ನಿರುದ್ಯೋಗಿಯಿಂದ ಆಸ್ಟ್ರೇಲಿಯಾದಲ್ಲಿ ಮಿಲಿಯನ್ ಡಾಲರ್ ಮನೆ ಒಡೆಯನಾಗುವವರೆಗೆ: ಇದು ಭಾರತೀಯ ಯುವಕನ ಯಶೋಗಾಥೆ

ಜೀವನದಲ್ಲಿ ಕಷ್ಟಗಳು ಎದುರಾದಾಗ ಸೋತು ಶರಣಾಗುವವರೇ ಹೆಚ್ಚು. ಆದರೆ, ಅದೇ ಕಷ್ಟಗಳನ್ನು ಮೆಟ್ಟಿ ನಿಂತು ಛಲದಿಂದ ಮುನ್ನುಗ್ಗಿದರೆ ಯಶಸ್ಸು ಖಂಡಿತ ಒಲಿಯುತ್ತದೆ ಎಂಬುದಕ್ಕೆ ಭಾರತೀಯ ಮೂಲದ ಕಂಟೆಂಟ್ ಕ್ರಿಯೇಟರ್ ಡೆವೆನ್ ಅವರೇ ಸಾಕ್ಷಿ. ಪದವಿ ಮುಗಿಸಿ ಕೆಲಸವಿಲ್ಲದೆ ಪರದಾಡುತ್ತಿದ್ದ ಯುವಕನೊಬ್ಬ, ಕೇವಲ ಒಂದು ದಶಕದ ಕಠಿಣ ಪರಿಶ್ರಮದ ನಂತರ ಆಸ್ಟ್ರೇಲಿಯಾದಲ್ಲಿ ಮಿಲಿಯನ್ ಡಾಲರ್ ಮೌಲ್ಯದ ಭವ್ಯವಾದ ಮನೆಯನ್ನು ಖರೀದಿಸಿರುವ ಸ್ಫೂರ್ತಿದಾಯಕ ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ತಮ್ಮ ಜೀವನದ ಏಳು-ಬೀಳುಗಳು, ಆರ್ಥಿಕ ಸಂಕಷ್ಟಗಳು ಹಾಗೂ ಯಶಸ್ಸಿನ ಹಾದಿಯ ಬಗ್ಗೆ ಡೆವೆನ್ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. 2011ರಲ್ಲಿ ತಮ್ಮ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ ಡೆವೆನ್, ಸುಮಾರು ಒಂದು ವರ್ಷಗಳ ಕಾಲ ಯಾವುದೇ ಉದ್ಯೋಗವಿಲ್ಲದೆ ಮನೆಯಲ್ಲೇ ಉಳಿಯಬೇಕಾಯಿತು. ಆ ಸಂದರ್ಭದಲ್ಲಿ ಪೋಷಕರು ಬೆಂಬಲವಾಗಿ ನಿಂತರೂ, ಅವರ ಮೇಲೆ ಅವಲಂಬಿತನಾಗಿದ್ದೇನೆ ಎಂಬ ಅಪರಾಧಿ ಮನೋಭಾವ ಅವರನ್ನು ಸದಾ ಕಾಡುತ್ತಿತ್ತು. ಜೀವನದಲ್ಲಿ ಏನಾದರೂ ಸಾಧಿಸಲೇಬೇಕು ಎಂಬ ಹಂಬಲದಿಂದ 2012ರಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕಾಗಿ ಅವರು ಆಸ್ಟ್ರೇಲಿಯಾಗೆ ಹಾರಿದರು.

