Trump Administration: ಡೊನಾಲ್ಡ್ ಟ್ರಂಪ್ ಸರ್ಕಾರದೊಂದಿಗೆ ಭಾರತ ಸರ್ಕಾರದ ಸರ್ಕಸ್ ಶುರು!
Trump administration: ಅಮೆರಿಕದಲ್ಲಿ ಅಕ್ರಮ ವಲಸಿಗರನ್ನು ಗಡಿ ಪಾರು ಮಾಡುವುದಕ್ಕೆ ಹಾಗೂ ಕೆನಡಾ, ಚೀನಾದ ಮೇಲೆ ದುಬಾರಿ ಟ್ಯಾಕ್ಸ್ ಹಾಕುವುದಕ್ಕೆ ಟ್ರಂಪ್ ಸರ್ಕಾರ ಮುಂದಾಗಿದೆ. ಇದರ ಬೆನ್ನಲ್ಲೇ ಭಾರತವು ಅಲರ್ಟ್ ಆಗಿದೆ. ಯಾಕೆಂದರೆ ಈ ಎರಡೂ ವಿಷಯಗಳು ಮುಂದಿನ ದಿನಗಳಲ್ಲಿ ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಭಾರತದ ಮೇಲೆ ಬೀರಬಹುದಾದ ಪರಿಣಾಮವನ್ನು ತಪ್ಪಿಸುವ ಉದ್ದೇಶದಿಂದ ಭಾರತವು ಅಲರ್ಟ್ ಆಗಿದೆ. ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಘರ್ಜನೆ ಶುರು ಮಾಡಿದ್ದಾರೆ. ಅಲ್ಲದೆ ಅಮೆರಿಕದಲ್ಲಿರುವ ಅಕ್ರಮ ಹಾಗೂ ಯಾವುದೇ ದಾಖಲೆಗಳು ಇಲ್ಲದ ಅಂದಾಜು 15 ಲಕ್ಷಕ್ಕೂ ಹೆಚ್ಚು ಜನರನ್ನು ಗಡಿಪಾರು ಮಾಡುವುದಕ್ಕೆ. ಅಲ್ಲದೆ ಕಠಿಣ ಕ್ರಮ ತೆಗೆದುಕೊಳ್ಳುವುದಕ್ಕೆ ನಿರ್ಧರಿಸಿದೆ. ಇದರಲ್ಲಿ 18,000 ಸಾವಿರ ಜನ ಭಾರತೀಯರು ಸಹ ಇರುವುದು ಭಾರತದ ಆತಂಕಕ್ಕೆ ಕಾರಣವಾಗಿದೆ.
ಹೌದು ಅಮೆರಿಕದಲ್ಲಿ ಅಂದಾಜು 18,000 ಸಾವಿರಕ್ಕೂ ಹೆಚ್ಚು ಜನ ಅಕ್ರಮ ಭಾರತೀಯ ವಲಸೆಗಾರರು ಇದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ ಅಮೆರಿಕ ಹೊಸ ತೆರಿಗೆ ನೀತಿಯನ್ನು ಜಾರಿ ಮಾಡುತ್ತಿದೆ. ಎಲ್ಲೆಲ್ಲಿ ಹೆಚ್ಚು ತೆರಿಗೆ ವಿಧಿಸಬಹುದೋ ಆ ಸಾಧ್ಯತೆಗಳನ್ನ ಪರಿಶೀಲನೆ ಮಾಡುತ್ತಿದೆ. ಭಾರತದ ತೆರಿಗೆ ನೀತಿಯ ಬಗ್ಗೆಯೂ ಅಮೆರಿಕ ಗರಂ ಆಗಿದೆ. ಭಾರತ ಹೆಚ್ಚು ತೆರಿಗೆ ವಿಧಿಸುತ್ತಿದೆ ಎನ್ನುವುದು ಟ್ರಂಪ್ ಆರೋಪ ಈ ಎರಡೂ ವಿಷಯಗಳು ಗಂಭೀರ ಸ್ವರೂಪ ಪಡೆದುಕೊಳ್ಳುವುದಕ್ಕಿಂತ ಮುಂಚೆಯೇ ಭಾರತ ಅಲರ್ಟ್ ಆಗುತ್ತಿದೆ.

ಭಾರತದಿಂದ ಹೋಗಿ ಅಮೆರಿಕದಲ್ಲಿ ಯಾವುದೇ ದಾಖಲೆಗಳಿಲ್ಲದೆ ವಾಸಿಸುತ್ತಿರುವವರನ್ನು ಗುರುತಿಸಿ, ವಾಪಸ್ ಕರೆಸಿಕೊಳ್ಳುವುದಕ್ಕೆ ಡೊನಾಲ್ಡ್ ಟ್ರಂಪ್ ಸರ್ಕಾರದೊಂದಿಗೆ ಚರ್ಚೆ ಮಾಡುವುದಕ್ಕೆ ಭಾರತ ಸಿದ್ಧವಾಗಿದೆ ಎಂದು ಹೇಳಿದೆ. ಮುಂದಿನ ದಿನಗಳಲ್ಲಿ ಈ ವಿಯಷ ಗಂಭೀರ ಸ್ವರೂಪ ಪಡೆದುಕೊಳ್ಳುವ ಮುನ್ನವೇ ಮಾತನಾಡಿ ಪರಿಹರಿಸಿಕೊಳ್ಳಲು ನಿರ್ಧರಿಸಲಾಗಿದೆ. ಇನ್ನು ಅಮೆರಿಕ ಸಹ ಅಕ್ರಮವಾಗಿ ಅಮೆರಿಕದಲ್ಲಿ ನೆಲಸಿರುವ ಭಾರತೀಯರನ್ನು ವಾಪಸ್ ಕಳೆಸಿಕೊಡುವುದಕ್ಕೆ ಬೇಕಾದ ಸಹಕಾರವನ್ನು ಕೊಡುತ್ತಿದೆ ಎಂದು ಹೇಳಲಾಗಿದೆ.
