ಅಮೆರಿಕ & ವಿಶ್ವಕ್ಕೆ "ಹಾರ್ಮುಜ್ ಜಲಸಂಧಿ"ಯ ಮೂಲಕ ಶಾಕ್ ಕೊಟ್ಟ ಇರಾನ್! ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ!

ನೀವು ಪ್ರಾರಂಭಿಸಿದ್ದೀರಿ, ನಾವು ಮುಕ್ತಾಯ ಮಾಡಲಿದ್ದೇವೆ ಎಂದು ಗುಡುಗಿರುವ ಇರಾನ್ ದೇಶವು ಭಾರೀ ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇರಾನ್‌ನ ಮೇಲೆ ಅಮೆರಿಕ ನೇರವಾಗಿ ದಾಳಿ ಮಾಡಿರುವುದಕ್ಕೆ ಭಾರೀ ಖಂಡನೆ ವ್ಯಕ್ತವಾಗಿದೆ. ಇರಾನ್ ದೇಶದ ಸಾರ್ವಭೌಮತ್ವದ ಮೇಲಿನ ದಾಳಿ ಇದಾಗಿದೆ. ಅಮೆರಿಕ, ಇಸ್ರೇಲ್ ಮೇಲೆ ನಾವು ಸೇಡು ತೀರಿಸಿಕೊಳ್ಳಲಿದ್ದೇವೆ ಎಂದು ಹೇಳಿದ್ದ ಇರಾನ್ ಇದೀಗ ಅಮೆರಿಕಗೆ ಶಾಕ್ ನೀಡುವುದಕ್ಕೆ ಮುಂದಾಗಿದ್ದು, ಹಾರ್ಮುಜ್ ಜಲಸಂಧಿಗೆ ಕೈಹಾಕಿದೆ.

ಇದು ಅಮೆರಿಕ ದೇಶವನ್ನು ಮಾತ್ರವಲ್ಲ ವಿಶ್ವದ ವಿವಿಧ ದೇಶಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದೇ ಕಾರಣದಿಂದ ಕಚ್ಚಾ ತೈಲ ಬೆಲೆಯು ಹೆಚ್ಚಳವಾಗಿ ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆ ಸಹಜವಾಗಿಯೇ ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ. ಹಾರ್ಮುಜ್ ಜಲಸಂಧಿ ಎನ್ನುವುದು ವಿಶ್ವದ ಪ್ರಮುಖ ವಾಣಿಜ್ಯ ಹಡಗುಗಳು ಸಾಗುವ ಸಮುದ್ರ ಭಾಗವಾಗಿದೆ.

Iran shocked America and world through Strait of Hormuz closed Prices of petroleum products increased

ಇರಾನ್ ದೇಶವು ನ್ಯೂಕ್ಲಿಯರ್ ಶಕ್ತಿಯನ್ನು ಹೊಂದುತ್ತಿದೆ ಎಂದು ವಿಶ್ವಸಂಸ್ಥೆಯ ವೇದಿಕೆ ಸೇರಿದಂತೆ ವಿವಿಧ ಪ್ರಮುಖ ವೇದಿಕೆಗಳಲ್ಲಿ ಇಸ್ರೇಲ್ ಆರೋಪ ಮಾಡಿಕೊಂಡೇ ಬಂದಿದೆ. ಮೊದ ಮೊದಲು ಈ ವಾದವನ್ನು ಅಮೆರಿಕ ಸಹ ಒಪ್ಪಿಕೊಂಡಿರಲಿಲ್ಲ. ಆದರೆ, ಜೂನ್ 22ರಂದು ಅಮೆರಿಕ ದೇಶವು ಇರಾನ್‌ನ ಮೂರು ನ್ಯೂಕ್ಲಿಯರ್ ಘಟಕಗಳನ್ನು ಸರ್ವನಾಶ ಮಾಡಿದೆ. ಅಲ್ಲದೇ ಮುಂದಿನ ಮೂರು ವರ್ಷದ ವರೆಗೆ ಇರಾನ್ ನ್ಯೂಕ್ಲಿಯರ್ ಉತ್ಪಾದನೆಯ ಕಡೆ ತಿರುಗಿಯೂ ನೋಡುವುದಿಲ್ಲ ಅಂತ ಹೇಳಿದೆ. ಇದೀಗ ಮೂರು ಪ್ರಮುಖ ನ್ಯೂಕ್ಲಿಯರ್ ಕೇಂದ್ರಗಳ ಮೇಲೆ ಅಮೆರಿಕ ಬಾಂಬ್ ದಾಳಿ ಮಾಡಿದ ಮೇಲೆ ಇರಾನ್‌ ಅಲರ್ಟ್‌ ಆಗಿದೆ. ಅಲ್ಲದೇ ಅಮೆರಿಕ ವಾಣಿಜ್ಯ ವಹಿವಾಟಿನ ಮೇಲೆ ಕಣ್ಣಿಟ್ಟಿದೆ!

