ಪಾಕಿಸ್ತಾನದ ಸಂಸತ್ತಲ್ಲಿ ಮುಜುಗರದ ಘಟನೆ ಏನದು?
Recommended Video
ಇಸ್ಲಾಮಾಬಾದ್, ಸೆಪ್ಟೆಂಬರ್ 13: ಪಾಕಿಸ್ತಾನದ ಸಂಸತ್ತಿನಲ್ಲಿ ಸಂಸದರ ನಡುವೆ ಮಾರಾಮಾರಿ ನಡೆದಿದೆ ಎನ್ನಲಾದ ವಿಡಿಯೋ ಇದೀಗ ವೈರಲ್ ಆಗಿದೆ.
ಅಷ್ಟೇ ಅಲ್ಲದೆ ಮಹಿಳಾ ಸಂಸದರ ಕುರಿತು ಕೂಡ ಅವಹೇಳನವಾಗಿ ಮಾತನಾಡಿರುವ ಘಟನೆಯೂ ನಡೆದಿದೆ.
ಒಂದೆಡೆ ಕಾಶ್ಮೀರದ ವಿಚಾರ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ ಕೆರಳಿರುವುದು ಒಂದೆಡೆಯಾದರೆ ಇನ್ನೊಂದೆಡೆ ಅಲ್ಲಿಯೇ ಸಾಮರಸ್ಯ ಇಲ್ಲದಿರುವುದು ಗೋಚರವಾಗುತ್ತಿದೆ.
ಪಾಕಿಸ್ತಾನ ಸಂಸತ್ತಿನಲ್ಲಿ ಗುರುವಾರ ಇದೇ ರೀತಿಯ ಪ್ರಸಂಗ ಕಂಡುಬಂದಿದೆ. ಜಂಟಿ ಅಧಿವೇಶನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸಂಸದರ ನಡುವೆ ಘರ್ಷಣೆ ಉಂಟಾಗಿದೆ. ಉಭಯ ನಾಯಕರ ನಡುವೆ ವಾಕ್ಸಮರ ಜೋರಾಗಿಯೇ ಇತ್ತು, ನೋಡು ನೋಡುತ್ತಿದ್ದಂತೆ ಇಬ್ಬರ ನಡುವೆ ಮಾರಾಮಾರಿ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಸಂದರ್ಭದಲ್ಲಿ ಮಹಿಳಾ ಸಂಸದರನ್ನು ಸಹ ನಿಂದಿಸಲಾಯಿತು ಮತ್ತು ವಿರೋಧ ಪಕ್ಷದ ಸಂಸದರು ಪ್ರಧಾನಮಂತ್ರಿ ಇಮ್ರಾನ್ ಖಾನ್ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇದು ಇಮ್ರಾನ್ ಖಾನ್ ಅವರ ಮಂತ್ರಿಗಳು ಮತ್ತು ವಿರೋಧ ಪಕ್ಷದ ನಾಯಕರ ನಡುವೆ ತೀವ್ರ ಚರ್ಚೆಗೆ ಕಾರಣವಾಯಿತು.
ಪ್ರತಿಪಕ್ಷದ ನಾಯಕ 'ಗೋ ನಿಯಾಜಿ ಗೋ' ಎಂಬ ಘೋಷಣೆಗಳನ್ನು ಕೂಗಲಾರಂಭಿಸಿದರು. ಈ ವಿಚಾರ ತಾರಕಕ್ಕೇರಿ ಆಡಳಿತ ಪಕ್ಷದ ಸಂಸದರು ಮತ್ತು ವಿರೋಧ ಪಕ್ಷದ ನಾಯಕರ ನಡುವೆ ಸಾಕಷ್ಟು ಮಾರಾಮಾರಿ ಆರಂಭವಾಗಿತು. ಪರಿಸ್ಥಿತಿಯನ್ನು ನಿಯಂತ್ರಿಸಲು, ಸೇನಾ ನಾಯಕರು ಮಧ್ಯಪ್ರವೇಶಿಸಬೇಕಾಯಿತು. ಆದರೆ ಇದರ ನಂತರವೂ ಪಾಕ್ ನಾಯಕರ ನಡುವೆ ಹೊಡೆದಾಟ ಕಂಡು ಬಂದಿದೆ.
ಸಂಸತ್ತಿನ ಸದಸ್ಯರು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಸಾಕಷ್ಟು ಘೋಷಣೆಗಳನ್ನು ಕೂಗಲಾರಂಭಿಸಿದರು. ಇಮ್ರಾನ್ ಖಾನ್ ಸರ್ಕಾರದ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಅಧಿವೇಶನವನ್ನು ಕರೆಯಲಾಗಿತ್ತು.












Click it and Unblock the Notifications