Israel VS Hamas War: ಉಗ್ರರ ಹೆಣ ಬೀಳುವವರೆಗೂ ಯುದ್ಧ ನಿಲ್ಲೋದಿಲ್ಲ!

ಹಮಾಸ್ ಉಗ್ರರ ವಿರುದ್ಧ ರೊಚ್ಚಿಗೆದ್ದು, ಸೇಡು ತೀರಿಸಿಕೊಳ್ಳಲು ಮುನ್ನುಗ್ಗಿರುವ ಇಸ್ರೇಲ್ ಸೇನೆ ತನ್ನ ದಾಳಿ ನಿಲ್ಲಿಸುವ ಯಾವುದೇ ಸೂಚನೆ ಕಾಣುತ್ತಿಲ್ಲ. ಈ ಸಮಯದಲ್ಲಿ ಇಸ್ರೇಲ್ ಸೇನೆ ತನ್ನ ಭೂ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಅಲ್ಲದೆ ಹಮಾಸ್ ಉಗ್ರರ ಪಡೆ ಸರ್ವನಾಶ ಆಗುವ ತನಕ ಯುದ್ಧ ನಿಲ್ಲಲ್ಲ, ಎನ್ನುವ ಮಾತನ್ನು ಕಡ್ಡಿ ತುಂಡು ಮಾಡಿದ ರೀತಿ ಹೇಳಿದ್ದಾರೆ ಇಸ್ರೇಲ್ ಪ್ರಧಾನಿ.

ಹೌದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ಅಟ್ಯಾಕ್ ಮಾಡಿ ದೊಡ್ಡ ತಪ್ಪು ಮಾಡಿದ್ದಾರೆ. ಇದರ ಪರಿಣಾಮವನ್ನ ಈಗ ಉಗ್ರ ಪಡೆ ಎದುರಿಸುತ್ತಿದೆ. ಇಸ್ರೇಲ್ ಸೇನೆಯನ್ನ ಹಮಾಸ್‌ನ ಗ್ಯಾಂಗ್ ರೊಚ್ಚಿಗೆಬ್ಬಿಸಿ, ಈಗ ಬಿಲದಲ್ಲಿ ಅಡಗಿ ಕೂತಿದೆ ಎಂಬುದು ಇಸ್ರೇಲ್ ಬೆಂಬಲಿಗರ ಆರೋಪ. ಆದರೆ ಇನ್ನೂ ಕೆಲವು ದೇಶಗಳು ಹಮಾಸ್ ಉಗ್ರರ ಪರವಾಗಿ ಕೂಡ ಬೆಂಬಲಕ್ಕೆ ನಿಂತಿವೆ. ಪರಿಸ್ಥಿತಿ ಹೀಗಿದ್ದಾಗ ಇಸ್ರೇಲ್ ಪ್ರಧಾನಿ ಹೇಳಿರುವ ಮಾತುಗಳು ಯುದ್ಧದ ಕಿಚ್ಚಿಗೆ ಪೆಟ್ರೋಲ್ ಸುರಿದಿದೆ. ಹಾಗಾದರೆ ಬೆಂಜಮಿನ್ ನೆತನ್ಯಾಹು ಹೇಳಿದ್ದೇನು?

hamas-to-eradicate-completely-from-gaza-strip

ಬಿಲದಲ್ಲಿ ಅಡಗಿರುವ ಉಗ್ರರಿಗೆ ತಕ್ಕ ಪಾಠ?

ಅಂದಹಾಗೆ ಇಸ್ರೇಲ್ ಸೇನೆ ಈಗ ಅದೆಷ್ಟು ಪಕ್ಕಾ ಪ್ಲ್ಯಾನ್ ಮಾಡಿ ಹಮಾಸ್ ಮೇಲೆ ದಾಳಿ ಮುಂದುವರಿಸಿದೆ ಅಂದ್ರೆ, ಉಗ್ರರು ಅಡಗಿ ಕೂತಿರುವ ಟನಲ್ ಅಂದ್ರೆ ಸುರಂಗಗಳ ಪ್ರವೇಶ ದ್ವಾರಗಳನ್ನ ಒಂದೊಂದಾಗಿ ಹುಡುಕಿ ನಾಶ ಮಾಡುತ್ತಿದೆ. ಅದರಲ್ಲೂ ಹಮಾಸ್ ಉಗ್ರರಿಗೆ ಶಾಲೆ, ಆಸ್ಪತ್ರೆಗಳೇ ದಾಳವಾಗಿದ್ದವು ಎಂಬ ಅರೋಪ ಕೂಡ ಇದೆ. ಆದರೆ ಇದ್ಯಾವುದನ್ನು ಲೆಕ್ಕಿಸದೆ ದಾಳಿ ಮಾಡುತ್ತಿದೆ ಇಸ್ರೇಲ್ ಸೇನೆ. ಹೀಗೆ ಭೀಕರ ದಾಳಿ ಆರಂಭಿಸಿರುವ ಇಸ್ರೇಲ್ 300 ಕಡೆ ಹಮಾಸ್ ಉಗ್ರರ ಬಿಡಾರಗಳನ್ನು ಹುಡುಕಿ ಹುಡುಕಿ ಬಾಂಬ್‌ ಎಸೆದಿದೆ.

ಮುಂದೆ ಕಾದಿದೆ ಮಾರಿಹಬ್ಬ!

