Russia & Ukraine: ಪುಟಿನ್ ವಿರುದ್ಧ ಮಾತಿನ ಸಮರ ಸಾರಿದ ನ್ಯಾಟೋ!

ಕೀವ್: ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ನ್ಯಾಟೋ ಪಡೆಗಳು ಮಧ್ಯಪ್ರವೇಶ ಮಾಡಿದ ವಿಚಾರ ಜಗತ್ತಿಗೇ ಗೊತ್ತಿದೆ. ಆದ್ರೆ ಈಗ ಹೊಸ ಸುದ್ದಿ ಹೊರಬಿದ್ದಿದೆ. ಅದೇನೆಂದರೆ ರಷ್ಯಾ ವಿರುದ್ಧ ಉಕ್ರೇನ್‌ಗೆ ನೀಡುತ್ತಿರುವ ಮಿಲಿಟರಿ ನೆರವನ್ನು, ಯುದ್ಧ ಮುಗಿಯುವ ತನಕವೂ ಮುಂದುವರಿಸುತ್ತೇವೆ ಎಂದಿದೆ ನ್ಯಾಟೋ. ಈ ಮೂಲಕ ನ್ಯಾಟೋ ಮಿಲಿಟರಿ ಒಕ್ಕೂಟದ ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಪುಟಿನ್ ವಿರುದ್ಧ ತೊಡೆ ತಟ್ಟಿದ್ದಾರೆ.

ಈಗಾಗಲೇ 500 ದಿನ ಪೂರೈಸಿ ಬರೋಬ್ಬರಿ 2ನೇ ವರ್ಷಕ್ಕೆ ಕಾಲಿಡುತ್ತಿರುವ ರಷ್ಯಾ ಹಾಗೂ ಉಕ್ರೇನ್ ಯುದ್ಧ ನಿಲ್ಲುವ ಲಕ್ಷಣವೇ ಕಾಣುತ್ತಿಲ್ಲ. ಬದಲಾಗಿ ಇಬ್ಬರ ತಿಕ್ಕಾಟ ಕ್ಷಣಕ್ಷಣಕ್ಕೂ ವ್ಯತಿರಿಕ್ತವಾಗುತ್ತಿದೆ. ಯುದ್ಧ ನಿಲ್ಲಿಸಲು ಮಾಡುತ್ತಿರುವ ಪ್ರಯತ್ನ ಫಲ ನೀಡುತ್ತಿಲ್ಲ. ಇದೇ ಸಂದರ್ಭದಲ್ಲಿ ನ್ಯಾಟೋ ಕೂಡ ರಷ್ಯಾ ವಿರುದ್ಧ ಗುಡುಗಿದ್ದು, ರಷ್ಯಾ ಅಧ್ಯಕ್ಷ ಪುಟಿನ್‌ರ ವಿರುದ್ಧ ಗಂಭೀರ ಆರೋಪ ಮಾಡಿದೆ. ಅದೇನೆಂದರೆ ನ್ಯಾಟೋ ಒಕ್ಕೂಟದ ಬಗ್ಗೆ ಪುಟಿನ್ ಲಘುವಾಗಿ ಮಾತನಾಡಿದ್ದು, ಉಕ್ರೇನ್ ಸೇನೆ ಇಲ್ಲಿ ಗೆಲ್ಲುವ ತನಕ ರಷ್ಯಾ ವಿರುದ್ಧ ನಮ್ಮ ಬೆಂಬಲ ಮುಂದುವರಿಯುತ್ತೆ ಎಂದಿದ್ದಾರೆ ನ್ಯಾಟೋ ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್‌ಬರ್ಗ್.

NATO assures Ukraine for military aid till war ends

ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ?

