India Vs Pak: ಸಂಕಷ್ಟದ ಸಮಯದಲ್ಲೇ ಪಾಕ್‌ಗೆ ಕೈಕೊಟ್ಟ ಚೀನಾ!
ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ಪರಿಸ್ಥಿತಿ ಬಿಗಡಾಯಿಸುತ್ತಿರುವಾಗಲೇ ಪಾಕಿಸ್ತಾನಕ್ಕೆ ಏಕೈಕ ಆಸರೆಯಾಗಿದ್ದ ಚೀನಾ ಸಹ ಇದೀಗ ಕೈ ಕೊಡುವ ಲಕ್ಷಣ ದಟ್ಟವಾಗಿದೆ. ಪಾಕಿಸ್ತಾನವು ಭಾರತದ ಮೇಲೆ ಯುದ್ಧ ಮಾಡುವುದಕ್ಕೆ ನೆಚ್ಚಿಕೊಂಡ ರಾಷ್ಟ್ರಗಳಲ್ಲಿ ಚೀನಾ ಮುಂಚೂಣಿಯಲ್ಲಿತ್ತು. ಆದರೆ, ಯಾವಾಗ ಚೀನಾ ದೇಶಕ್ಕೇ ಮುಜುಗರವುಂಟಾಗುವ ರೀತಿಯಲ್ಲಿ ಪಾಕಿಸ್ತಾನ ಹೇಳಿಕೆ ನೀಡಿದೆಯೋ ಆಗಲೇ ಚೀನಾ ನಮಗೇನು ಗೊತ್ತಿಲ್ಲ ಅಂತ ಹೇಳುವ ಮೂಲಕ ಪಾಕಿಸ್ತಾನಕ್ಕೆ ಭಾರೀ ಶಾಕ್ ನೀಡಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ಇಡೀ ವಿಶ್ವವೇ ತಿರುಗಿ ನೋಡುವಂತಹ ಗಂಭೀರವಾದ ದಾಳಿಯನ್ನು ನಾವು ಮಾಡಲಿದ್ದೇವೆ ಎಂದು ಪಾಕಿಸ್ತಾನ ಎಚ್ಚರಿಕೆ ನೀಡಿದೆ. ಕೆಲವೇ ದಿನಗಳ ಮುಂಚೆ ನ್ಯೂಕ್ಲಿಯರ್ ಬಾಂಬ್ ಬಳಕೆ ಮಾಡುವುದಾಗಿ ಪಾಕಿಸ್ತಾನವು ಗಂಭೀರವಾದ ಎಚ್ಚರಿಕೆಯನ್ನು ನೀಡಿತ್ತು.
ಭಾರತ ಹಾಗೂ ಪಾಕ್‌ನ ನಡುವೆ ಕ್ಷಿಪಣಿಗಳ ಹಾಗೂ ಡ್ರೋನ್ ದಾಳಿಗಳು ನಡೆದಿವೆ. ಭಾರತೀಯ ಸೇನೆಯು ಪಾಕ್‌ನ ಕೃತ್ಯಗಳಿಗೆ ಕಡಿವಾಣ ಹಾಕುತ್ತಿದೆ. ಪಾಕ್‌ನ ಕ್ಷಿಪಣಿಗಳು ಭಾರತದ ಒಳಗೆ ಬರದಂತೆ ತಡೆಯುತ್ತಿದೆ. ನಾವು ಭಾರತದ ಮೇಲೆ ದಾಳಿ ನಡೆಸುವುದಕ್ಕೆ ಚೀನಾ ನಿರ್ಮಿತ ಜೆ-10ಸಿ ಫೈಟರ್ ಜೆಟ್‌ಗಳನ್ನು ಬಳಸಿದ್ದೇವೆ ಎಂದು ಪಾಕ್ ಹೇಳಿದೆ. ಈ ಹೇಳಿಕೆ ಚೀನಾಗೆ ಭಾರೀ ಮುಜುಗರವನ್ನು ಸೃಷ್ಟಿ ಮಾಡಿದೆ. ಅಲ್ಲದೇ ಈ ವಿಚಾರದಲ್ಲಿ ನಮಗೇನು ಗೊತ್ತೇ ಇಲ್ಲ ಅಂತ ಚೀನಾ ಹೇಳಿದೆ.

ಇದಕ್ಕೆ ಕಾರಣ ಚೀನಾದಿಂದ ನೀಡಲಾಗಿದೆ ಎನ್ನಲಾಗಿರುವ ಶಸ್ತ್ರಾಸ್ತ್ರಗಳು ಕೈಕೊಡುತ್ತಿದ್ದು. ಭಾರತದ ಮುಂದೆ ಮುಗ್ಗರಿಸುತ್ತಿದೆ. ಈ ರೀತಿ ಇರುವಾಗಲೇ ಚೀನಾ ಸಹ ಪಾಕ್‌ಗೆ ಕೈಕೊಟ್ಟಿದೆ. ಚೀನಾದ ವಿದೇಶಾಂಗ ಸಚಿವಾಲಯವು ಈ ಬಗ್ಗೆ ನಮಗೆ ವಿಷಯವೇ ಗೊತ್ತಿಲ್ಲ ಎಂದು ಜಾರಿಕೊಂಡಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಭಾರತದ ಯುದ್ಧ ವಿಮಾನಗಳ ದಾಳಿ ಮಾಡಲು ಇಲ್ಲವೇ ಹೊಡೆದುರುಳಿಸುವುದಕ್ಕೆ ಜೆ-10ಸಿ ಜೆಟ್‌ಗಳನ್ನು ಬಳಸಿದ್ದೇವೆ ಎಂದು ಹೇಳಿದ ಬೆನ್ನಲ್ಲೇ ಚೀನಾ ಈ ರೀತಿ ಹೇಳಿದೆ. ಈ ಮೂಲಕ ಪಾಕ್‌ನಿಂದ ಚೀನಾ ಸಂಕಷ್ಟದ ಸಮಯದಲ್ಲೇ ಅಂತರ ಕಾಪಾಡಿಕೊಂಡಿದೆ.
ಶಾಂತವಾಗಿರಿ ಎಂದ ಚೀನಾ: ಇನ್ನು ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಹಲವು ದೇಶಗಳು ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಿವೆ. ಭಾರತದ ಶತ್ರು ರಾಷ್ಟ್ರ ಹಾಗೂ ಪಾಕ್‌ನ ಆತ್ಮೀಯ ಚೀನಾ ಸಹ ಇದೇ ಮಾತನ್ನು ಪುನರುಚ್ಚರಿಸಿದೆ. ಎರಡೂ ದೇಶಗಳು ಶಾಂತ ರೀತಿಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಅಂತ ಚೀನಾ ಹೇಳಿದೆ.












Click it and Unblock the Notifications