500 ವಿಮಾನಗಳ ಖರೀದಿಗೆ ಮುಂದಾದ ಇಂಡಿಗೋ ಏರ್‌ಲೈನ್ಸ್‌, ಯಾಕೆ ಈ ನಿರ್ಧಾರ?, ಇಲ್ಲಿದೆ ವಿವರ

ಏರ್ ಇಂಡಿಯಾ ದಾರಿಯನ್ನೇ ಹಿಡಿದ ಇಂಡಿಗೋ ಸಂಸ್ಥೆಯು ಕೂಡ 500 ವಿಮಾನಗಳನ್ನು ಖರೀದಿಸಲು ಮುಂದಾಗಿದ್ದು, ಈ ಬಗ್ಗೆ ಅಂತಾರಾಷ್ಟ್ರೀಯ ವ್ಯಾಪಾರ ಮುಖ್ಯಸ್ಥ ಏನು ಹೇಳಿದ್ದಾರೆ ಅನ್ನುವುದನ್ನು ನೋಡೋಣ ಬನ್ನಿ.

ನವದೆಹಲಿ, ಫೆಬ್ರವರಿ, 18: ಇತ್ತೀಚೆಗಷ್ಟೇ ಏರ್‌ ಇಂಡಿಯಾ ಏರ್‌ಲೈನ್ಸ್ ಸಂಸ್ಥೆಯು 470 ವಿಮಾನಗಳನ್ನು ಖರೀದಿಗೆ ಮುಂದಾಗಿ ಗಮನ ಸೆಳೆದಿತ್ತು. ಹಾಗೆಯೇ ಈ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸುದ್ದಿಯೂ ಆಗಿತ್ತು. ಇದೀಗ ಏರ್ ಇಂಡಿಯಾ ದಾರಿಯನ್ನೇ ಹಿಡಿದ ಇಂಡಿಗೋ ಸಂಸ್ಥೆಯು ಕೂಡ 500 ವಿಮಾನಗಳನ್ನು ಖರೀದಿಸಲು ಮುಂದಾಗಿದೆ. ಹಾಗಾದರೆ ಈ ಬಗ್ಗೆ ಅಂತಾರಾಷ್ಟ್ರೀಯ ವ್ಯಾಪಾರ ಮುಖ್ಯಸ್ಥ ಏನು ಹೇಳಿದ್ದಾರೆ ಅನ್ನುವುದನ್ನು ನೋಡೋಣ ಬನ್ನಿ.

ತನ್ನ ವ್ಯಾಪ್ತಿಯನ್ನು ಯುರೋಪ್‌ಗೆ ವಿಸ್ತರಿಸಲು ಟರ್ಕಿಶ್ ಏರ್‌ಲೈನ್ಸ್ ಸಹಭಾಗಿತ್ವದಲ್ಲಿ 500 ವಿಮಾನಗಳನ್ನ ಖರೀದಿಸಲು ಇಂಡಿಗೋ ಏರ್‌ಲೈನ್ಸ್ ಮುಂದಾಗಿದೆ ಎಂದು ಅಂತಾರಾಷ್ಟ್ರೀಯ ವ್ಯಾಪಾರ ಮುಖ್ಯಸ್ಥ ವಿನಯ್ ಮಲ್ಹೋತ್ರಾ ಮಾಹಿತಿ ನೀಡಿದ್ದಾರೆ.

ಇದರಿಂದ ಭಾರತ-ಇಸ್ತಾಂಬುಲ್ ಮತ್ತು ಯುರೋಪ್ ನಡುವೆ ಪ್ರಯಾಣ ಮಾಡುವವರಿಗೆ ಹೆಚ್ಚು ಅನುಕೂಲವಾಗಲಿದೆ. ಏರ್‌ಲೈನ್ಸ್ ಅಧಿಕಾರಿಗಳ ಮಾಹಿತಿಯ ಪ್ರಕಾರ, ಇಂಡಿಗೋ ಯುರೋಪಿಯನ್ ದೈತ್ಯ ಏರ್‌ಬಸ್ ಹಾಗೂ ಯುಎಸ್ ಬೋಯಿಂಗ್ ಎರಡರಿಂದಲೂ ವಿಮಾನ ಖರೀದಿಗೆ ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

IndiGo has ordered 500 Aircraft, here see details

ವಿನಯ್ ಮಲ್ಹೋತ್ರಾ ಹೇಳಿದ್ದೇನು?

ಈ ಬಗ್ಗೆ ಮಾತನಾಡಿದ ವಿನಯ್ ಮಲ್ಹೋತ್ರಾ, ಇಂಡಿಗೋ ಪ್ರಸ್ತುತ 1,800 ವಿಮಾನಗಳನ್ನು ಹಾರಾಡುತ್ತಿವೆ. ಇವುಗಳಲ್ಲಿ 10 ಪ್ರತಿಶತದಷ್ಟು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಮತ್ತೆ ಮುಂದುವರೆಗೂ ಇಂಡಿಗೋ ಇನ್ನೂ 500 ವಿಮಾನಗಳ ಖರೀದಿಗೆ ಮುಂದಾಗಿದೆ. ಆದ್ದರಿಂದ ಟರ್ಕಿ ಏರ್‌ಲೈನ್‌ನೊಂದಿಗೆ ಪಾಲುದಾರಿಕೆ ಹೊಂದಲು ನಿರ್ದಾರ ಮಾಡಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

IndiGo has ordered 500 Aircraft, here see details

ಇತ್ತೀಚೆಗಷ್ಟೇ ಏರ್ ಇಂಡಿಯಾ 470 ವಿಮಾನಗಳನ್ನು ಖರೀದಿಸಿತ್ತು. ಇದರ ಹೆಸರನ್ನು ಪ್ರಸ್ತಾಪಿಸದೇ ಮಾತನಾಡಿದ ಅವರು, ಸ್ಪರ್ಧೆಯನ್ನು ಯಾವಾಗಲೂ ಸ್ವಾಗತಿಸುತ್ತೇವೆ. ಭಾರತದಲ್ಲಿ ಪಾಸ್‌ಪೋರ್ಟ್ ಹೊಂದಿದವರು ವಿದೇಶಕ್ಕೆ ಹಾರಲು ಇಷ್ಟಪಡುತ್ತಾರೆ. ಯಾಕೆಂದರೆ ಅವರು ವಿದೇಶದಲ್ಲಿ ವ್ಯಾಪಾರ ವಹಿವಾಟು ಮಾಡಲು, ಹಾಗೂ ಉತ್ತಮ ಬಾಂದವ್ಯವನ್ನು ಬೆಳೆಸಲು ಬಯಸುತ್ತಾರೆ. ಆದ್ದರಿಂದ ನಾವು ಭಾರತೀಯರನ್ನು ಗಡಿಯಾಚೆಗೆ ಕರೆದೊಯ್ಯಲು ಸೂಕ್ತ ಕ್ರಮ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+