ಪಾಕಿಸ್ತಾನ: ಧ್ವಂಸಗೊಂಡಿದ್ದ ಹಿಂದೂ ದೇವಾಲಯ ಮರು ನಿರ್ಮಾಣಕ್ಕೆ 3.48 ಕೋಟಿ ರೂ.ಹಣ ಬಿಡುಗಡೆ

ಪೇಶಾವರ, ಏಪ್ರಿಲ್ 9: ಪಾಕಿಸ್ತಾನದಲ್ಲಿ ಹಾನಿಗೊಳಗಾಗಿದ್ದ ಹಿಂದೂ ದೇವಾಲಯ ಮರು ನಿರ್ಮಾಣಕ್ಕೆ ಪಾಕಿಸ್ತಾನ ಸರ್ಕಾರ 3.48 ಕೋಟಿ ರೂ. ಹಣ ಬಿಡುಗಡೆ ಮಾಡಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೆಲವು ಸ್ಥಳೀಯ ಮೌಲ್ವಿಗಳು ಮತ್ತು ಇಸ್ಲಾಮಿಸ್ಟ್ ಪಕ್ಷದ ಜಮಿಯತ್ ಉಲೆಮಾ-ಇ-ಇಸ್ಲಾಂ ಸದಸ್ಯರ ನೇತೃತ್ವದ ಗುಂಪಿನಿಂದ ಹಾನಿಗೊಳಗಾಗಿದ್ದ ಹಿಂದೂ ದೇವಾಲಯದ ಪುನರ್ ನಿರ್ಮಾಣಕ್ಕಾಗಿ ಪಾಕಿಸ್ತಾನದ ಖೈಬರ್ ಪಕ್ತುನ್ಖ್ವಾ ಪ್ರಾಂತೀಯ ಸರ್ಕಾರ 3.48 ಕೋಟಿ ರೂ. ಬಿಡುಗಡೆ ಮಾಡಿದೆ.

ಒಂದು ಶತಮಾನದಷ್ಟು ಹಳೆಯದಾದ ದೇವಾಲಯ ಮತ್ತು ಅದರ ಪಕ್ಕದ 'ಸಮಾಧಿ' ಮೇಲೆ ನಡೆದ ದಾಳಿಯನ್ನು ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮುಖಂಡರು ತೀವ್ರವಾಗಿ ಖಂಡಿಸಿದ್ದರು. ದೇವಾಲಯವನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಪ್ರಾಂತೀಯ ಸರ್ಕಾರಕ್ಕೆ ನಿರ್ದೇಶನ ನೀಡಿತು.

KPK Govt In Pak Releases Rs 3.48 Cr For Reconstruction Of Hindu Shrine Damaged By Mob

ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕರಕ್ ಜಿಲ್ಲೆಯ ಟೆರ್ರಿ ಗ್ರಾಮದಲ್ಲಿ ಕಳೆದ ವರ್ಷ ಡಿಸೆಂಬರ್ 30ರಂದು ನಾಶ ಮಾಡಲಾಗಿದ್ದ ಶ್ರೀ ಪರಮಹನ್ಸ್ ಜೀ ಮಹಾರಾಜ್ ಅವರ ಸಮಾಧಿಯ ಪುನರ್ನಿರ್ಮಾಣಕ್ಕಾಗಿ ಪ್ರಾಂತೀಯ ಸರ್ಕಾರವು ಅಕಾಫ್ ಇಲಾಖೆಗೆ 3,48,29,000 ರೂ. ಬಿಡುಗಡೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+