ಸೆಕ್ಯುರಿಟಿ ಕಣ್ತಪ್ಪಿಸಿ ಐಫೆಲ್ ಟವರ್ ಏರಿದ ಕಿಲಾಡಿ, ಪೊಲೀಸರು ಹೈರಾಣ
ಪ್ಯಾರಿಸ್, ಮೇ 21: ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಆಗಂತುಕನೊಬ್ಬ ಜಗತ್ ವಿಖ್ಯಾತ ಐಫೆಲ್ ಟವರ್ ಏರಿ ಅವಾಂತರ ಸೃಷ್ಟಿಸಿದ್ದಾನೆ.
ಟವರ್ ಏರಿದ್ದ ವ್ಯಕ್ತಿಯೊಂದಿಗೆ ಪೊಲೀಸರು ಸಂಪರ್ಕಿಸಿದ್ದು ಆತ ಯಾವ ಕಾರಣಕ್ಕೆ ಏರಿದ್ದ ಎಂಬುದು ತಿಳಿದುಬಂದಿಲ್ಲ. 2017ರ ಅಕ್ಟೋಬರ್ ಇದೇ ರೀತಿ ವ್ಯಕ್ತಿಯೊಬ್ಬ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಆತಂಕ ಸೃಷ್ಟಿ ಮಾಡಿದ್ದ, ಆತನನ್ನು ಮನವೊಲಿಸಲು ಪೊಲೀಸರು ಯಶಸ್ವಿಯಾಗಿದ್ದರು. ಆಗಲೂ ಪ್ರವಾಸಿಗರನ್ನು ಬೇರೆಡೆಗೆ ಕಳುಹಿಸಲಾಗಿತ್ತು.

ಐಫೆಲ್ ಟವರ್ ನಿರ್ಮಾಣಕ್ಕೆ ಕಾರ್ಯ 1889ರಲ್ಲಿ ಪೂರ್ಣಗೊಂಡಿತ್ತು. ಕಳೆದ ಒಂದು ವಾರದ ಹಿಂದೆ 130 ವರ್ಷದ ವಾರ್ಷಿಕೋತ್ಸವವನ್ನು ಪೂರ್ಣಗೊಳಿಸಿತ್ತು. ಗುಸ್ತಾವೆ ಐಫೆಲ್ ಎಂಬುವವರು ಈ ಟವರ್ ನಿರ್ಮಾಣ ಮಾಡಿದ್ದರು. 2015ರಲ್ಲಿ ಮೂರು ಮಂದಿ ಐಫೆಲ್ ಟವರ್ ಏರುತ್ತಿರುವುದು ಗೋಚರವಾಗಿತ್ತು.












Click it and Unblock the Notifications