ದೈತ್ಯ ಮಿಲಿಟರಿ ಪಡೆ ಇರುವ ಇಸ್ರೇಲ್ ಮೇಲೆ ಇರಾನ್ ದಾಳಿ: ಪಾಕ್ ಸಹಾಯ ಹಸ್ತ ?!
Iran-Israel Conflict: ಇಸ್ರೇಲ್ ಹಾಗೂ ಇರಾನ್‌ನ ನಡುವೆ ಸಂಘರ್ಷ ಹೆಚ್ಚಾಗಿದೆ. ಇರಾನ್ ದೇಶವು ಅಣ್ವಸ್ತ್ರ ಅಭಿವೃದ್ಧಿಪಡಿಸುತ್ತಿದೆ ಎಂದು ಆರೋಪಿಸಿರುವ ಇಸ್ರೇಲ್ ದೇಶವು ಇರಾನ್ ದೇಶದ ಮೇಲೆ ಭಾರೀ ದಾಳಿ ನಡೆಸಿತ್ತು. ಈ ಎರಡೂ ದೇಶಗಳ ನಡುವೆ ಧರ್ಮ ಹಾಗೂ ಭೌಗೋಳಿಕ ಕಾರಣಗಳಿಗೆ ಯುದ್ಧ ಮುಂದುವರಿದಿದೆ. ಹಲವು ದಶಕಗಳಿಂದ ಈ ಎರಡೂ ದೇಶಗಳ ನಡುವೆ ಯುದ್ಧ ನಡೆಯುತ್ತಲ್ಲೇ ಇದೆ. ಇಸ್ರೇಲ್ ದೇಶಕ್ಕೆ ಈಗಾಗಲೇ ಇರಾನ್ ಎಚ್ಚರಿಕೆ ನೀಡಿತ್ತು. ನಮ್ಮ ಮೇಲಿನ ದಾಳಿ ಮಾಡುವ ಮೂಲಕ ಇಸ್ರೇಲ್ ದೇಶವು ಮೂರ್ಖತನವನ್ನು ಪ್ರದರ್ಶನ ಮಾಡಿದೆ. ಇದಕ್ಕೆ ತಕ್ಕ ಉತ್ತರವನ್ನು ನಾವು ನೀಡಲಿದ್ದೇವೆ ಎಂದು ಈಗಾಗಲೇ ಇರಾನ್ ಹೇಳಿತ್ತು. ಇದೀಗ ಇಸ್ರೇಲ್‌ನ ಮೇಲೆ ಇರಾನ್ ದೇಶವು ಭಾರೀ ವಾಯು ದಾಳಿ ಮಾಡಿದ್ದು ಬಾಂಬ್‌ಗಳ ಸುರಿಮಳೆಯನ್ನೇ ಸುರಿಸಿದೆ.
ಇಸ್ರೇಲ್ ದೇಶದಲ್ಲಿ ಜನ ಹೆಚ್ಚಾಗಿರುವ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ಇರಾನ್ ಭಾರೀ ದೊಡ್ಡ ಮಟ್ಟದ ಕ್ಷಿಪಣಿ ದಾಳಿಗಳನ್ನು ಮಾಡುತ್ತಿದೆ. ಇರಾನ್ ಕ್ಷಿಪಣಿ ದಾಳಿಗಿಂತಲೂ ಮುಂಚೆ ಇಸ್ರೇಲ್ ದೇಶದಾದ್ಯಂತ ಸೈರನ್ ಸದ್ದು ಮೊಳಗಿದೆ. ಇದರ ಬೆನ್ನಲ್ಲೇ ಮಳೆ ಬಂದಂತೆ ಕ್ಷಿಪಣಿಗಳ ಸುರಿಮಳೆಯಾಗಿದೆ. ಇಸ್ರೇಲ್ ದೇಶವು ಇರಾನ್‌ನ ವಾಯು ಪ್ರದೇಶಗಳನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲ್ ಹೇಳಿದ ಬೆನ್ನಲ್ಲೇ ಇರಾನ್ ಈ ಭೀಕರ ವಾಯು ದಾಳಿಯನ್ನು ಮಾಡಿದೆ.

