• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೂಚನೆ ನೀಡದೆ ಬಂದು ವಿಜ್ಞಾನಿಗಳಿಗೇ ಅಚ್ಚರಿ ನೀಡಿದ ಸುನಾಮಿ!

|

ಪಲು(ಇಂಡೋನೇಷ್ಯಾ), ಅಕ್ಟೋಬರ್ 04: ಸುಮಾರು 1400ಕ್ಕೂ ಹೆಚ್ಚು ಜನರ ಪ್ರಾಣವನ್ನು ಕಸಿದ ಇಂಡೋನೇಷ್ಯಾದ ಭೂಕಂಪ ಮತ್ತು ಸುನಾಮಿ ವಿಜ್ಞಾನಿಗಳಲ್ಲೇ ಅಚ್ಚರಿ ಮೂಡಿಸಿದೆ.

ಸಮುದ್ರದ ಅಂಚಿನಲ್ಲಿರುವ ಯಾವುದೇ ಪ್ರದೇಶದಲ್ಲಿ ಭೂಕಂಪವಾದರೆ, ಅದರಲ್ಲೂ ಇಂಡೋನೇಷ್ಯಾದಲ್ಲಿ ಇತ್ತೀಚೆಗೆ ಆದಂತೆ 7.5 ತೀವ್ರತೆಯಷ್ಟು ಭಾರೀ ಭೂಕಂಪವಾದರೆ, ಸುನಾಮಿ ಎಚ್ಚರಿಕೆ ನೀಡುವುದು ಮಾಮೂಲು. ಆದರೆ ಅಂದು ಸುನಾಮಿಯ ಸೂಚನೆಯೇ ವಿಜ್ಞಾನಿಗಳಿಗೆ ಸಿಕ್ಕಿರಲಿಲ್ಲ!

ವೈರಲ್ ವಿಡಿಯೋ: ಭೂಕಂಪ-ಸುನಾಮಿ ನಂತರ ಹೇಗಾಗಿದೆ ನೋಡಿ ಇಂಡೋನೇಷ್ಯಾ

ಯಾವ ಸೂಚನೆಯನ್ನೂ ನೀಡದೆ ಹಠಾತ್ತಾಗಿ ಬಂದ ಸುನಾಮಿ, ಪಲು ಪ್ರದೇಶವನ್ನು ತನ್ನ ರಕ್ಕಸ ಅಲೆಯಲ್ಲಿ ಚೆಲ್ಲಾಪಿಲ್ಲಿ ಮಾಡಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರವೇ ಸಿಗದೆ ವಿಜ್ಞಾನಿಗಳು ತಲೆ ಕೆರೆದುಕೊಳ್ಳುವಂತಾಗಿದೆ.

ಸೆ.28 ರಂದು ಭುಕಂಪದ ಮುನ್ಸೂಚನೆ ನೀಡಿ ತರುವಾಯ ನಿರಂತರವಾಗಿ ಸುಮಾರು ಮೂರು ಗಂಟೆಗಳಷ್ಟು ಕಾಲ ಸಾಗರದ ಏರಿಳಿತದ ಅಧ್ಯಯನ ನಡೆದಿತ್ತು. ಸುನಾಮಿಯ ಮುನ್ಸೂಚನೆ ಸಿಗುತ್ತದೆಯೇ ಎಂದು ಅಭ್ಯಸಿಸಲಾಗಿತ್ತು. ಆದರೆ ಯಾವುದೇ ಮುನ್ಸೂಚನೆಯೂ ಸಿಗದಿದ್ದರಿಂದ ಮೊದಲೇ ಮುನ್ನೆಚ್ಚರಿಕೆ ನೀಡಲಾಗಿರಲಿಲ್ಲ.

ಚರ್ಚಿನಲ್ಲಿ 34 ಮಕ್ಕಳ ದುರಂತ ಸಾವು, ಬಗೆದಷ್ಟೂ ಸಿಗುತ್ತಿವೆ ಶವಗಳು!

ಆದರೆ ಏಕಾಏಕಿಯಾಗಿ ಸುನಾಮಿ ಆರಂಭವಾಗಿ ನೂರಾರು ಜನ ಪ್ರಾಣ ಕಳೆದುಕೊಳ್ಳಬೇಕಾಯ್ತು. ಪಲು ಪ್ರದೇಶದಲ್ಲಿ ಉಂಟಾದ ಸುನಾಮಿ ತೀರಾ ವಿಚಿತ್ರವಾಗಿತ್ತು ಎದು ವಿಜ್ಞಾನಿಗಳೇ ಹೇಳಿದ್ದಾರೆ.

English summary
In a surprising thing, this time when Tsunami hits Indonesia, scientists even didn't have any indication.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X