ಆಸ್ಟ್ರೇಲಿಯಾದಲ್ಲಿ ಜನಾಂಗೀಯ ದಾಳಿ: ಭಾರತದ ವಿದ್ಯಾರ್ಥಿಗೆ 11 ಬಾರಿ ಚೂರಿ ಇರಿತ
ಸಿಡ್ನಿ/ನವದೆಹಲಿ, ಅಕ್ಟೋಬರ್ 14: ಆಸ್ಟ್ರೇಲಿಯಾದಲ್ಲಿ ಭಾರತದ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಅಕ್ಟೋಬರ್ 6ರಂದು ನಡೆದ ಹಲ್ಲೆಯು 'ಜನಾಂಗೀಯ ದಾಳಿ' ಎಂದು ಹೇಳಲಾಗುತ್ತಿದೆ. ಆಗ್ರಾದ 28 ವರ್ಷದ ವಿದ್ಯಾರ್ಥಿಯ ಮುಖ, ಎದೆ ಹಾಗೂ ಹೊಟ್ಟೆಗೆ 11 ಬಾರಿ ಇರಿಯಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ.
ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಶುಭಂ ಗರ್ಗ್ ಎಂಬಾತನ ಮೇಲೆ ದಾಳಿ ನಡೆದಿದೆ. ಈತ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಮಾಡುತ್ತಿದ್ದನೆಂದು ವರದಿಯಾಗಿದೆ.
ರಾತ್ರಿ 10:30ರ ಸೂಮಾರಿಗೆ ತನ್ನ ವಾಸಸ್ಥಳಕ್ಕೆ ಶುಭಂ ಹಿಂತಿರುಗುತ್ತಿದ್ದ. ಆ ವೇಳೆ, ಪೆಸಿಫಿಕ್ ಹೆದ್ದಾರಿಯಲ್ಲಿ ದುಷ್ಕರ್ಮಿಯೊಬ್ಬ ಶುಭಂ ಮೇಲೆ ಹಲ್ಲೆ ನಡೆಸಿದ್ದಾನೆ.

ಹಲ್ಲೆ ನಡೆಸಿದ ಆರೋಪಿಯನ್ನು 27 ವರ್ಷದ ಡೇನಿಯಲ್ ಎಂದು ಗುರುತಿಸಲಾಗಿದೆ. ಆತನನ್ನು ಘಟನಾ ಸ್ಥಳದಲ್ಲಿಯೇ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಚಾಟ್ಸ್‌ವುಡ್ ಪೊಲೀಸ್ ಠಾಣೆಯಲ್ಲಿರುವ ಆರೋಪಿ ಮೇಲೆ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಲಾಗಿದೆ.
ಆರೋಪಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆ ನಡೆಸಲಾಗಿದೆ. ಆತನಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ, ಡಿಸೆಂಬರ್ 14 ರಂದು ಮತ್ತೆ ವಿಚಾರಣೆಗೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿದೆ ಎಂದು ಆಸ್ಟ್ರೇಲಿಯಾ ಟುಡೇ ವರದಿ ಮಾಡಿದೆ.
ಆಸ್ಟ್ರೇಲಿಯಾ ಟುಡೇ ವರದಿ ಪ್ರಕಾರ, ಆರೋಪಿಯು ಶುಭಂಗೆ ದುಡ್ಡು ಹಾಗೂ ಫೋನ್ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಈ ಬೇಡಿಕೆಯನ್ನು ನಿರಾಕರಿಸಿದ ಶುಭಂಗೆ ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ. ಆ ನಂತರ ಓಡಿಹೋಗಲು ಯತ್ನಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಆಗ್ರಾದಲ್ಲಿ ನೆಲೆಸಿರುವ ಶುಭಂ ಪೋಷಕರು ತಮ್ಮ ಮಗನ ಮೇಲಿನ ಹಲ್ಲೆಯನ್ನು 'ಜನಾಂಗೀಯ ದಾಳಿ' ಎಂದು ಕರೆದಿದ್ದಾರೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಶುಭಂ ಪೋಷಕರು ಆಸ್ಟ್ರೇಲಿಯಾದ ವೀಸಾ ಪಡೆಯಲು ಒಂದು ವಾರದಿಂದ ಯತ್ನಿಸುತ್ತಿದ್ದಾರೆ. ಆದರೆ, ಅವರಿಗೆ ವೀಸಾ ಪಡೆಯಲು ಸಾಧ್ಯವಾಗಿಲ್ಲ.