ಇದಿಷ್ಟೂ ಒಂದ್ಕಡೆ ಇರಲಿ, ಇನ್ನೊಂದು ಕಡೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಹಾಗೇ ಹಮಾಸ್ ವಿರುದ್ಧದ ಯುದ್ಧದಲ್ಲಿ ಇದೀಗ ಕದನ ವಿರಾಮ ಘೋಷಣೆ ಮಾಡಿ ಎಂಬ ಆಗ್ರಹಕ್ಕೆ ಕೂಡ ಉತ್ತರ ನೀಡಿದ್ದಾರೆ ನೆತನ್ಯಾಹು ಅವರು. ಬೆಂಜಮಿನ್ ನೆತನ್ಯಾಹು ಹೇಳಿದಂತೆ ಹಮಾಸ್ ವಿರುದ್ಧದ ದಾಳಿಯನ್ನ ನಿಲ್ಲಿಸಿದ್ರೆ ಇಸ್ರೇಲ್ ಸೇನೆ, ಹಮಾಸ್ ಉಗ್ರರ ಎದುರು ಶರಣಾದಂತೆ. ಅಲ್ಲದೆ, ಇಸ್ರೇಲ್‌ ಮೇಲೆ ನಡೆದ ದಾಳಿಗೆ ಈ ರೀತಿ ಉತ್ತರ ನೀಡುತ್ತಿದ್ದೇವೆ. ಹೀಗಾಗಿ ಹಮಾಸ್ ಉಗ್ರರ ಪಡೆಯು ಸಂಪೂರ್ಣ ನಾಶವಾಗಿ ಹೋಗುವ ತನಕ ನಮ್ಮ ಯುದ್ಧ ನಿಲ್ಲುವುದಿಲ್ಲ ಎಂದಿದ್ದಾರೆ ನೆತನ್ಯಾಹು.

hamas-to-eradicate-completely-from-gaza-strip

10 ಸಾವಿರ ಸಮೀಪಕ್ಕೆ ಸಾವಿನ ಸಂಖ್ಯೆ

ಹಮಾಸ್ ಉಗ್ರರ ವಿರುದ್ಧದ ಕೋಪಕ್ಕೆ ಇಸ್ರೇಲ್ ಸೇನೆ ಗಾಜಾಪಟ್ಟಿ ಮೇಲೆ ಮನಸ್ಸಿಗೆ ಬಂದ ರೀತಿ ದಾಳಿ ಮಾಡುತ್ತಿದೆ. ಅದ್ರಲ್ಲೂ ಉತ್ತರ ಗಾಜಾದಲ್ಲಿ ರಕ್ತದ ಕೋಡಿಯೇ ಹರಿಯುತ್ತಿದೆ. ಪರಿಸ್ಥಿತಿ ಹೀಗೆ ಕೈಮೀರಿ ಹೋಗಿದ್ದಾಗಲೇ, ಪ್ಯಾಲೆಸ್ತೀನ್ ಪರ 8,306 ಜನ ಈವರೆಗೂ ಮೃತಪಟ್ಟಿದ್ದಾರೆ. ಇಸ್ರೇಲ್ ಕಡೆ ಸಾವಿನ ಸಂಖ್ಯೆ 1400 ದಾಟಿದೆ. ಕೇವಲ 3 ವಾರದ ಹಿಂದೆ ಶುರುವಾದ ಹಮಾಸ್ ಉಗ್ರರು ಹಾಗೂ ಇಸ್ರೇಲ್ ಸೇನೆ ನಡುವಿನ ಯುದ್ಧ ಹತ್ತಿರ ಹತ್ತಿರ 10 ಸಾವಿರ ಜನರ ಜೀವ ಬಲಿ ಪಡೆದಿದೆ. ಹಾಗೇ ಹಮಾಸ್ ಉಗ್ರರ ಬಿಡಾರಗಳು ಸಂಪೂರ್ಣ ನಾಶವಾಗುವ ತನಕ ಯುದ್ಧ ನಿಲ್ಲುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತೊಮ್ಮೆ ಗುಡುಗಿದ್ದು ಯುದ್ಧದ ಭೀಕರತೆಯನ್ನ ಜಗತ್ತಿಗೆ ಸಾರಿ ಸಾರಿ ಹೇಳಿದಂತೆ ಕಾಣುತ್ತಿದೆ.

ಒಟ್ನಲ್ಲಿ ಹಮಾಸ್ ಉಗ್ರ ಪಡೆ & ಇಸ್ರೇಲ್ ನಡುವೆ ಶುರುವಾಗಿರುವ ಈ ಯುದ್ಧವು ಭೂಮಿ ಮೇಲಿನ ಭಯಾನಕ ಯುದ್ಧಗಳ ಸಾಲಿಗೆ ಸೇರುತ್ತಿದೆ. ಒಂದು ಕಡೆ ಉಗ್ರರು ಶರಣಾಗಬೇಕು ಎಂಬುದು ಇಸ್ರೇಲ್ ಬೇಡಿಕೆ, ಇನ್ನೊಂದ್ಕಡೆ ಇಸ್ರೇಲ್ ತಕ್ಷಣ ಯುದ್ಧ ನಿಲ್ಲಿಸಬೇಕೆಂಬುದು ಹಮಾಸ್ ಪರ ಇರುವ ದೇಶಗಳ ಬೇಡಿಕೆ. ಇದರ ಜೊತೆಗೆ ಇನ್ನೂ ಹಲವು ದೇಶಗಳು ಇದೇ ವಿಚಾರದಲ್ಲಿ ತಟಸ್ಥ ನಿಲುವು ತಳೆದಿವೆ. ಹೀಗಾಗಿ ಮುಂದೆ ಇಬ್ಬರ ಯುದ್ಧವು ಮತ್ತೊಂದು ಮಹಾಯುದ್ಧವಾಗಿ ಬದಲಾಗುತ್ತಾ? ಎಂಬ ಆತಂಕದ ಕಾರ್ಮೋಡ ಕೂಡ ಆವರಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+