ಟರ್ಕಿ ಪ್ರಜಾಪ್ರಭುತ್ವದ ಮೇಲೆ ಮಿಲಿಟರಿ ದಾಳಿ, ಸಂಸತ್ ವಶ

Posted By:
Subscribe to Oneindia Kannada

ಅಂಕಾರ, ಜುಲೈ 16 : ಟರ್ಕಿಯಲ್ಲಿ ಅರಾಜಕರತೆ ಭುಗಿಲೆದ್ದಿದೆ, ಪ್ರಜಾಪ್ರಭುತ್ವದ ಮೇಲೆ ಆಕ್ರಮಣ ನಡೆದಿದೆ. ಅಲ್ಲಿನ ಮಿಲಿಟರಿ ಸಂಸತ್ತಿನ ಮೇಲೆ ದಾಳಿ ನಡೆಸಿದ್ದು, ಎರ್ಡೋಗನ್ ಸರಕಾರವನ್ನು ಕಿತ್ತೊಗಿದಿರುವುದಾಗಿ ಘೋಷಿಸಿದೆ.

ಇದೀಗ ಬಂದಿರುವ ವರ್ತಮಾನಗಳ ಪ್ರಕಾರ, ಸಂಸತ್ತಿನ ಮೇಲೆ ಬಾಂಬ್ ದಾಳಿ ನಡೆಸಲಾಗಿದ್ದು, ಓರ್ವ ಸಂಸದ ಸೇರಿದಂತೆ 12 ಜನರು ಸಾವಿಗೀಡಾಗಿದ್ದಾರೆ. ಜೆಟ್ ವಿಮಾನಗಳು ಹತ್ತಿರದಲ್ಲಿ ಹಾರಾಡುತ್ತಿವೆ, ಮಿಲಿಟರ್ ಟ್ಯಾಂಕ್ ಗಳು ಹೆದ್ದಾರಿಯಲ್ಲಿ ಅಡ್ಡಾಡುತ್ತಿವೆ. ಇಸ್ತಾನ್‌ಬುಲ್ ನಲ್ಲಿರುವ 15ಕ್ಕೂ ಹೆಚ್ಚು ಸೇತುವೆಗಳನ್ನು ಬಂದ್ ಮಾಡಲಾಗಿದೆ.

Military coup in Turkey, attack on Parliament

ಟರ್ಕಿ ಅಧ್ಯಕ್ಷ ರೆಸೆಪ್ ಟಯ್ಯಿಪ್ ಎರ್ಡೋಗನ್ ಅವರು ಇಸ್ತಾನ್‌ಬುಲ್‌ಗೆ ತುರ್ತಾಗಿ ಮರಳಿದ್ದು, ಸಂಸತ್ತಿನ ಮೇಲೆ ದಾಳಿ ನಡೆದಿರುವುದನ್ನು ಖಚಿತಪಡಿಸಿದ್ದಾರೆ. ಇದು, ದೇಶದ ಪ್ರಭುತ್ವ ಮತ್ತು ಐಕ್ಯತೆಯ ಮೇಲೆ ನಡೆಸಿರುವ ಹೀನಾಯ ದಾಳಿ ಎಂದು ಅವರು ತೀವ್ರವಾಗಿ ಖಂಡಿಸಿದ್ದಾರೆ.

ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ. ಇದು ಜನರೇ ಆರಿಸಿರುವ ಸರಕಾರ. ನಾನು ಎಂದಿಗೂ ಜನರೊಂದಿಗೆ ಇದ್ದೇನೆ. ದೇಶವನ್ನು ಮಿಲಿಟರಿ ಕೈಯಲ್ಲಿ ಕೊಡಲು ಬಿಡುವುದಿಲ್ಲ. ಇಂಥ ಪ್ರಯತ್ನ ನಡೆಸಿದವರು ಭಾರೀ ದಂಡ ತೆರಬೇಕಾಗುತ್ತದೆ ಎಂದು ಅವರು ದೇಶವನ್ನುದ್ದೇಶಿಸಿ ಮಾತನಾಡಿದರು.

ಸಹಾಯವಾಣಿ : ಟರ್ಕಿಯಲ್ಲಿರುವ ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಸಹಾಯವಾಣಿಯನ್ನು ಬಳಸಬಹುದು.#ಅಂಕಾರ: +905303142203,#ಇಸ್ತಾನ್‌ಬುಲ್ : +905305671095

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Military in Turkey has tried to overtake president Recep Tayyip Erdoğan's government by attacking on parliament in Istanbul. According to reports bomb war hurled on parliament killing 12 people. Turkey democracy is shaken.
Please Wait while comments are loading...