Indian Mans Inspiring Journey

ಆಸ್ಟ್ರೇಲಿಯಾಗೆ ಹೋದ ಆರಂಭದಲ್ಲಿ ಎಲ್ಲವೂ ಸುಲಭವಾಗಿರಲಿಲ್ಲ. ಅಲ್ಲಿನ ಜೀವನ ನಿರ್ವಹಣೆ ದುಬಾರಿಯಾಗಿತ್ತು, ಜೊತೆಗೆ ಓದಿನ ಖರ್ಚು ಕೂಡ ಇತ್ತು. ಹಣಕಾಸಿನ ಮುಗ್ಗಟ್ಟು ಎದುರಾದಾಗ, ಮತ್ತೆ ಪೋಷಕರ ಬಳಿ ಕೈ ಚಾಚಲು ಅವರ ಸ್ವಾಭಿಮಾನ ಒಪ್ಪಲಿಲ್ಲ. ಹೇಗಾದರೂ ಮಾಡಿ ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು ಎಂದು ನಿರ್ಧರಿಸಿದರು. ಹೀಗಾಗಿ 2012ರಿಂದ 2014ರವರೆಗೆ ತಮ್ಮ ಓದಿನ ಜೊತೆಗೆ ಸಿಕ್ಕ-ಸಿಕ್ಕ ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಶುರು ಮಾಡಿದರು.

ಆ ದಿನಗಳಲ್ಲಿ ತಾವು ಪಟ್ಟ ಕಷ್ಟವನ್ನು ನೆನಪಿಸಿಕೊಳ್ಳುವ ಡೆವೆನ್, "ನಾನು ಕಾರ್ ವಾಶ್ ಮಾಡುವ ಕೆಲಸ ಮಾಡಿದ್ದೇನೆ. ಊಟದ ವಿರಾಮವೂ ಇಲ್ಲದೆ ಸತತ 9 ಗಂಟೆಗಳ ಕಾಲ ದುಡಿದಾಗ ನನಗೆ ಸಿಗುತ್ತಿದ್ದುದು ಕೇವಲ 90 ಡಾಲರ್ ಮಾತ್ರ" ಎಂದಿದ್ದಾರೆ. ಕೇವಲ ಕಾರ್ ವಾಶ್ ಮಾತ್ರವಲ್ಲ, ಕ್ಲೀನರ್ ಆಗಿ, ಹೋಟೆಲ್‌ನಲ್ಲಿ ಕಿಚನ್ ಹೆಲ್ಪರ್ ಆಗಿಯೂ ಅವರು ಕೆಲಸ ಮಾಡಿದ್ದಾರೆ.

2014ರಲ್ಲಿ ಸ್ನಾತಕೋತ್ತರ ಪದವಿ ಮುಗಿದರೂ ಅವರ ಕಷ್ಟಗಳು ಮಾತ್ರ ಕೊನೆಯಾಗಿರಲಿಲ್ಲ. ಉತ್ತಮ ಸಂಬಳದ, ಸ್ಥಿರವಾದ ಉದ್ಯೋಗ ಹುಡುಕಲು ಅವರು ಪರದಾಡಬೇಕಾಯಿತು. 2015 ಕೂಡ ಅದೇ ರೀತಿ ಕಷ್ಟದಲ್ಲೇ ಕಳೆಯಿತು. ಆದರೆ, ಅವರು ಎಂದಿಗೂ ಭರವಸೆ ಕಳೆದುಕೊಳ್ಳಲಿಲ್ಲ. ಅವರ ಸತತ ಪ್ರಯತ್ನದ ಫಲವಾಗಿ 2016ರಲ್ಲಿ ಅವರು ಕನಸು ಕಂಡಿದ್ದ ಉದ್ಯೋಗ ಒಲಿಯಿತು. ಅಲ್ಲಿಂದ ಅವರ ಜೀವನದ ದಿಕ್ಕೇ ಬದಲಾಯಿತು.

