ಬ್ರೆಜಿಲ್‌ನಲ್ಲಿ ₹40,00,00,000ಗೆ ಮಾರಾಟವಾದ ಭಾರತ ಮೂಲದ ಹಸು: ವಿಶೇಷತೆಗಳೇನು ತಿಳಿಯಿರಿ

Expensive cow: ಕೆಲವೊಂದು ಜಾನುಗಳು ತೂಕ, ದರ ಇನ್ನಿತರ ವಿಶಿಷ್ಠ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಹಾಗೆಯೇ ಇಲ್ಲೊಂದು ವಿಶ್ವದ ಅತ್ಯಂತ ದುಬಾರಿ ಹಸುವೊಂದಿದೆ. ಹಾಗಾದರೆ ಇದರ ರದ, ಏನೆಲ್ಲಾ ಗುಣಲಕ್ಷಣಗಳನ್ನು ಹೊಂದಿದೆ? ಹಾಗೂ ಎಲ್ಲಿ ಇದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಕೆಲವು ವಿಶೇಷ ತಳಿಯ ಹಸುಗಳು ದೈಹಿಕ ಗುಣಲಕ್ಷಣಗಳು ಮತ್ತು ಉನ್ನತ ಗುಣಮಟ್ಟದ ಮೂಲಕ ಗಮನ ಸೆಳೆಯುತ್ತವೆ. ಕೆಲವರು ಅಂತಹವುಗಳನ್ನು ಹರಾಜಿನಲ್ಲಿ ಕೋಟಿ ಕೋಟಿ ಕೊಟ್ಟು ಖರೀದಿ ಮಾಡುತ್ತಾರೆ. ಅದರಲ್ಲೂ ಜಪಾನಿನ ವಾಗ್ಯು ಮತ್ತು ಭಾರತದಲ್ಲಿರುವ ಬ್ರಾಹ್ಮಣರು ಆ ರೀತಿಯ ದುಬಾರಿ ಹಸುಗಳನ್ನು ಖರೀದಿ ಮಾಡುತ್ತಾರೆ.

Indian Origin Cow Sold for 40 Cr in Brazil

ಹಾಗೆಯೇ ಇತ್ತೀಚೆಗಷ್ಟೇ ಬ್ರೆಜಿಲ್‌ನಲ್ಲಿ ವಿಯಾಟಿನಾ-19 ಎಫ್‌ಐವಿ ಮಾರಾ ಇಮೋವಿಸ್ ಎಂಬ ಹೆಸರಿನ ಹಸುವಿನ ಬೆಲೆ ದಾಖಲೆ ಬರೆದಿದ್ದು, ಇದು ಒಟ್ಟು 40,00,00,000 ಕೋಟಿ ರೂಪಾಯಿಗಳಿಗೆ ಮಾರಾಟವಾಗಿ ಗಿನ್ನೆಸ್ ದಾಖಲೆ ಬರೆದಿದೆ. ಇದರ ತೂಕ 1,101 ಕೆಜಿ ಆಗಿದ್ದು, 1,101 ಕೆಜಿ ತೂಕ ಇದೆ ಎಂದು ತಿಳಿದುಬಂದಿದೆ.

ಈ ಹಸು ತನ್ನ ವಿಶಿಷ್ಟ ಜೀನ್‌ನಿಂದ ದಾಖಲೆ ನಿರ್ಮಿಸಿದೆ. ಇದರ ಆಕರ್ಷಕ ಮೈಕಟ್ಟು ನೋಡುಗರನ್ನು ತನ್ನತ್ತ ಸೆಳೆಯುತ್ತಲೇ ಇದೆ. ಇದು ಚಾಂಪಿಯನ್ಸ್ ಆಫ್ ದಿ ವರ್ಲ್ಡ್ ಸ್ಪರ್ಧೆಯಲ್ಲಿ ಮಿಸ್ ಸೌತ್ ಅಮೇರಿಕಾ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಅಲ್ಲದೆ, ಅತ್ಯಂತ ದುಬಾರಿ ಹಸು ಎಂದು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.

ವಿಯಾಟಿನಾ -19 ಎಫ್‌ಐವಿ ಮಾರಾ ಇಮೋವಿಸ್ ಹಸು ನಮ್ಮ ನೆಲ್ಲೂರು ತಳಿಗೆ ಸೇರಿದ್ದಾಗಿದೆ. ನೆಲ್ಲೂರು ತಳಿಯ ಹಸುಗಳು ದೊಡ್ಡ ಸ್ನಾಯುಗಳನ್ನು ಹೊಂದಿರುತ್ತವೆ. ಇವು ಬೃಹತ್ ಗಾತ್ರದ ಹಸುವಿಗೆ ಪ್ರಸಿದ್ಧಿ ಪಡೆದಿವೆ. ಮತ್ತೊಂದು ವಿಶಿಷ್ಟ ಲಕ್ಷಣವೆಂದರೆ, ಅವುಗಳ ಮೇಲಿನ ಕೂದಲಿನಲ್ಲಿ ಬಿಳಿ ಗಂಟುಗಳು ಹಾಗೂ ಸಡಿಲವಾದ ಚರ್ಮವನ್ನು ಹೊಂದಿದ್ದು, ಬಿಸಿ ವಾತಾವರಣದಲ್ಲೂ ತಣ್ಣಗಿರುತ್ತದೆ.

ಇವುಗಳಿಗೆ ಆಹಾರ ಸಿಗದಿದ್ದಾಗ ಶಕ್ತಿಗಾಗಿ ಕೊಬ್ಬನ್ನು ಸಂಗ್ರಹಿಸಲು ಇದು ದೊಡ್ಡ ಗಾತ್ರದ ಗೂನು ಹೊಂದಿವೆ. ಜಾನುವಾರು ಉದ್ಯಮದಲ್ಲಿ ಇದಕ್ಕಿಂತ ಬಲಿಷ್ಠವಾದ ಹಸು ಮತ್ತೊಂದಿಲ್ಲ. ಈ ವಿಶೇಷ ಗುಣಲಕ್ಷಣಗಳು ಈ ಹಸುವನ್ನು ಅತ್ಯಂತ ದುಬಾರಿಯನ್ನಾಗಿ ಮಾಡಿದ್ದು, ಇದು ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಸುಲಭವಾಗಿ ಜೀವಿಸುತ್ತದೆ.

ಈ ಹಸು ಅತ್ಯಂತ ಗುಣಮಟ್ಟದ ಕರುಗಳಿಗೆ ಜನ್ಮ ನೀಡುತ್ತದೆ. ಪ್ರಪಂಚದಾದ್ಯಂತ ಇರುವ ರೈತರು ಮತ್ತು ಜಾನುವಾರು ಸಾಕಣೆದಾರರು ಈ ಹಸುವಿನ ವಿಶಿಷ್ಠ ಗುಣಗಳಿಂದ ಪ್ರಯೋಜನ ಪಡೆಯಲು ಉತ್ಸುಕರಾಗಿದ್ದಾರೆ. ಇದು ಭವಿಷ್ಯದ ಪೀಳಿಗೆಗೆ ಬಲವಾದ, ಆರೋಗ್ಯಕರ ಮತ್ತು ರೋಗ-ನಿರೋಧಕ ಜಾನುವಾರುಗಳನ್ನು ಒದಗಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+