ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಎರಡನೇ ಬಾರಿಗೆ ಪ್ರತ್ಯಕ್ಷ

ಸಿಯೋಲ್, ಮೇ 25: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಎರಡನೇ ಬಾರಿಗೆ ಪ್ರತ್ಯಕ್ಷರಾಗಿದ್ದಾರೆ.

Recommended Video

      ಯಶಸ್ವಿ ಆಯ್ತಾ ದಿಗ್ಗಜರ ಮುಖಾಮುಖಿ ? | Oneindia kannada

      ಕೇಂದ್ರ ಮಿಲಿಟರಿ ಕಮಿಷನ್ ಆಯೋಜಿಸಿದ್ದ ಸಭೆಯಲ್ಲಿ ಕಿಮ್ ಭಾಗವಹಿಸಿದ್ದರು. ದೇಶದಲ್ಲಿ ಪರಮಾಣು ಯುದ್ಧಕ್ಕೆ ಸಂಬಂಧಿಸಿದಂತಹ ಸಭೆ ಇದಾಗಿತ್ತು.

      ಇದಕ್ಕೂ ಮುನ್ನ ಮೇ 1 ರಂದು ಸ್ಥಳೀಯ ಫರ್ಟಿಲೈಸರ್ ಕಾರ್ಖಾನೆಯ ಉದ್ಘಾಟನೆಗೆಂದು ಆಗಮಿಸಿದ್ದರು. ಅದಾದ ಬಳಿಕ 25 ದಿನಗಳ ಬಳಿಕ ಈಗ ಮತ್ತೆ ಸಾರ್ವಜನಿಕರೆದುರು ಬಂದಿದ್ದಾರೆ.

      Kim Jong Un Makes Another Public Appearance

      ಅದಕ್ಕೂ ಮುನ್ನವೂ 23 ದಿನಗಳ ಕಾಲ ಅವರು ಕಾಣಿಸಿಕೊಂಡಿರಲಿಲ್ಲ. ಪಿಟ್ಸ್ ಬರ್ಗ್ ನಲ್ಲಿ ಏಪ್ರಿಲ್ 11 ರಂದು ನಡೆದಿದ್ದ ಆಡಳಿತಾರೂಢ ಕಾರ್ಮಿಕ ಪಕ್ಷದ ಪೊಲಿಟ್ ಬ್ಯುರೊ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಕಿಮ್ ಕೊನೆಯ ಬಾರಿಗೆ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದರು.

      ವಿದೇಶಿ ಮುಖಂಡರಿಗೆ ಸಂದೇಶಗಳನ್ನು ಕಳುಹಿಸುವಂತಹ ವ್ಯವಹಾರಗಳನ್ನು ಅವರು ನಿರ್ವಹಿಸುವ ಬಗ್ಗೆ ರಾಜ್ಯ ಮಾಧ್ಯಮಗಳು ವರದಿಗಳನ್ನು ನೀಡಿವೆ, ಆದರೆ ಅವರ ಯಾವುದೇ ಫೋಟೋ ಅಥವಾ ವಿಡಿಯೋ ಬಿಡುಗಡೆಯಾಗಿಲ್ಲ ಎಂದು ಸಿಯೋಲ್ ಮೂಲದ ಯೋನ್ಹಾಪ್ ನ್ಯೂಸ್ ಏಜೆನ್ಸಿ ವರದಿ ಮಾಡಿತ್ತು.

      ಸಶಸ್ತ್ರ ಪಡೆಗಳನ್ನು ಹೆಚ್ಚಿಸುವುದು ಸೇರಿದಂತೆ ದೇಶದ ಸೇನೆಯ ಬಗ್ಗೆ ಸಾಕಷ್ಟು ಮಾತುಕತೆಗಳು ನಡೆದವು. ಈ ಸಂದರ್ಭದಲ್ಲಿ ಕಿಮ್ ಏಳು ಆದೇಶಗಳಿಗೆ ಸಹಿ ಹಾಕಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+