ಸಾಮಾಜಿಕ ಜಾಲತಾಣದ ಪೋಸ್ಟ್‌ನಿಂದ, 10 ವರ್ಷ ಜೈಲು ಶಿಕ್ಷೆಗೆ ಗುರಿಯಾದ ಇರಾನ್‌ನ ಇನ್‌ಸ್ಟಾಗ್ರಾಮ್ ಸ್ಟಾರ್
ತೆಹ್ರಾನ್, ಡಿಸೆಂಬರ್ 12: ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಿಂದಾಗಿ ಇರಾನ್ ಮೂಲದ ಇನ್‌ಸ್ಟಾಗ್ರಾಮ್ ಸ್ಟಾರ್ ಸಹರ್ ತಬರ್ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಲಕ್ಷಾಂತರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿರುವ ಸಹರ್ ತಬರ್ ಅವರ ನಿಜವಾದ ಹೆಸರು ಫಾತಿಮೆಹ್ ಖಿಶ್ವಾಂಡ್. ಈಕೆ ಹಾಲಿವುಡ್ ಸೂಪರ್‌ಸ್ಟಾರ್ ಏಂಜೆಲಿನಾ ಜೋಲಿ ಅವರನ್ನು ಹೋಲುವ 'ಜೊಂಬಿ ಆವೃತ್ತಿಯನ್ನು' ಹೋಲುವಂತೆ ಮೇಕಪ್‌ನಲ್ಲಿ ಕಾಣಿಸಿಕೊಂಡು ಫೋಟೊವನ್ನು ಹಂಚಿಕೊಂಡಿದ್ದರು. ಈಕೆಯ ಪೋಸ್ಟ್‌ಗಳು ಆರಂಭದಲ್ಲೀ ತಮಾಷೆಯಾಗಿ ಕಂಡು ಬಂದು, ನಂತರದಲ್ಲಿ ಭಾರೀ ವೈರಲ್ ಆಗಿತ್ತು.

2019ರಲ್ಲಿ ಸಹರ್ ತಬರ್ ಬಂಧನ
ಸಹರ್ ತಬರ್ ತಮ್ಮ ವಿಚಿತ್ರ ಫೋಟೋಗಳ ಮೂಲಕ ಸಾಕಷ್ಟು ಬೇಗನೆ ಪ್ರಚಾರ ಪಡೆದುಕೊಂಡರು. ಈಕೆಯ ವಿಚಿತ್ರ ಪೋಸ್ಟ್‌ಗಳನ್ನು ಕಂಡು ಫಾಲೋವರ್ಸ್ ಕೂಡ ಹೆಚ್ಚಾದರು. ಇದು ಸ್ಥಳೀಯ ಆಡಳಿತದ ಕಣ್ಣಿಗೂ ಬಿತ್ತು, ಈಕೆಯನ್ನು ಅಕ್ಟೋಬರ್ 5, 2019 ರಂದು ಇರಾನ್‌ನಲ್ಲಿ ಬಂಧಿಸಲಾಯಿತು. ಜೊತೆಗೆ ಇತರ ಮೂವರು ಮಹಿಳಾ ಇನ್‌ಸ್ಟಾಗ್ರಾಮ್ ಪ್ರಭಾವಿಗಳನ್ನು ಕೂಡ ಸ್ಥಳೀಯ ಪೊಲೀಸರು ಬಂಧಿಸಿದರು.

ಒಂದು ವರ್ಷದ ವಿಚಾರಣೆ ಬಳಿಕ 10 ವರ್ಷ ಜೈಲು ಶಿಕ್ಷೆ
ಕಳೆದ ಒಂದು ವರ್ಷದಿಂದ ಬಂಧನದಲ್ಲಿದ್ದ ಈಕೆಗೆ ಇದೀಗ 10 ವರ್ಷ ಜೈಲು ಶಿಕ್ಷೆ ದೃಢವಾಗಿದೆ. ಇರಾನಿನ ಪತ್ರಕರ್ತ ಮಾಸಿಹ್ ಅಲಿನೆಜಾದ್ ಅವರು ಮೇಲ್ಆನ್‌ಲೈನ್‌ಗೆ ಮಾತನಾಡುತ್ತಾ, ತಾನು ತಬಾರ್ ಅವರ ವಕೀಲರೊಂದಿಗೆ ಮಾತನಾಡಿದ್ದು, ಅವರು ‘ಸಾರ್ವಜನಿಕ ಭ್ರಷ್ಟಾಚಾರವನ್ನು ಉತ್ತೇಜಿಸಿದ್ದಕ್ಕಾಗಿ' ಈ ವಾರ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ದೃಢಪಡಿಸಿದರು ಎಂದು ತಿಳಿಸಿದ್ದಾರೆ.
ಸಹರ್ ತಬರ್‌ರ ವಕೀಲರೆ ಸ್ವತಃ ಆಕೆಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂಬುದನ್ನು ದೃಢಪಡಿಸಿದ್ದಾರೆ ಎಂದು ಮೆಟ್ರೋ.ಕೊ.ಯುಕೆ ವರದಿ ಮಾಡಿದೆ.

Recommended Video

ಇರಾನ್‌ನಲ್ಲಿ ಇನ್‌ಸ್ಟಾಗ್ರಾಮ್ ಬಳಕೆಗೆ ಮಾತ್ರ ಅನುಮತಿ ಇದೆ
ಆಶ್ಚರ್ಯ ಏನಂದ್ರೆ ಇರಾನ್‌ನಲ್ಲಿ ಅಧಿಕೃತವಾಗಿ ಬಳಸಲು ಅನುಮತಿ ನೀಡಿರುವ ಏಕೈಕ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಆಗಿದ್ದು, ಸಹರ್ ತಬರ್ ತಮ್ಮ ಎಡಿಟೆಡ್ ಫೋಟೊಗಳನ್ನು ಹರಿಬಿಟ್ಟ ಬಳಿಕ 4,86,000 ಫಾಲೋವರ್ಸ್ ಹೆಚ್ಚಾಗಿದ್ದರು.

Click it and Unblock the Notifications