Kissing My Ass: ಸೌದಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್‌ಗೆ ನನ್ನೊಂದಿಗೆ ಕೆಲಸ ಮಾಡುವುದಕ್ಕೆ ಇಷ್ಟ ಎಂದ ಟ್ರಂಪ್
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಬಗ್ಗೆ ಕೊಟ್ಟಿರುವ ಹೇಳಿಕೆ ಹಾಗೂ Kissing My Ass ಎಂದು ಹೇಳಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಇರಾನ್ ವಿರುದ್ಧ ನಡೆಯುತ್ತಿರುವ ಮಧ್ಯಪ್ರಾಚ್ಯ ಯುದ್ಧದಲ್ಲಿ ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಹಾಗೂ ನಾವು ಒಟ್ಟಾಗಿ ಕೆಲಸ ಮಾಡುತ್ತಿರುವುದು ಪರಿಣಾಮಕಾರಿಯಾಗಿದೆ. ನನ್ನೊಂದಿಗೆ ಕೆಲಸ ಮಾಡುವುದು ಅವರಿಗೆ ಇಷ್ಟವಾಗಿದೆ ಎಂದು ಹೇಳುವುದಕ್ಕೆ ಅವರು, kissing my ass ಎಂಬ ಉಪಮೇಯ ಬಳಕೆ ಮಾಡಿದ್ದಾರೆ.
ಮಿಯಾಮಿಯಲ್ಲಿ ಸೌದಿ ಬೆಂಬಲಿತ ಹೂಡಿಕೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈಗ ಮೊಹಮ್ಮದ್ ಬಿನ್ ಸಲ್ಮಾನ್ Didn't think he'd be kissing my ass. He really didn't ಎನ್ನುವ ಮಾತು ಬಳಕೆ ಮಾಡಿರುವುದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹುಚ್ಚಾಟಕ್ಕೆ ಇನ್ನೊಂದು ಉದಾಹರಣೆ ಎಂದು ಹೇಳಲಾಗಿದೆ. ನನ್ನನ್ನು ಅವರು ಮೊದಲು ಅಮೆರಿಕದ ಸೋತ ಅಧ್ಯಕ್ಷ ಎಂದುಕೊಂಡಿದ್ದರು. ಯುದ್ಧವು ರೀತಿ ಸಾಗಲಿದೆ ಎಂದು ತಿಳಿದುಕೊಂಡಿರಲಿಲ್ಲ. ಈಗ ಅವರು ನನಗೆ ಒಳ್ಳೆಯವರಾಗಬೇಕು ಎಂದಿದ್ದಾರೆ. ಅಸಭ್ಯ ಹಾಗೂ ವ್ಯಂಗ್ಯವಾದ ಡೊನಾಲ್ಡ್ ಟ್ರಂಪ್ ಮಾತು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಬುಧವಾರ ಡೊನಾಲ್ಡ್ ಟ್ರಂಪ್ ಅವರು ಸೌದಿಯ ರಾಜಕುಮಾರ ಯುದ್ಧಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ಹೇಳುವಾಗ ಈ ಪದಗಳನ್ನು ಬಳಕೆ ಮಾಡಿದ್ದಾರೆ. ಅಮೆರಿಕದ ಜೊತೆಗೆ ಹೋರಾಡುತ್ತಿರುವ ಇವರು ಯೋಧ ಎಂದೂ ಹೇಳಿದ್ದಾರೆ. ಅವರೊಬ್ಬ ಯೋಧ ಇವರೂ ಸಹ ನಮ್ಮೊಂದಿಗೆ ಹೋರಾಡುತ್ತಿದ್ದಾರೆ ಎಂದಿದ್ದಾರೆ.
ಮೊಹಮ್ಮದ್ ಬಿನ್ ಸಲ್ಮಾನ್ ಸಾರ್ವಜನಿಕವಾಗಿ ಇರಾನ್ ಮೇಲಿನ ದಾಳಿಗೆ ಸೌದಿ ವಾಯುಸೀಮೆ ಪ್ರದೇಶವನ್ನು ಬಳಸಲು ಬಿಡುವುದಿಲ್ಲ. ರಾಜತಾಂತ್ರಿಕವಾಗಿ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸುವಂತೆ ಹೇಳಿದ ಮೇಲೆಯೂ ಸಹ ದಾಳಿ ನಡೆಸುವಂತೆ ಅಮೆರಿಕಕ್ಕೆ ಒತ್ತಡ ಹಾಕಿದ್ದರು.
ಇನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಷಣದಲ್ಲಿ Kissing my ass ಎನ್ನುವ ಪದವನ್ನು ಬಳಸುತ್ತಿರುವುದು ಇದೇ ಮೊದಲೇನು ಅಲ್ಲ. ಈ ಹಿಂದೆಯೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುಂಕ ಸಮರ ಆರಂಭಿಸಿದ ಮೇಲೆ ಹಲವು ದೇಶಗಳು ತನ್ನ ಜೊತೆ ಮನವಿ ಮಾಡಿ ಬದಲಾವಣೆ ಮಾಡುವಂತೆ ಬೇಡಿಕೊಳ್ಳುತ್ತಿರುವ ವಿಷಯವನ್ನು ಸಹ ಟ್ರಂಪ್ ಇದೇ ಮಾತನ್ನು ಪ್ರಾರಂಭಿಸಿದ್ದರು












Click it and Unblock the Notifications