ಇಸ್ರೇಲ್ ದೇಶದ ಮಿಲಿಟರಿ ಪಡೆಗಳು ಇರಾನ್‌ನ ಮೇಲೆ ದಾಳಿಗಳಿಗೆ ಇದು ಉತ್ತರ ಎಂದು ಇರಾನ್ ಹೇಳಿದೆ. ಒಟ್ಟಾರೆ ಈ ಎರಡೂ ದೇಶಗಳ ನಡುವಿನ ಯುದ್ಧವು ಇನ್ನಷ್ಟು ಭೀಕರ ಸ್ವರೂಪವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಭಾರತವು ಶೇ90 ರಷ್ಟು ಕಚ್ಚಾ ತೈಲಕ್ಕೆ ಮಧ್ಯಪ್ರಾಚ್ಯದ ಮೇಲೆಯೇ ಅವಲಂಬಿಸಿದೆ. ಹೀಗಾಗಿ, ಈ ಎರಡೂ ದೇಶಗಳ ನಡುವಿನ ಯುದ್ಧವು ಭಾರೀ ಬೆಲೆ ಏರಿಕೆಗೆ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ಇಸ್ರೇಲ್ ಬಲಿಷ್ಠ ಸೇನೆಯನ್ನು ಹೊಂದಿದೆ. ಈ ರೀತಿ ಇರುವಾಗಲೇ ಇಸ್ರೇಲ್‌ನ ಮೇಲೆ ಇರಾನ್ ಭೀಕರ ದಾಳಿಯನ್ನು ಮಾಡಿದೆ. ಇರಾನ್ ದೇಶವು ನಮಗೆ ಪಾಕಿಸ್ತಾನದ ಬೆಂಬಲವಿದೆ. ಪಾಕಿಸ್ತಾನದ ನ್ಯೂಕ್ಲಿಯರ್ ಬಾಂಬ್ ಅನ್ನು ನಾವು ಇಸ್ರೇಲ್ ಮೇಲೆ ಬಳಸಲಿದ್ದೇವೆ ಎಂದು ಹೇಳಿದ ಮೇಲೆ ಇರಾನ್‌ನ ಮೇಲೆ ಇಸ್ರೇಲ್ ದಾಳಿ ಮಾಡುವುದು ಇನ್ನಷ್ಟು ತೀವ್ರವಾಗಿತ್ತು. ಆದರೆ, ಇಸ್ರೇಲ್ ಹಾಗೂ ಇರಾನ್ ದೇಶಗಳ ನಡುವಿನ ಯುದ್ಧದಲ್ಲಿ ಇದೇ ಮೊದಲ ಬಾರಿ ಪಾಕಿಸ್ತಾನದ ಹೆಸರು ಕೇಳಿ ಬರುತ್ತಿದೆ.
ಇದು ಜಗತ್ತಿನ ಆಕ್ರೋಶಕ್ಕೂ ಕಾರಣವಾಗಿದೆ. ಈಚೆಗೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ನಡೆದ ಸಂದರ್ಭದಲ್ಲೂ ನ್ಯೂಕ್ಲಿಯರ್ ಬಾಂಬ್ ಬಳಕೆ ಮಾಡುವುದಾಗಿ ಪಾಕಿಸ್ತಾನ ಹೇಳಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾದ ಮೇಲೆ ಪಾಕಿಸ್ತಾನವು ತನ್ನ ಹೇಳಿಕೆಯಿಂದ ಹಿಂದೆ ಸರಿದಿತ್ತು. ಇದೀಗ ಬದ್ಧವೈರಿಗಳಂತೆ ಇರುವ ಇರಾನ್ - ಇಸ್ರೇಲ್ ಯುದ್ಧದಲ್ಲಿ ಪಾಕಿಸ್ತಾನವು ಮೂಗು ತೂರಿಸಿದೆ.












Click it and Unblock the Notifications