ಅತ್ತ ನ್ಯಾಟೋ ಬಲದಿಂದ ಉಕ್ರೇನ್, ರಷ್ಯಾ ವಿರುದ್ಧ ತಿರುಗಿಬಿದ್ರೆ ಇನ್ನೋಂದ್ಕಡೆ ರಷ್ಯಾಗೆ ಡ್ರೋನ್ ಕಾಟ ಶುರುವಾಗಿದೆ. ಪದೇ ಪದೆ ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿ, ಕಾಟ ಕೊಡುತ್ತಿರುವ ಆರೋಪ ಇದೆ. ಈಗಲೂ ಅಷ್ಟೇ ರಷ್ಯಾಗೆ ಸೇರಿದ ಜಾಗಕ್ಕೆ ಉಕ್ರೇನ್ ಡ್ರೋನ್ ಮೂಲಕ ಬಾಂಬ್ ಹಾಕಿದೆ ಎಂದಿದೆ ರಷ್ಯಾ. ಇದು ಎರಡೂ ದೇಶಗಳ ತಿಕ್ಕಾಟ ಮತ್ತಷ್ಟು ಹೆಚ್ಚಿಸುತ್ತಿದೆ. ಅದರಲ್ಲೂ ರಷ್ಯಾ ರಾಜಧಾನಿ ಮಾಸ್ಕೋ ಸುತ್ತಮುತ್ತ ಸಾಕಷ್ಟು ಡ್ರೋನ್‌ಗಳನ್ನ ರಷ್ಯಾ ಹೊಡೆದು ಹಾಕಿರುವುದಾಗಿ ಪ್ರತಿನಿತ್ಯ ಹೇಳುತ್ತಿದೆ. ಇದೀಗ ರಷ್ಯಾಗೆ ಸೇರಿದ ಜಾಗದಲ್ಲಿ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎನ್ನಲಾಗಿದೆ.

3 ಲಕ್ಷ ಕೋಟಿ ರೂಪಾಯಿ ನೆರವು

ಇಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ರಷ್ಯಾ ಮತ್ತು ಉಕ್ರೇನ್ ಯುದ್ಧವೇ ಜಗತ್ತಿನ 3ನೇ ಮಹಾಯುದ್ಧ ಎನ್ನಬಹುದು. ಏಕೆಂದರೆ ಸುದೀರ್ಘ ಯುದ್ಧಕ್ಕೆ ರಷ್ಯಾ ತೊಡೆತಟ್ಟಿ ನಿಂತಿರುವ ಸಂದರ್ಭದಲ್ಲೇ, ನ್ಯಾಟೋ ಮತ್ತು ಅಮೆರಿಕ ಕೂಡ ಉಕ್ರೇನ್ ಬೆನ್ನಿಗೆ ನಿಂತು ಯುದ್ಧಕ್ಕೆ ಸಾಥ್ ಕೊಡಲು ಮುಂದಾಗಿವೆ. ಹೀಗಾಗಿ ರಷ್ಯಾ ಮತ್ತು ಉಕ್ರೇನ್ ಯುದ್ಧ ಅದೆಷ್ಟು ವರ್ಷ ನಡೆದರೂ ಸಹಾಯ ಸಿಗಲಿದೆ. ಈಗಾಗಲೇ ಅಮೆರಿಕ 3 ಲಕ್ಷ ಕೋಟಿಯಷ್ಟು ನೆರವು ನೀಡಿ ಉಕ್ರೇನ್ ಬೆನ್ನಿಗೆ ನಿಂತಿದೆ. ಮುಂದೆಯೂ ಈ ರೀತಿ ಸಹಾಯ ಮಾಡಲು ನಿರ್ಧಾರ ಕೈಗೊಳ್ಳಲಾಗುತ್ತಿದೆ. ಇದೀಗ ಮತ್ತೊಮ್ಮೆ ನ್ಯಾಟೋ ಮುಖ್ಯಸ್ಥರೇ ಉಕ್ರೇನ್‌ಗೆ ಅಭಯ ಅಸ್ತ ಚಾಚಿದ್ದಾರೆ.

