ಇರಾನ್ ವಿಮಾನ ಅಪಘಾತ : 66 ಪ್ರಯಾಣಿಕರು ದುರಂತ ಸಾವು
ತೆಹರಾನ್, ಫೆಬ್ರವರಿ 18: ಇರಾನ್ನಿನ ವಾಣಿಜ್ಯ ವಿಮಾನವೊಂದು ಭಾನುವಾರದಂದು ಪತನಗೊಂಡಿದೆ. ವಿಮಾನದಲ್ಲಿದ್ದ ಎಲ್ಲಾ 66 ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ದುರಂತ ಅಂತ್ಯ ಕಂಡಿದ್ದಾರೆ ಎಂದು ಇರಾನ್ ಸರ್ಕಾರ ಪ್ರಕಟಿಸಿದೆ.
ಪ್ರತಿಕೂಲ ಹವಾಮಾನದಿಂದ ವಿಮಾನವು ನಿಯಂತ್ರಣ ತಪ್ಪಿ ಪರ್ವತವೊಂದಕ್ಕೆ ಡಿಕ್ಕಿ ಹೊಡೆದಿದೆ ನಂತರ ದಕ್ಷಿಣ ಇರಾನಿನ ಸೆಮಿರಾಮ್ ಪಟ್ಟಣದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ ಎಂದು ಐಎಸ್ಎನ್ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತೆಹರಾನ್ ನಿಂದ ಇಸ್ ಫಾಹಾನ್ ಪ್ರಾಂತ್ಯದ ಯಸೂಜ್ ಎಂಬ ಪುಟ್ಟ ಪಟ್ಟಣಕ್ಕೆ ವಿಮಾನ ತೆರಳುತ್ತಿತ್ತು.
We are following reports in media about an aircraft crash in Iran. We are currently looking for more details.
— Flightradar24 (@flightradar24) February 18, 2018
ತೆಹರಾನ್ ನಿಂದ ಸುಮಾರು 620 ಕಿ.ಮೀ ದೂರದಲ್ಲಿರುವ ಪರ್ವತವೊಂದಕ್ಕೆ ಅಸೆಮಾನ್ ಏರ್ ಲೈನ್ಸ್ ಗೆ ಸೇರಿದ ಎಟಿಆರ್ -72 ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.











Click it and Unblock the Notifications