ಅಮೆರಿಕದಲ್ಲಿ ಸಾಧನೆ ಮಾಡಿದ ಬೆಂಗಳೂರು ಬಾಲಕಿ
ವಾಷಿಂಗ್ಟನ್, ಏ. 13 : ಬೆಂಗಳೂರು ಮೂಲದ ಬಾಲಕಿ ಅಮೆರಿಕದ ಪ್ರತಿಷ್ಠಿತ ಐವಿ ಲೀಗ್ ವಿಶ್ವವಿದ್ಯಾಲಯ ಒಂದರಲ್ಲಿ ಪ್ರವೇಶ ಪಡೆಯುವ ಕನಸು ಹೊತ್ತಿದ್ದಳು. ಪ್ರವೇಶ ಪರೀಕ್ಷೆಯಲ್ಲಿ ಆಕೆ ಅತ್ಯುತ್ತಮ ಸಾಧನೆ ಮಾಡಿದ್ದು, 8ವಿವಿಯಲ್ಲೂ ಪ್ರವೇಶ ಪಡೆಯಲು ಆಯ್ಕೆಯಾಗಿದ್ದಾಳೆ.
17 ವರ್ಷದ ಪೂಜಾ ಚಂದ್ರಶೇಖರ್ ಥಾಮಸ್ ಜೆಫರ್‌ಸನ್ ಹೈಸ್ಕೂಲ್ ವಿದ್ಯಾರ್ಥಿನಿ. ಉನ್ನತ ವ್ಯಾಸಂಗಕ್ಕಾಗಿ ಆಕೆ ಐವಿ ಲೀಗ್‌ನ 8 ವಿಶ್ವವಿದ್ಯಾಲಯಗಳಿಗೆ ಅರ್ಜಿ ಹಾಕಿದ್ದಳು. 8 ವಿವಿಗಳ ಪೈಕಿ ಒಂದರಲ್ಲಿ ಪ್ರವೇಶ ಪಡೆಯುವ ಗುರಿ ಹೊಂದಿದ್ದಳು. [ಪೂಜಾ ಚಂದ್ರಶೇಖರ್ ಪರಿಚಯ]

ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪೂಜಾ 8 ವಿವಿಗಳಲ್ಲೂ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾಳೆ. ಐವಿ ಲೀಗ್ ವಿವಿ ಹೊರತಾಗಿ ಸ್ಟಾನ್ ಫರ್ಡ್, ಎಂಐಟಿ ಸೇರಿದಂತೆ ಇತರ 14 ವಿಶ್ವವಿದ್ಯಾಲಯದಲ್ಲೂ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾಳೆ.
ಪೂಜಾ ಪೋಷಕರು ಬೆಂಗಳೂರು ಮೂಲದವರಾಗಿದ್ದು ಅಮೆರಿಕದಲ್ಲಿ ನೆಲೆಸಿದ್ದಾರೆ. ಬಾಲಕಿಯರು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮಾಡಲು ಪ್ರೋತ್ಸಾಹಿಸಲು ಅನುಕೂಲವಾಗುವಂತೆ ಸ್ವಯಂ ಸೇವಾ ಸಂಸ್ಥೆಯೊಂದನ್ನು ಪೂಜಾ ಆರಂಭಿಸಿದ್ದಾಳೆ.
ಓದಿನ ಜೊತೆಗೆ ಪೂಜಾ ಮೊಬೈಲ್ ಅಪ್ಲಿಕೇಶನ್‌ವೊಂದನ್ನು ಅಭಿವೃದ್ಧಿಪಡಿಸಿದ್ದಾಳೆ. ಜನರ ಮಾತನಾಡುವ ರೀತಿಯ ಮೂಲಕವೇ ಈ ಅಪ್ಲಿಕೇಶನ್ ಸಹಾಯದಿಂದ ಅವರು ಪಾರ್ಕಿನ್‌ಸನ್ ರೋಗದಿಂದ ಬಳುತ್ತಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಬಹುದಾಗಿದೆ.












Click it and Unblock the Notifications