NATO assures Ukraine for military aid till war ends

ಅಮೆರಿಕ ಕೂಡ ನೆರವು ನೀಡುತ್ತಿದೆ

ಒಟ್ನಲ್ಲಿ ಕೋಳಿ ಜಗಳದ ರೀತಿ ಶುರುವಾಗಿದ್ದ ರಷ್ಯಾ, ಉಕ್ರೇನ್ ಯುದ್ಧ ಎರಡು ವರ್ಷದ ಕಡೆ ಪಯಣ ಬೆಳೆಸಿದೆ. ಮುಂದಿನ 10 ವರ್ಷದಲ್ಲೂ ರಷ್ಯಾ & ಉಕ್ರೇನ್ ಯದ್ಧ ನಿಲ್ಲಲ್ಲ ಎನ್ನುವ ಮುನ್ಸೂಚನೆ ಸಿಕ್ಕಿದೆ. ಅಮೆರಿಕ ಕೂಡ ಶಾಂತಿ ಮಾತುಕತೆಗೆ ಬದಲಾಗಿ ಉಕ್ರೇನ್‌ಗೆ ಅಸ್ತ್ರಗಳನ್ನ ನೀಡುತ್ತಿದೆ. ಅಮೆರಿಕ & ನ್ಯಾಟೋ ಪಡೆಗಳು ಕೂಡ ರಷ್ಯಾ ವಿರುದ್ಧ ದೀರ್ಘ ಕಾಲದ ಯುದ್ಧಕ್ಕೆ ಸನ್ನದ್ಧವಾಗಿವೆ. ಅಮೆರಿಕ ಈಗಾಗಲೇ ಭಾರಿ ಪ್ರಮಾಣದಲ್ಲಿ ಉಕ್ರೇನ್‌ಗೆ ಮಿಲಿಟರಿ ನೆರವನ್ನ ನೀಡಿದ್ದು, ನ್ಯಾಟೋ ಒಕ್ಕೂಟದ ರಾಷ್ಟ್ರಗಳು ಕೂಡ ನೆರವು ನೀಡುತ್ತಾ ಬಂದಿವೆ.

NATO assures Ukraine for military aid till war ends

ಒಟ್ನಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಘೋರ ಕಾಳಗ ನಿಂತರೆ ಸಾಕು ಅಂತಾ ಜಗತ್ತು ಕಾಯುತ್ತಿದೆ. ಆದರೆ ಯುದ್ಧ ನಿಲ್ಲಿಸುವ ಪ್ರಯತ್ನಗಳು ವಿಫಲವಾಗುತ್ತಿವೆ. ಈ ನಡುವೆ ನ್ಯಾಟೋ ಮತ್ತು ರಷ್ಯಾ ನಡುವೆ ತಿಕ್ಕಾಟ ಜೋರಾಗಿದೆ. ಅತ್ತ ಬೆಲಾರಸ್ ಸೇನೆ ರಷ್ಯಾ ಪರ ನಿಂತಿರುವುದು ಇಡೀ ಯುರೋಪ್ ಖಂಡಕ್ಕೆ ಯುದ್ಧ ಆವರಿಸುವ ಭೀತಿಯನ್ನು ಮೂಡಿಸಿದೆ. ಇದರ ಜೊತೆಗೆ ಅಮೆರಿಕ ಕೂಡ ಉಕ್ರೇನ್ ಬೆನ್ನಿಗೆ ನಿಂತು, ಯುದ್ಧಕ್ಕೆ ನೆರವು ನೀಡುತ್ತಿದೆ. ಇದನ್ನು ಸಹಿಸದ ರಷ್ಯಾ ತನ್ನ ದಾಳಿಯನ್ನು ಮತ್ತಷ್ಟು ಭೀಕರಗೊಳಿಸುತ್ತಿದೆ. ಆದರೆ ಸಾಯುತ್ತಿರುವುದು ಮಾತ್ರ ಅಮಾಯಕರು ಎಂಬ ಆರೋಪ, ಆಕ್ರೋಶ ಪ್ರಪಂಚದ ಮೂಲೆ ಮೂಲೆಯಲ್ಲೂ ಪ್ರತಿಧ್ವನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+