ಇರಾನ್ ಧಗಧಗ, ಬೆಲೆ ಏರಿಕೆ ವಿರೋಧಿಸಿ ಬೀದಿಗೆ ಇಳಿದ ಜನ... Iran Protests
ಭಾರತಕ್ಕೆ ಪೆಟ್ರೋಲ್, ಡೀಸೆಲ್ ಸೇರಿ ತೈಲ ಸಂಪನ್ಮೂಲ ಸರಬರಾಜು ಮಾಡುವ ಮಧ್ಯಪ್ರಾಚ್ಯ ಭಾಗದಲ್ಲಿ ಈಗ ಮತ್ತೊಮ್ಮೆ ಪ್ರತಿಭಟನೆ & ಸೇಡಿನ ಕಿಚ್ಚು ಧಗಧಗಿಸಿದೆ. ಒಂದು ಕಡೆ ಗಾಜಾದ ಯುದ್ಧ ಇನ್ನೂ ನಿಂತಿಲ್ಲ, ಇತ್ತೀಚೆಗೆ ಇಸ್ರೇಲ್ ಮತ್ತು ಇರಾನ್ ಕೂಡ ಯುದ್ಧ ಮಾಡಿದ್ದವು. ಈ ಎಲ್ಲಾ ಘಟನೆಗಳ ಬೆನ್ನಲ್ಲೇ ಇರಾನ್ ಜನರು ಸ್ವತಃ ಅವರ ಸರ್ಕಾರದ ವಿರುದ್ಧವೇ ರೊಚ್ಚಿಗೆದ್ದು ಆಕ್ರೋಶ ಹೊರ ಹಾಕುತ್ತಿದ್ದಾರೆ. ಅದರಲ್ಲೂ ಬೆಲೆ ಏರಿಕೆ ಬಿಸಿ ನಡುವೆ ಇಡೀ ಇರಾನ್ ಹಿಂಸೆಯ ಕೂಪದಲ್ಲಿ ನರಳುವಂತೆ ಆಗಿದೆ. ಹಾಗಾದರೆ ಈಗ ಏನಾಗುತ್ತಿದೆ ಇರಾನ್ ನೆಲದಲ್ಲಿ? ಬನ್ನಿ ಈ ಬಗ್ಗೆ ಇಂಚಿಂಚು ಮಾಹಿತಿ ತಿಳಿಯೋಣ.
1) ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ
ಅಮೆರಿಕನ್ ಡಾಲರ್ ಎದುರು ಇರಾನಿಯನ್ ರಿಯಾಲ್ ಭಾರಿ ದೊಡ್ಡ ಕುಸಿತ ಕಂಡಿದೆ, ಈಗ ಪ್ರತಿ 1 ಅಮೆರಿಕನ್ ಡಾಲರ್ಗೆ ಬರೋಬ್ಬರಿ 42,125 ಇರಾನಿಯನ್ ರಿಯಾಲ್ ನೀಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇದೇ ಕಾರಣಕ್ಕೆ ಇರಾನ್ ದೇಶದಲ್ಲಿ ಹಣದುಬ್ಬರ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಮತ್ತೊಂದು ಕಡೆ ಜನ ಸಾಮಾನ್ಯರು ತಮ್ಮ ದಿನನಿತ್ಯದ ವಸ್ತುಗಳನ್ನು ಖರೀದಿಸುವುದು ಕೂಡ ಕಷ್ಟಕರವಾಗಿದೆ. ಆಹಾರ ಪದಾರ್ಥಗಳ ಸಮೇತ ಔಷಧಗಳ ಬೆಲೆ ಕೂಡ ಭಾರಿ ಏರಿಕೆಯ ಬಿಸಿ ಕಂಡಿದೆ. ಹೀಗಾಗಿಯೇ ಇರಾನ್ ನೆಲದಲ್ಲಿ ದಿಢೀರ್ ಪ್ರತಿಭಟನೆಗಳು ಭುಗಿಲೆದ್ದಿವೆ. ಇರಾನ್ನ ಸರ್ವೋಚ್ಚ ನಾಯಕ ಅಲಿ ಖಮೇನಿ ವಿರುದ್ಧ ಭಾರಿ ದೊಡ್ಡ ಪ್ರಮಾಣದಲ್ಲಿ ಆಕ್ರೋಶ ಮೊಳಗಿದೆ.

