ ಹಾನಿ ಸಂಭವಿಸಿದೆ. ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗಳು ಮುಂದುವರಿದಿದ್ದು, ಹಲವು ಜಿಲ್ಲೆಗಳಲ್ಲಿ ಕಟ್ಟೆಚ್ಚರ ಇರಿಸಲಾಗಿದೆ. ನೇಪಾಳ ಪ್ರವಾಸೋದ್ಯಮ ಮಂಡಳಿ, ಪೊಲೀಸರು ಹಾಗೂ ಇತರ ಪ್ರವಾಸೋದ್ಯಮ ಪ್ರಯಾಣ ಸಂಸ್ಥೆಗಳು, ಮಾರ್ಗದರ್ಶಕರು, ಸ್ಥಳೀಯ ಅಧಿಕಾರಿಗಳು ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಪಟ್ಟಿ ಮಾಡಲಾದವರ ಸ್ಥಳವನ್ನು ಗುರುತಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ತೀವ್ರ ಪ್ರವಾಹಕ್ಕೆ ನಲುಗಿದ ನೇಪಾಳ

ಇನ್ನು ನೇಪಾಳದಲ್ಲಿ ಸಂಭವಿಸಿದ ತೀವ್ರ ಪ್ರವಾಹಕ್ಕೆ ಹಲವು ಹಳ್ಳಿಗಳು ಕಣ್ಮರೆಯಾಗಿವೆ. ನೇಪಾಳದ ಪ್ರಮುಖ ನದಿ ಭಾಗದಲ್ಲಿದ್ದ ಹಳ್ಳಿಗಳು ಕೊಚ್ಚಿಕೊಂಡು ಹೋಗಿವೆ. ನೂರಾರು ಜನ ನಾಪತ್ತೆಯಾಗಿದ್ದು, ನಾಪತ್ತೆಯಾದವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆದಿದೆ.

ಭಾರತದ ಬಿಹಾರ ಸೇರಿದಂತೆ ವಿವಿಧ ಭಾಗಗಳಲ್ಲಿ ಹೈ ಅಲರ್ಟ್

ನೇಪಾಳದಲ್ಲಿ ಭಾರೀ ಪ್ರವಾಹ ಸಂಭವಿಸಿದ ಹಿನ್ನೆಲೆಯಲ್ಲಿ ಬಿಹಾರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ನೇಪಾಳದಲ್ಲಿ ಭೋಟೆ ಕೊಶಿ ಹಾಗೂ ತ್ರಿಶೂಲಿ ನದಿಗಳು ಉಕ್ಕಿ ಹರಿಯುತ್ತಿವೆ. ಇದರ ಪರಿಣಾಮವಾಗಿ ಬಿಹಾರದಲ್ಲಿ ಪ್ರವಾಹ ಸೃಷ್ಟಿಯಾಗುವ ಆತಂಕವಿದ್ದು, ಭಾರತದಲ್ಲಿ ಬಿಹಾರ ಸೇರಿದಂತೆ ವಿವಿಧ ಭಾಗಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ನೇಪಾಳದಲ್ಲಿ ಭಾರೀ ಪ್ರವಾಹ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಬಿಹಾರದ ಗಂದಕ್ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಬಿಹಾರ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಕಟ್ಟೆಚ್ಚರಿಕೆ ವಹಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+