• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಹ್ಯಾಕಾಶದಿಂದ ಕಂಡ ಭಾರತ-ಪಾಕಿಸ್ತಾನ ಗಡಿಭಾಗ

|

ವಾಷಿಂಗ್ಟನ್‌, ಅಕ್ಟೋಬರ್. 06: ಭಾರತ ಮತ್ತು ಪಾಕಿಸ್ತಾನದ ಗಡಿ ಎಂದರೆ ಸಾಕು ಯುದ್ಧ, ಗುಂಡಿನ ಮೊರೆತ, ಒಳನುಸುಳುವಿಕೆ, ಭಯೋತ್ಪಾದನೆ ಎಂಬ ಸಂಗತಿಗಳೇ ಕಣ್ಣಿಗೆ ಕಟ್ಟುತ್ತವೆ. ಆದರೆ ಬಾಹ್ಯಾಕಾಶದಿಂದ ಭಾರತ ಮತ್ತು ಪಾಕಿಸ್ತಾನದ ಗಡಿಯನ್ನು ನೋಡಿದರೆ ಹೇಗೆ ಇರಬಹುದು? ಅದು ರಾತ್ರಿ ಸಮಯದಲ್ಲಿ?

ಹೌದು ... ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಬಾಹ್ಯಾಕಾಶದಿಂದ ತೆಗೆದಿರುವ ಭಾರತ-ಪಾಕಿಸ್ತಾನ ಗಡಿಯ ಚಿತ್ರಗಳನ್ನು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಅಪ್ ಲೋಡ್ ಮಾಡಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾವ ಕೇಂದ್ರದಲ್ಲಿರುವ ಗಗನಯಾತ್ರಿಗಳು ಪಾಕ್ ಸಿಂಧೂ ನದಿ ಕಣಿವೆ ಪ್ರದೇಶದಿಂದ ಉತ್ತರಕ್ಕೆ ಮುಖಮಾಡಿರುವ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಚಿತ್ರಗಳನ್ನು ಸೆಪ್ಟಂಬರ್‌ 23ರಂದೇ ತೆಗಯಲಾಗಿದ್ದು ನಾಸಾ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಈಗ ಅಪ್ ಲೋಡ್ ಮಾಡಿದೆ.[ಬಾನಂಗಳದಲ್ಲಿ ರಂಗುರಂಗೇರಿದ ಚಂದಿರನ ಶೃಂಗಾರಕಾವ್ಯ]

ಎಲ್ಲದಕ್ಕಿಂತ ಮುಖ್ಯವಾಗಿ ಭಾರತ ಮತ್ತು ಪಾಕ್ ಗಡಿಯನ್ನು ಸ್ಪಷ್ಟವಾಗಿ ಕಾಣಬಹುದು. ಇದರೊಂದಿಗೆ ನಾಸಾ ಭೂಮಿಯ ಮೇಲ್ಮೈಗೆ ಸಂಬಂಧಿಸಿದ ಅನೇಕ ಚಿತ್ರಗಳನ್ನು ಬಿಡುಗಡೆ ಮಾಡಿದೆ.[ಕಳೆದು ಹೋದ ಕೆಂಪು ಚಂದ್ರನ ಬಗ್ಗೆ ನಾಸಾ ಹೇಳಿದ್ದೇನು]

ರಾಜಧಾನಿ ನವದೆಹಲಿ, ಇಸ್ಲಾಮಾಬಾದ್, ಕರಾಚಿ ವಿದ್ಯುತ್ ದೀಪಗಳಿಂದ ಬೆಳಗುತ್ತಿರುವುದನ್ನು ಕಾಣಬಹುದು. ನಗರಗಳನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳು, ರಸ್ತೆಗಳನ್ನು ಗುರುತಿಸಬಹುದು.

ನಾಸಾ ವೆಬ್ ತಾಣ ವೀಕ್ಷಿಸಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
NASA shared a photo of the international border between India and Pakistan as seen from outer space on their Facebook page . An astronaut aboard the International Space Station took this nighttime panorama while looking north across Pakistan's Indus River valley. The photo was taken on September 23.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more