ಹೌದು ಮಧ್ಯಪ್ರಾಚ್ಯದಿಂದಲೇ ವಿಶ್ವದ ಪ್ರಮುಖ ದೇಶಗಳಿಗೆ ಕಚ್ಚಾ ತೈಲ ಸರಬರಾಜು ಆಗುತ್ತದೆ. ಅಲ್ಲದೇ ಸಮುದ್ರ ಮಾರ್ಗವಾಗಿಯೇ ಇಂದಿಗೂ ಲಕ್ಷಾಂತರ ಮೆಟ್ರಿಕ್‌ ಟನ್ ಸರಕು - ಸಾಮಗ್ರಿಗಳನ್ನು ಸಾಗಿಸಲಾಗುತ್ತಿದೆ. ಈ ರೀತಿ ವಸ್ತುಗಳನ್ನು ಹಡಗುಗಳಲ್ಲಿ ಸಾಗಿಸುವುದಕ್ಕೆ ಹಾರ್ಮುಜ್ ಜಲಸಂಧಿಯು ಪ್ರಮುಖವಾಗಿದೆ. ಇದೀಗ ವಿಶ್ವದ ಪ್ರಮುಖ ತೈಲ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲು ಇರಾನ್‌ ಸಂಸತ್ತಿನಿಂದ ಅನುಮೋದನೆ ಸಿಕ್ಕಿದೆ. ಈ ಸಂಬಂಧ ಅಂತಿಮ ನಿರ್ಧಾರವನ್ನು ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿ ನಿರ್ಧರಿಸಲಿದೆ ಎಂದು ವರದಿಯಾಗಿದೆ.

ಹಾರ್ಮುಜ್ ಜಲಸಂಧಿ ಅಥವಾ ಸಮುದ್ರ ಮಾರ್ಗವು ವಿಶ್ವದ ಪ್ರಮುಖ ಸಮುದ್ರ ಮಾರ್ಗವಾಗಿದೆ. ಈ ಸಮುದ್ರ್ ಮಾರ್ಗವು ಕೋಳಿಯ ಕುತ್ತಿಗೆಯ ಆಕಾರದಲ್ಲಿ ಇದೆ. ಆದರೆ, ವಿಶ್ವದ ಶೇ 20ರಷ್ಟು ವಹಿವಾಟು ಈ ಮಾರ್ಗವಾಗಿಯೇ ನಡೆಯುತ್ತದೆ. ಇದು ಪ್ರಮುಖ ಚಾಕ್ ಪಾಯಿಂಟ್‌ಗಳಲ್ಲಿ ಒಂದಾಗಿದೆ.

ಈ ಮಾರ್ಗದ ಮೂಲಕ ವಿಶ್ವದ ತೈಲದ ಐದನೇ ಒಂದು ಭಾಗ ಹಾಗೂ ವಿಶ್ವದ ದ್ರವೀಕೃತ ಗ್ಯಾಸ್ ಪೂರೈಕೆಯ ಮೂರನೇ ಒಂದು ಭಾಗ ಈ ಮಾರ್ಗವನ್ನೇ ಅವಲಂಬಿಸಿದೆ. ಇರಾನ್‌ ಈ ರೀತಿಯ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದೇ ಹೇಳಲಾಗಿತ್ತು. ಆದರೆ, ಇರಾನ್ ನಿರ್ಧಾರವು ಅಮೆರಿಕ ಸೇರಿದಂತೆ ಹಲವು ದೇಶಗಳನ್ನು ಬೆಚ್ಚಿ ಬೀಳಿಸಿದೆ.

ಇನ್ನು ಈ ಜಲಸಂಧಿಯು ಪರ್ಷಿಯನ್ ಕೊಲ್ಲಿ ಅರೇಬಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರವನ್ನು ಸಂಪರ್ಕಿಸುತ್ತದೆ. ಕಿರಿದಾದ ಮಾರ್ಗವಾಗಿದ್ದು ಸುಮಾರು 33 ಕಿ.ಮೀ ಅಗಲವಿದೆ. ಇರಾನ್ ಅನ್ನು ಅರೇಬಿಯನ್ ಪರ್ಯಾಯ ದ್ವೀಪದಿಂದ ಬೇರ್ಪಡಿಸುತ್ತದೆ. ಜಲಮಾರ್ಗದಲ್ಲಿನ ಹಡಗು ಮಾರ್ಗಗಳು ಪ್ರತಿ ದಿಕ್ಕಿನಲ್ಲಿಯೂ ಮೂರು ಕಿಲೋಮೀಟರ್ ಅಗಲಕ್ಕೆ ಕಿರಿದಾಗಿದೆ. ಇದರ ನಿಯಂತ್ರಣ ಇರಾನ್‌ಗೆ ಸೇರಿದೆ ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+