ಈ ವಿಚಾರವಾಗಿ ಅಕ್ಟೋಬರ್ 12 ರಂದು ಟ್ವೀಟ್ ಮಾಡಿರುವ ಶುಭಂ ಸಹೋದರಿ ಕಾವ್ಯ ಗರ್ಗ್, 'ನನ್ನ ಸಹೋದರ ಶುಭಂ ಗರ್ಗ್ ಮೇಲೆ ಆಸ್ಟ್ರೇಲಿಯಾದಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆದಿದೆ. 28 ವರ್ಷದ ಆತನ ಮೇಲೆ ಸಿಡ್ನಿಯಲ್ಲಿ 11 ಬಾರಿ ಚಾಕುವಿನಿಂದ ಇರಿಯಲಾಗಿದೆ. ಇದು ಅಮಾನುಷ ದಾಳಿ. ಆತನ ಸ್ಥಿತಿ ಚಿಂತಾಜನಕವಾಗಿದೆ' ಎಂದು ತಿಳಿಸಿದ್ದಾರೆ.
'ನಮಗೆ ತಕ್ಷಣವೇ ಸಹಾಯ ಬೇಕಿದೆ. ನಮ್ಮ ಕುಟುಂಬ ಸದಸ್ಯರಿಗೆ ತುರ್ತು ವೀಸಾವನ್ನು ನೀಡಲು ನಾವು ಕೋರುತ್ತೇವೆ' ಎಂದು ಭಾರತ ಸರ್ಕಾರಕ್ಕೆ ಕಾವ್ಯ ಮನವಿ ಮಾಡಿದ್ದಾರೆ.
ಇದಕ್ಕೆ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿರುವ ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ , 'ಶುಭಂ ಸಹೋದರಿಯ ವೀಸಾ ಅರ್ಜಿ ಪ್ರಕ್ರಿಯೆಯಲ್ಲಿದೆ. ನಾವು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಮಾತನಾಡಿದ್ದೇವೆ. ವೀಸಾಗಾಗಿ ಸಿಡ್ನಿಯಲ್ಲಿರುವ ರಾಯಭಾರ ಕಚೇರಿ ಅಧಿಕಾರಿಗಳನ್ನೂ ಸಂಪರ್ಕಿಸಿದ್ದೇನೆ. ಆದಷ್ಟು ಬೇಗನೇ ವೀಸಾ ವ್ಯವಸ್ಥೆ ಮಾಡುತ್ತೇವೆ' ಎಂದು ಹೇಳಿದ್ದಾರೆ.
ಆಸ್ಟೇಲಿಯಾದಲ್ಲಿ ಭಾರತೀಯರ ಮೇಲೆ ಜನಾಂಗೀಯ ದಾಳಿ ನಡೆದಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಜನಾಂಗೀಯ ದಾಳಿ ನಡೆದಿದ್ದು, ಹಲವು ಭಾರತೀಯರು ಕೊಲೆಯಾಗಿದ್ದಾರೆ.
My brother Shubham Garg, 28,from UP, was brutually attacked in Sydney, Australia 11 times with knife and he is in critical condition.We seek your immediate help in this matter and emergency visa to family member to look after him.@PMOIndia @myogiadityanath @DrSJaishankar
— Kavya Garg (@KGARG1205) October 12, 2022
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ












Click it and Unblock the Notifications