ವುಹಾನ್ ಲ್ಯಾಬ್‌ನಲ್ಲಿದೆ 3 ಸಜೀವ ಬಾವುಲಿಗಳು: ಕೊವಿಡ್ 19 ನಂಟಿಲ್ಲ
ಬೀಜಿಂಗ್, ಮೇ 24: ಚೀನಾದ ವೈರಾಲಜಿ ಲ್ಯಾಬ್‌ನಿಂದ ಅಲ್ಲಿದ್ದ ಬಾವುಲಿಗಳ ಮೂಲಕ ಮೊದಲು ಕೊರೊನಾ ವೈರಸ್ ಹುಟ್ಟಿಕೊಂಡಿತ್ತು ಎನ್ನುತ್ತಾರೆ ಆದರೆ ಅಲ್ಲಿದ್ದ ಮೂರು ಸಜೀವ ಬಾವುಲಿಗಳಲ್ಲಿ ಕೊರೊನಾ ವೈರಸ್ ಇರಲಿಲ್ಲ ಎಂದು ನಿರ್ದೇಶಕು ತಿಳಿಸಿದ್ದಾರೆ.
Recommended Video
ಕೊವಿಡ್ 19 ಮೊದಲು ವುಹಾನ್ ನಗರದಿಂದ ಆರಂಭವಾಗಿ ವಿಶ್ವದಾದ್ಯಂತ 3,40,000 ಮಂದಿಯನ್ನು ಬಲಿಪಡೆದಿದೆ. ಇದು ಮೊದಲು ಬಾವುಲಿಗಳಿಂದ ಜನರಿಗೆ ಹರಡಿದೆ ಎಂದು ಸಂಶೋಧಕರು ಹೇಳುತ್ತಾರೆ.
ಕೊರೊನಾ ವೈರಸ್ ವುಹಾನ್ ಲ್ಯಾಬಿನಿಂದಲೇ ಹುಟ್ಟಿಕೊಂಡಿದ್ದು ಎನ್ನುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾದವನ್ನು ವೈರಾಲಜಿ ಲ್ಯಾಬ್‌ನ ನಿರ್ದೇಶಕರು ತಳ್ಳಿ ಹಾಕಿದ್ದಾರೆ.

ವಾಂಗ್ ಯಾನ್ಯಿ ಹೇಳುವ ಪ್ರಕಾರ ನಮ್ಮ ಲ್ಯಾಬ್‌ನಲ್ಲಿ ಮೂರು ಸಜೀವ ಬಾವುಲಿಗಳಿವೆ ಆದರೆ ಅವುಗಳಲ್ಲಿರುವ ವೈರಸ್‌ಗಳು ಸಾರ್ಸ್ CoV-2ನ್ನು ಹೋಲುತ್ತವೆ ಕೊವಿಡ್ 19 ಅಲ್ಲ ಎಂದಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಮೇಲೆ ಕಿಡಿ ಕಾರುತ್ತಾ, ವಿಶ್ವ ಆರೋಗ್ಯ ಸಂಸ್ಥೆಯು ಮೃದು ಧೋರಣೆ ಅನುಸರಿಸುತ್ತಿದೆ ಎಂದು ದೂರಿ ಅನುದಾನವನ್ನು ಕೂಡ ನಿಲ್ಲಿಸಿದ್ದಾರೆ. ಕೊರೊನಾ ವುಹಾನ್ ಲ್ಯಾಬ್‌ನಿಂದ ಬಂತೋ ಎಲ್ಲಿಂದ ಬಂತೋ ಗೊತ್ತಿಲ್ಲ, ಬಂದಿದ್ದು ಮಾತ್ರ ಚೀನಾದಿಂದ ಇದು ಸತ್ಯ ಎಂದಿದ್ದರು.
ಕೊರೊನಾ ವೈರಸ್ ವುಹಾನ್‌ನ ವೈರಾಲಜಿ ಲ್ಯಾಬ್‌ನಿಂದ ಹುಟ್ಟಿಕೊಂಡಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಅವರು ಹೇಳಿದ್ದಾರೆ.












Click it and Unblock the Notifications