ಹಮಾಸ್ ಮುಖ್ಯಸ್ಥನ ಹತ್ಯೆ ನಂತರ ಇಸ್ರೇಲ್ ಮತ್ತಷ್ಟು ಅಲರ್ಟ್: ಮಧ್ಯಪ್ರಾಚ್ಯ ಕೊತ ಕೊತ!

ಹಮಾಸ್ ಮುಖ್ಯಸ್ಥನನ್ನ ಇಸ್ರೇಲ್ ಮಿಲಿಟರಿ ತನ್ನ ಕಾರ್ಯಾಚರಣೆಯಲ್ಲಿ ಭೀಕರವಾಗಿ ಹತ್ಯೆ ಮಾಡಿದೆ. ಯಾಹ್ಯಾ ಸಿನ್ವಾರ್ ಹಮಾಸ್ ನಾಯಕನಾಗಿ ಗುರಿತಿಸಿಕೊಂಡು ಸದ್ದು ಮಾಡುತ್ತಿದ್ದ. ಅಲ್ಲದೆ ಕಳೆದ ವರ್ಷ ಅಂದ್ರೆ, 2023ರ ಅಕ್ಟೋಬರ್ 7 ರಂದು ಇಸ್ರೇಲ್ ವಿರುದ್ದ ನಡೆದಿದ್ದ ದಾಳಿಯಲ್ಲಿ ಯಾಹ್ಯಾ ಸಿನ್ವಾರ್ ಕೈವಾಡ ಇತ್ತು ಎಂಬ ಆರೋಪ ಇತ್ತು. ಹೀಗಾಗಿಯೇ ತನ್ನ ಸೇನೆಗೆ ಯಾಹ್ಯಾ ಸಿನ್ವಾರ್ ಹತ್ಯೆ ಮಾಡಲು ಇಸ್ರೇಲ್ ಆದೇಶ ನೀಡಿತ್ತು.

ಇಸ್ರೇಲ್ ಆದೇಶ ಭಾರಿ ದೊಡ್ಡ ಮಟ್ಟದಲ್ಲಿ ಚರ್ಚೆಗೂ ಗ್ರಾಸವಾಗಿತ್ತು. ಹೀಗಿದ್ದಾಗ ಯಾಹ್ಯಾ ಸಿನ್ವಾರ್ ಮೃತಪಟ್ಟಿದ್ದು, ಭಾರಿ ದೊಡ್ಡ ತಲೆ ಉರುಳಿರುವ ಕಾರಣಕ್ಕೆ ಸಂಚಲನ ಸೃಷ್ಟಿಯಾಗಿ ಇಸ್ರೇಲ್ ಅಲರ್ಟ್ ಘೋಷಿಸಿದೆ. ಈಗಾಗಲೇ ಹಲವು ದೇಶಗಳನ್ನ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಎದುರು ಹಾಕಿಕೊಂಡು ಬಾಳುತ್ತಿದ್ದು, ಇರಾನ್‌ನ ಜೊತೆಗೆ ದೊಡ್ಡ ಯುದ್ಧದ ವಾತಾವರಣ ಇದೀಗ ನಿರ್ಮಾಣ ಆಗಿದೆ. ಇಂತಹ ಸಮಯದಲ್ಲಿ ಹಮಾಸ್ ಬಂಡುಕೋರರು ಇಸ್ರೇಲ್ ಸೇನೆ ವಿರುದ್ಧ ರೊಚ್ಚಿಗೆದ್ದು ಮತ್ತಷ್ಟು ಭೀಕರ ದಾಳಿ ನಡೆಸುವ ಆತಂಕ ಆವರಿಸಿದೆ. ಹೀಗಾಗಿಯೇ ಇಸ್ರೇಲ್ ಏನು ಮಾಡಿದೆ ಗೊತ್ತಾ?

Israel Is On High Alert After Hamas Leader Yahya Sinwar Death

ಇಸ್ರೇಲ್ ಮೇಲೆ ಮತ್ತೆ ಮಿಸೈಲ್ ದಾಳಿ?

ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಮೃತಪಟ್ಟಿರುವ ಸುದ್ದಿ ಮತ್ತೊಮ್ಮೆ ಗಾಜಾಗೆ ಆಘಾತ ನೀಡಿದ್ದು, ಇದೀಗ ಗಾಜಾ ಸ್ಥಿತಿ ಇನ್ನಷ್ಟು ಸೂಕ್ಷ್ಮವಾಗಿದೆ. ಮತ್ತೊಂದು ಕಡೆ ಈ ಪರಿಸ್ಥಿತಿಯ ಲಾಭ ಪಡೆದು, ಬಂಡುಕೋರರ ಗುಂಪು ಇನ್ನೊಮ್ಮೆ ಇಸ್ರೇಲ್ ವಿರುದ್ಧ ಮಿಸೈಲ್ & ರಾಕೆಟ್ ಅಟ್ಯಾಕ್ ಮಾಡುವ ಭಯ ಆವರಿಸಿದೆ. ಇದೇ ಕಾರಣಕ್ಕೆ ಅಲರ್ಟ್ ಆಗಿರುವ ಇಸ್ರೇಲ್ ಸೇನೆ ಯಾವುದೇ ಪರಿಸ್ಥಿತಿ ಎದುರಿಸಲು ಇದೀಗ ಸನ್ನದ್ಧವಾಗಿದೆ. ಮತ್ತೊಂದು ಕಡೆ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ.

ಒಟ್ಟು ಮೂವರು ಹಮಾಸ್ ಮುಖಂಡರು...

ಇದೀಗ ಗಾಜಾದಲ್ಲಿ ಐಡಿಎಫ್ ಕಾರ್ಯಾಚರಣೆಯ ವೇಳೆ 3 ಜನ ಜೀವ ಬಿಟ್ಟಿದ್ದಾರೆ ಎನ್ನುತ್ತಿದೆ ಇಸ್ರೇಲ್. ಹೀಗೆ ಮೃತಪಟ್ಟ ಮೂವರ ಪೈಕಿ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಕೂಡ ಸೇರಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಅಂತೆ. ಅಲ್ಲದೆ ಮೃತಪಟ್ಟ ವ್ಯಕ್ತಿ ಯಾಹ್ಯಾ ಸಿನ್ವಾರ್ ಎಂಬುದನ್ನ ಗುರುತು ಪತ್ತೆ ಮಾಡಲು ಇದೀಗ ಇಸ್ರೇಲ್ ಮಿಲಿಟರಿ ಹಲವು ಫೋಟೋ ಕೂಡ ರಿಲೀಸ್ ಮಾಡಿದೆ. ಇದು ಗಾಜಾ ಪಟ್ಟಿ ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮವಾಗುವ ರೀತಿ ಮಾಡಿದೆ.

ಒಟ್ನಲ್ಲಿ ಇಸ್ರೇಲ್ & ಗಾಜಾ ನಡುವೆ ಯುದ್ಧ ಕೊನೆಯಾಗುವ ತನಕ ಇಂತಹದ್ದೇ ಪರಿಸ್ಥಿತಿ & ಭಯದ ವಾತಾವರಣ ಗ್ಯಾರಂಟಿ ಎನ್ನಬಹುದು. ಯಾಕಂದ್ರೆ, 2023ರ ಅಕ್ಟೋಬರ್ ತಿಂಗಳ ತನಕ ನೆಮ್ಮದಿಯಾಗಿ ಇದ್ದ ಮಧ್ಯಪ್ರಾಚ್ಯದಲ್ಲಿ ಬೆಂಕಿ ಹಚ್ಚಿದ್ದೇ ಗಾಜಾ & ಇಸ್ರೇಲ್ ಯುದ್ಧ. ಇದೇ ಕಾರಣಕ್ಕೆ ಗಾಜಾ ಪಟ್ಟಿ & ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲಿಸಲು ಚರ್ಚೆಯು ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+