ಅಮೆರಿಕ ವಿರುದ್ಧ ಪ್ರತೀಕಾರಕ್ಕೆ ಇರಾನ್ ಸಜ್ಜು

ಟೆಹ್ರಾನ್, ಜನವರಿ 6: ಅಮೆರಿಕ ವಿರುದ್ಧ ಪ್ರತೀಕಾರಕ್ಕೆ ಇರಾನ್ ಸಜ್ಜುಗೊಂಡಿದೆ. ಇರಾನ್ ಸೇನೆಯ ಪ್ರಮುಖ ಕಮಾಂಡರ್ ಸುಲೈಮಾನಿ ಉಭಯ ದೇಶಗಳ ನಡುವಣ ಸಂಘರ್ಷ ಮತ್ತಷ್ಟು ವಿಕೋಪಕ್ಕೆ ಹೋಗಿದೆ.

ದಾಳಿ ನಡೆಸುವ ಸಲುವಾಗಿ ಅಮೆರಿಕದ ವಿವಿಧ 35 ತಾಣಗಳನ್ನು ಗುರುತಿಸಿರುವ ಇರಾನ್ , ಪ್ರತೀಕಾರದ ದ್ಯೋತಕವಾಗಿ ತನ್ನ ಮಸೀದಿಯೊಂದರ ಪವಿತ್ರ ಗುಮ್ಮಟದ ಮೇಲೆ ಕೆಂಪು ಬಾವುಟ ಹಾರಿಸಿದೆ.

ಮಸೀದಿ ಮೇಲೆ ಕೆಂಪು ಬಾವುಟ ಪ್ರತೀಕಾರದ ಸೂಚನೆ

ಮಸೀದಿ ಮೇಲೆ ಕೆಂಪು ಬಾವುಟ ಪ್ರತೀಕಾರದ ಸೂಚನೆ

ಮಸೀದಿಯೊಂದರ ಪವಿತ್ರ ಗುಮ್ಮಟದ ಮೇಲೆ ಕೆಂಪು ಬಾವುಟ ಹಾರಿಸಿದೆ. ಶಿಯಾ ಸಂಪ್ರದಾಯದ ಪ್ರಕಾರ ಈ ರೀತಿ ಮಸೀದಿ ಮೇಲೆ ಕೆಂಪು ಬಾವುಟ ಹಾರಿಸುವುದು ರಕ್ತಪಾತ ಸಹಿತ ಪ್ರತೀಕಾರ ತೆಗೆದುಕೊಳ್ಳುವ ಸೂಚನೆಯಾಗಿದೆ. ಆದರೆ ಇದಕ್ಕೆ ತೀಕ್ಷ್ಣ ರೀತಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನಿನಲ್ಲಿ ದಾಳಿ ನಡೆಸಬಹುದಾದ 52 ತಾಣಗಳನ್ನು ನಾವು ಗುರುತಿಸಿದ್ದೇವೆ ಎಂದಿದ್ದಾರೆ.

ಪ್ರತೀಕಾರಕ್ಕೆ ಮುಂದಾದರೆ ತಿರುಗೇಟು

ಪ್ರತೀಕಾರಕ್ಕೆ ಮುಂದಾದರೆ ತಿರುಗೇಟು

ಪ್ರತೀಕಾರದ ಕ್ರಮಕ್ಕೆ ಆ ದೇಶ ಏನಾದರೂ ಮುಂದಾದರೆ ಭಾರಿ ಬಲಿಷ್ಠ ರೀತಿಯಲ್ಲಿ ತಿರುಗೇಟು ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಅಬ್ಬರಿಸಿದ್ದಾರೆ. ಈ ನಡುವೆ ತಮ್ಮ ತಂದೆಯ ಹತ್ಯೆ ನಮ್ಮನ್ನು ಛಿದ್ರಗೊಳಿಸುವುದಿಲ್ಲ ಎಂದು ಅಬ್ಬರಿಸಿರುವ ಸುಲೈಮಾನಿ ಪುತ್ರಿ ಜೈನಾಬ್ ಸುಲೈಮಾನಿ ನಮ್ಮ ತಂದೆಯ ರಕ್ತ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಆಕ್ರೋಶಭರಿತ ನುಡಿಗಳನ್ನಾಡಿದ್ದಾರೆ.

ಅಮೆರಿಕ ಸೇನಾ ನೆಲೆ ಮೇಲೆ ದಾಳಿ

ಅಮೆರಿಕ ಸೇನಾ ನೆಲೆ ಮೇಲೆ ದಾಳಿ

ಒಂದೆಡೆ ಇರಾನ್ ಬಳಿ ಎಚ್ಚರಿಕೆ ನೀಡುತ್ತಿದ್ದರೆ ಇನ್ನೊಂದೆಡೆ ಅಮೆರಿಕದ ಸೇನಾ ನೆಲೆ ಮೇಲೆ ಉಗ್ರರ ದಾಳಿ ನಡೆಸಿದೆ. ಕೀನ್ಯಾದ ಕರಾವಳಿ ಭಾಗದ ಲಾಮು ಪ್ರದೇಶದಲ್ಲಿರುವ ಅಮೆರಿಕ ಹಾಗೂ ಕೀನ್ಯಾ ವಾಯು ನೆಲೆಯ ಮೇಲೆ ಅಲ್ ಖೈದಾ ನಂಟು ಹೊಂದಿರುವ ಸೊಮಾಲಿಯಾದ ಅಲ್-ಶಬಾಬ್ ಉಗ್ರ ಸಂಘಟನೆ ಭಾನುವಾರ ಮುಂಜಾನೆ ಬಾಂಬ್ ದಾಳಿ ನಡೆಸಿದೆ.

ತಂದೆಯ ರಕ್ತಕ್ಕೆ ಪ್ರತೀಕಾರ ತೀರಿಸಿಕೊಳ್ಳೋರ್ಯಾರು?

ತಂದೆಯ ರಕ್ತಕ್ಕೆ ಪ್ರತೀಕಾರ ತೀರಿಸಿಕೊಳ್ಳೋರ್ಯಾರು?

ತಮ್ಮ ತಂದೆಯ ರಕ್ತಕ್ಕೆ ಯಾರು ಪ್ರತೀಕಾರ ತೀರಿಸಿಕೊಳ್ಳುತ್ತಾರೆ ಎಂದು ಸುಲೈಮಾನಿ ಅವರ ಪುತ್ರಿ ಇರಾನ್ ಅಧ್ಯಕ್ಷ ರೌಹಾನಿ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಅವರು, ನಾವು ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಅಮೆರಿಕದ 35 ಪ್ರಮುಖ ಆಸ್ತಿಗಳನ್ನು ಇರಾನ್ ಗುರುತಿಸಿದೆ. ಅಲ್ಲದೆ ಟೆಹ್ರಾನ್‌ನಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಖೋಮ್ ನಗರದಲ್ಲಿರುವ ಜಮರಕನ್ ಮಸೀದಿಯಲ್ಲಿನ ಪವಿತ್ರ ಗುಮ್ಮಟದ ಮೂಲಕ ಪ್ರತೀಕಾರದ ಕುರಿತು ಬಹಿರಂಗ ಸಂದೇಶ ರವಾನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+