2) ಅಮೆರಿಕ ಕಡೆಯಿಂದಲೂ ಟೆನ್ಷನ್
ಇರಾನ್ ನೆಲದಲ್ಲಿ ಪ್ರತಿಭಟನೆ ಶುರುವಾಗಿರುವ ಸಮಯದಲ್ಲೇ ಅಮೆರಿಕ ಕೂಡ ಎಚ್ಚರಿಕೆ ಸಂದೇಶ ರವಾನೆ ಮಾಡಿದೆ. ಇರಾನ್ ತನ್ನ ನ್ಯೂಕ್ಲಿಯರ್ ಅಂದ್ರೆ ಪರಮಾಣು ಯೋಜನೆಗಳನ್ನ ಮತ್ತೊಮ್ಮೆ ಮುಂದುವರಿಸಲು ಪ್ರಯತ್ನ ಮಾಡುತ್ತಿದೆ. ಇದು ಹೀಗೆ ಮುಂದುವರಿದರೆ ಪರಿಸ್ಥಿತಿ ಸರಿ ಇರಲ್ಲ, ಎಂದು ಖುದ್ದು ಅಮೆರಿಕ ಅಧ್ಯಕ್ಷರು ಎಚ್ಚರಿಕೆ ನೀಡಿದ್ದರು. ಇದರ ಜೊತೆಗೆ ದೊಡ್ಡ ಮಟ್ಟದಲ್ಲಿ ಹೋರಾಟ ಕೂಡ ಆರಂಭವಾಗಿದೆ.
3) ಭಾರತಕ್ಕೆ ಇದರಿಂದ ಏನಾಗಲಿದೆ?
ಮಧ್ಯಪ್ರಾಚ್ಯ ಭಾಗದಲ್ಲಿ ಪ್ರಬಲ ದೇಶ ಎಂಬ ಹೆಸರು ಪಡೆದಿರುವ ಇರಾನ್ ಮೂಲ ಆದಾಯವೇ ತೈಲ ಮಾರಾಟ. ಅದರಲ್ಲೂ ನಮ್ಮ ದೇಶಕ್ಕೆ ಇರಾನ್ ದೇಶದಿಂದ ಭಾರಿ ಪ್ರಮಾಣದ ತೈಲವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ಇದೀಗ ಪ್ರತಿಭಟನೆಗಳು ಶುರುವಾಗಿರುವ ಕಾರಣಕ್ಕೆ ಈ ಹೋರಾಟ ಕೈಮೀರಿ ಹೋದರೆ ಭಾರತಕ್ಕೆ ಸರಬರಾಜು ಆಗುವ ತೈಲಕ್ಕೆ ಕೊಕ್ಕೆ ಬೀಳಲಿದೆಯಾ? ಎಂಬ ಚರ್ಚೆ ಕೂಡ ಶುರುವಾಗಿದೆ.
4) ಕಾಲೇಜು ವಿದ್ಯಾರ್ಥಿಗಳಿಂದ ಸಾಥ್
ಹೋರಾಟಕ್ಕೆ ಸಾಥ್ ಕೊಟ್ಟಿರುವ ಕಾಲೇಜು ವಿದ್ಯಾರ್ಥಿಗಳು ಇರಾನ್ ಬೀದಿ ಬೀದಿಗಳಲ್ಲಿ ಆಕ್ರೋಶ ಹೊರಹಾಕಿ, ಅಲಿ ಖಮೇನಿ ಅಧಿಕಾರ ಬಿಟ್ಟು ಕೆಳಗೆ ಇಳಿಯಬೇಕು ಎಂದು ಆಗ್ರಹ ಮಾಡುತ್ತಿದ್ದಾರೆ. ಜೊತೆಗೆ ಮಹಿಳೆಯರು ಕೂಡ ಹೋರಾಟದ ಅಖಾಡಕ್ಕೆ ಎಂಟ್ರಿ ಕೊಟ್ಟಿರುವುದು ಸಂಚಲನ ಹೆಚ್ಚು ಮಾಡಿದೆ. ಇಸ್ರೇಲ್ & ಅಮೆರಿಕ ದೇಶಗಳ ನಾಯಕರು ಇರಾನ್ ನೆಲದಲ್ಲಿ ನಡೆಯುತ್ತಿರುವ ಪ್ರತಿ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
5) ಭದ್ರತಾ ಪಡೆಗಳಿಂದ ಕಠಿಣ ಕ್ರಮ
ಪ್ರತಿಭಟನೆ ನಿಯಂತ್ರಿಸಲು ಈಗಾಗಲೇ ಲಕ್ಷಾಂತರ ಸೈನಿಕರು ಮತ್ತು ಪೊಲೀಸ್ ಸಿಬ್ಬಂದಿ ಹಗಲು ರಾತ್ರಿ ಲೆಕ್ಕಿಸದೆ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಕ್ಷಣಕ್ಷಣಕ್ಕೂ ಹಿಂಸೆಯ ಕಾವು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇರಾನ್ ಶತ್ರು ದೇಶಗಳು ಅಲರ್ಟ್ ಆಗಿವೆ. ಮಧ್ಯಪ್ರಾಚ್ಯದ ಈ ಪರಿಸ್ಥಿತಿಯನ್ನ ಇಡೀ ಜಗತ್ತು ನೋಡುತ್ತಿದ್ದು ಯಾವ ಕ್ಷಣದಲ್ಲಿ ಏನಾಗಬಹುದೋ? ಎಂಬ ಆತಂಕ ಇರಾನ್ ಪ್ರಜೆಗಳ ಎದೆಯಲ್ಲಿ ಆವರಿಸಿದೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ












Click it and Unblock the Notifications