ಇಂಡೋನೇಷ್ಯಾದಲ್ಲಿ 6.5 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ
ಜಕಾರ್ತ, ಸೆಪ್ಟೆಂಬರ್ 26: ಇಂಡೋನೇಷ್ಯಾದಲ್ಲಿ 6.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಗುರುವಾರ(ಸೆ.26) ಬೆಳಗಿನ ಜಾವ ಸುಮಾರು 5.16ರ ಸಮಯದಲ್ಲಿ ಭೂಕಂಪ ಸಂಭವಿಸಿದೆ. ಇಂಡೋನೇಷ್ಯಾದ ಮಾಲುಕು ಪ್ರಾಂತ್ಯದ ಅಂಬೊನ್‌ನಿಂದ ಈಶಾನ್ಯಕ್ಕೆ ಸುಮಾರು 37 ಕಿ.ಮೀ. ಆಳದಲ್ಲಿ ಭೂಕಂಪನ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಸದ್ಯ ಸಾವು ನೋವಿನ ಬಗ್ಗೆ ಯಾವುದೇ ವರದಿಯಾಗಿಲ್ಲ.
ಕಳೆದ ವರ್ಷ 7.5ರಷ್ಟು ತೀವ್ರತೆಯ ಭೂಕಂಪನದಿಂದಾಗಿ ಸುನಾಮಿ ಸೃಷ್ಟಿಯಾಗಿ 4300 ಜನರು ಸಾವಿಗೀಡಾಗಿದ್ದರು. 2004ರ ಡಿಸೆಂಬರ್ 26ರಂದು 9.1ರಷ್ಟು ತೀವ್ರ ಭೂಕಂಪದಿಂದ ಸುಮಾತ್ರಾ ದ್ವೀಪ ಅಲೆಗಳಿಂದ ಆವೃತವಾಗಿತ್ತು. ಅದೇ ಸಮಯದಲ್ಲಿ ಉಂಟಾದ ಸುನಾಮಿಗೆ ಸಿಲುಕಿ ಸುಮಾರು 2,20,000 ಮಂದಿ ಸಾವಿಗೀಡಾಗಿದ್ದರು. ಇಂಡೋನೇಷ್ಯಾ ಒಂದರಲ್ಲೇ 1,70,000 ಮಂದಿ ಮೃತಪಟ್ಟಿದ್ದರು.

ಲಾಹೋರ್ ಬಳಿ ಸೆ.24ರಂದು ಸಂಭವಿಸಿದ ಭಾರಿ ಭೂಕಂಪಕ್ಕೆ ಇಲ್ಲಿಯವರೆಗೂ ಒಟ್ಟು 37 ಜನ ಸಾವನ್ನಪ್ಪಿದ್ದು, 452 ಜನ ಗಾಯಗೊಂಡಿದ್ದರು.












Click it and Unblock the Notifications