ಅಫ್ಘಾನಿಸ್ತಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಸರಣಿ ಬಾಂಬ್ ಸ್ಫೋಟ

ನವದೆಹಲಿ, ಆಗಸ್ಟ್ 19: ಅಫ್ಘಾನಿಸ್ತಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಸರಣಿ ಬಾಂಬ್ ಸ್ಫೋಟಗೊಂಡಿದ್ದು 66ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಈ ಕುರಿತು ಎಎನ್‌ಐ ವರದಿ ಮಾಡಿದ್ದು, 100ನೇ ಸ್ವಾತಂತ್ರ್ಯ ದಿನಾಚರಣೆ ಜಲಾಲಾಬಾದ್‌ನಲ್ಲಿ ಸಂಭ್ರಮದಿಂದ ನಡೆಯುತ್ತಿರುವ ಸಂದರ್ಭದಲ್ಲಿ ಸರಣಿ ಬಾಂಬ್ ಸ್ಫೋಟಗೊಂಡಿದ್ದು, ಸ್ಥಳದಲ್ಲಿದ್ದ 66ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗಳಾಗಿವೆ.

ಸ್ವಾತಂತ್ರ್ಯ ದಿನ ಆಚರಣೆ ಮಾಡಿ ಬಳಿಕ ಮಾರ್ಕೆಟ್‌ಗೆ ಸಾರ್ವಜನಿಕರು ತೆರಳುತ್ತಿದ್ದ ಸಂದರ್ಭದಲ್ಲಿ ಮಾರ್ಕೆಟ್‌ನಲ್ಲಿ ಬಾಂಬ್ ಸ್ಪೋಟಿಸಲಾಗಿದೆ. ಹಿರಿಯ ಆರೋಗ್ಯ ಅಧಿಕಾರಿ ಫಹೀಮ್ ಬಷಾರಿ ಅವರು ನೀಡಿರುವ ಮಾಹಿತಿ ಪ್ರಕಾರ 34 ಮಂದಿ ಗಾಯಗೊಂಡಿದ್ದಾರೆ.

Multiple Blasts In Afghanistan Independence Day Time

ಕಾಬುಲ್ ನಗರದಲ್ಲಿ ಇತ್ತೀಚೆಗಷ್ಟೇ ನಡೆದ ಬಾಂಬ್ ಸ್ಪೋಟದಲ್ಲಿ 63ಮಂದಿ ಮಂದಿ ಮೃತಪಟ್ಟಿದ್ದು 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಕೆಲವೇ ಗಂಟೆಗಳ ಹಿಂದೆ ಕಾಬುಲ್‌ನಲ್ಲಿ ಮದುವೆ ಮನೆಯಲ್ಲಿ ಬಾಂಬ್ ಸ್ಫೋಟಗೊಂಡಿತ್ತು.ಎಲ್ಲರೂ ನೃತ್ಯ ಮಾಡುತ್ತಾ ಖುಷಿ ಖುಷಿಯಾಗಿದ್ದ ಸಂದರ್ಭದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿತ್ತು.

ಅಫ್ಘಾನಿಸ್ತಾನ ಹಾಗೂ ಅಮೆರಿಕ ನಡುವೆ ಶಾಂತಿ ಮಾತುಕತೆ ನಡೆಯುತ್ತಿರುವ ಬೆನ್ನಲ್ಲೇ ಈ ಸ್ಫೋಟ ಸಂಭವಿಸಿದೆ. ಈಗಾಗಲೇ 16 ಮಂದಿಯ ಅಂತ್ಯಕ್ರಿಯೆ ನೆರವೇರಿಸಲಾಗಿದೆ. 7 ವರ್ಷದ ಮಗು ಸೇರಿ 63 ಮಂದಿ ಮೃತಪಟ್ಟಿದ್ದರು. ಮದುವೆಗೆ 1200ಕ್ಕೂ ಹೆಚ್ಚು ಮಂದಿಯನ್ನು ಆಹ್ವಾನಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+