2017ರಿಂದ 2022ರವರೆಗೆ ತಮ್ಮ ವೃತ್ತಿಜೀವನದಲ್ಲಿ ಕಠಿಣ ಶ್ರಮ ಹಾಕಿದ ಡೆವೆನ್, ಅನೇಕ ಪ್ರಮೋಷನ್‌ಗಳನ್ನು ಪಡೆದು ಉನ್ನತ ಸ್ಥಾನಕ್ಕೇರಿದರು. ಅವರ ಆರ್ಥಿಕ ಸ್ಥಿತಿಯೂ ಸುಧಾರಿಸಿತು. 2023ರ ವೇಳೆಗೆ ತಮ್ಮ ಕನಸಿನ ಕಾರನ್ನು ಖರೀದಿಸಿದ ಅವರು, ಹಲವು ಕಡೆಗಳಲ್ಲಿ ಪ್ರಾಪರ್ಟಿಗಳ ಮೇಲೆಯೂ ಹೂಡಿಕೆ ಮಾಡಿದರು. ಇದಾದ ಕೇವಲ ಒಂದು ವರ್ಷದ ನಂತರ, ಅಂದರೆ 2024ರಲ್ಲಿ ಆಸ್ಟ್ರೇಲಿಯಾದಲ್ಲಿ ತಮ್ಮದೇ ಆದ ಮಿಲಿಯನ್ ಡಾಲರ್ ಮೌಲ್ಯದ ಮನೆಯನ್ನು ಖರೀದಿಸುವ ಮೂಲಕ ಬಹುದೊಡ್ಡ ಮೈಲಿಗಲ್ಲು ತಲುಪಿದ್ದಾರೆ.

ತಮ್ಮ ಈ ಸುದೀರ್ಘ ಯಾನವನ್ನು ಮೆಲುಕು ಹಾಕುತ್ತಾ, ಕಷ್ಟದ ದಿನಗಳನ್ನು ಎದುರಿಸುತ್ತಿರುವ ಯುವಜನತೆಗೆ ಡೆವೆನ್ ಒಂದು ಅದ್ಭುತ ಸಂದೇಶವನ್ನು ನೀಡಿದ್ದಾರೆ. "ನಿಮ್ಮ ಕಥೆ ಇನ್ನೂ ಮುಗಿದಿಲ್ಲ. ಕೆಲವೊಮ್ಮೆ, ಅದು ಬೇರೊಂದು ಟೈಮ್‌ಲೈನ್‌ನಲ್ಲಿ ನಡೆಯುತ್ತಿರುತ್ತದೆ ಅಷ್ಟೇ" ಎಂದು ಅವರು ಹೇಳಿದ್ದಾರೆ.

ಡೆವೆನ್ ಅವರ ಈ ಮಾತುಗಳು ನೆಟ್ಟಿಗರ ಹೃದಯ ಗೆದ್ದಿವೆ. "ಇದು ಎಂದಿಗೂ ಛಲ ಬಿಡದಿರುವುದಕ್ಕೆ ಅತ್ಯುತ್ತಮ ಉದಾಹರಣೆ. ಈ ಮಟ್ಟಕ್ಕೆ ಬೆಳೆಯಲು ಬಲವಾದ ಮಾನಸಿಕ ಸ್ಥೈರ್ಯ ಬೇಕು" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ನಿಮ್ಮ ಬಗ್ಗೆ ಹೆಮ್ಮೆಯಿದೆ" ಎಂದು ಬರೆದುಕೊಂಡಿದ್ದಾರೆ. ಅನಿಶ್ಚಿತತೆಯ ದಿನಗಳಲ್ಲಿಯೂ ತಾಳ್ಮೆ ಕಳೆದುಕೊಳ್ಳದೆ, ಸತತ ಪರಿಶ್ರಮದಿಂದ ಆರ್ಥಿಕ ಯಶಸ್ಸು ಸಾಧಿಸಿದ ಡೆವೆನ್ ಅವರ ಕಥೆ ಇಂದು ಲಕ್ಷಾಂತರ ಯುವಕರಿಗೆ ಸ್ಫೂರ್ತಿಯ ಸೆಲೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+