ಅಮೆರಿಕದಲ್ಲಿ ಅಂದಾಜು 18,000 ಸಾವಿರ ಜನ ಅಕ್ರಮ ಭಾರತೀಯ ವಲಸಿಗರು ಇದ್ದಾರೆ ಎಂದು ಗುರುತಿಸಲಾಗಿದೆ. ಇದರ ಹೊರತಾಗಿಯೂ ಭಾರತೀಯ ಅಕ್ರಮ ವಲಸಿಗರ ನಿಖರ ದಾಖಲೆ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಈಗ ಗುರುತಿಸಲಾಗಿರುವ ಅಕ್ರಮ ವಲಸಿಗರ ಸಂಖ್ಯೆಗಿಂತ ಹೆಚ್ಚು ಜನ ಇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಠಿಣ ಕ್ರಮ: ಅಮೆರಿಕದಲ್ಲಿ ಅಕ್ರಮ ವಲಸಿಗರನ್ನು ತಡೆಯುವ ಉದ್ದೇಶದಿಂದ ಟ್ರಂಪ್ ಅವರು ಕಠಿಣ ಕ್ರಮ ತೆಗೆದುಕೊಂಡಿದ್ದಾರೆ. ಅಧಿಕಾರಕ್ಕೆ ಬಂದ ಮೊದಲ ದಿನವೇ ಈ ಕಾನೂನಿಗೆ ಸಹಿ ಹಾಕಿದ್ದಾರೆ. ಅಮೆರಿಕದಲ್ಲಿ ಅಕ್ರಮ ವಲಸಿಗರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಮಿಲಿಟರಿ ಭದ್ರತೆ ಹಾಗೂ ಯುಎಸ್ - ಮೆಕ್ಸಿಕೋ ಗಡಿಯಲ್ಲಿ ತುರ್ತು ಪರಿಸ್ಥಿತಿಯನ್ನು ಸಹ ಘೋಷಿಸಲಾಗಿದೆ.
H-1B ವೀಸಾ: ಇನ್ನು ಅಮೆರಿಕದಲ್ಲಿ ಭಾರತೀಯರಿಗೆ H-1B ವೀಸಾ ಕೊಡುವಂತೆ ಮನವಿ ಮಾಡುವ ನಿಟ್ಟಿನಲ್ಲೂ ಚರ್ಚೆಗಳು ನಡೆದಿವೆ. ಕಾನೂನು ಬದ್ಧವಾಗಿ ಭಾರತೀಯರು ಅಮೆರಿಕದಲ್ಲಿ ನೆಲೆಸುವಂತೆ ಮಾಡುವ ನಿಟ್ಟಿನಲ್ಲಿ H-1B ವೀಸಾ ಸಹಕಾರಿಯಾಗಿದೆ ಎಂದು ನಿರೀಕ್ಷಿಸಲಾಗಿದೆ. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಹಾಗೂ ಕೌಶಲ್ಯ ಹೊಂದಿರುವ ಕೆಲಸಗಾರರು ಅಮೆರಿಕದಲ್ಲಿ ನೆಲೆಸುವುದಕ್ಕೆ H-1B ವೀಸಾ ಸಹಕಾರಿಯಾಗಲಿದೆ ಎಂದು ಭಾರತ ಅಂದುಕೊಂಡಿದ್ದು. ಈ ನಿಟ್ಟಿನಲ್ಲಿ ಅಮೆರಿಕದೊಂದಿಗೆ ಚರ್ಚೆ ಮಾಡಲು ನಿರ್ಧರಿಸಿದೆ. 2023 ರಲ್ಲಿ 386,000 H-1B ವೀಸಾಗಳನ್ನು ಕೊಡಲಾಗಿತ್ತು. ಇದರಲ್ಲಿ ನಾಲ್ಕನೇ ಮೂರು ಭಾಗದಷ್ಟು ಭಾರತೀಯರೇ ಆಗಿದ್ದರು ಎನ್ನುವುದು ವಿಶೇಷವಾಗಿದೆ.
ವಲಸೆ ಒಪ್ಪಂದಗಳಿಗೆ ಸಹಿ: ಭಾರತವು ಈಚೆಗೆ ತೈವಾನ್, ಸೌದಿ ಅರೇಬಿಯಾ, ಜಪಾನ್ ಹಾಗೂ ಇಸ್ರೇಲ್ ಸೇರಿದಂತೆ ವಿವಿಧ ದೇಶಗಳೊಂದಿಗೆ ವಲಸೆ ನೀತಿಗೆ ಸಹಿ ಹಾಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಇದೇ ರೀತಿ ಅಮೆರಿಕದೊಂದಿಗೆ ಚರ್ಚೆ ಮಾಡುವ ಸಾಧ್ಯತೆ ಇದೆ.












Click it and Unblock the Notifications