ಪ್ರವಾಹ ಪೀಡಿತ ಅಮೆರಿಕಾದ ಹೂಸ್ಟನ್ ನಲ್ಲಿದ್ದ 200 ಭಾರತೀಯರು ಸೇಫ್

ಹೂಸ್ಟನ್, ಆಗಸ್ಟ್ 29: ಹಾರ್ವೆ ಚಂಡ ಮಾರುತದಿಂದ ಅಮೆರಿಕಾದ ಟೆಕ್ಸಾಸ್ ರಾಜ್ಯದ ಹಲವು ಪ್ರದೇಶಗಳು ಮತ್ತು ಹೂಸ್ಟನ್ ನಗರ ಭೀಕರ ಪ್ರವಾಹಕ್ಕೆ ತುತ್ತಾಗಿದೆ. ಕಳೆದ 50 ವರ್ಷಗಳಲ್ಲೇ ಹೂಸ್ಟನ್ ನಲ್ಲಿ ಸಂಭವಿಸುತ್ತಿರುವ ಅತ್ಯಂತ ಭೀಕರ ಪ್ರವಾಹ ಇದಾಗಿದೆ.

ಈ ಪ್ರವಾಹದಲ್ಲಿ 200ಕ್ಕೂ ಹೆಚ್ಚು ಭಾರತೀಯರು ಸಿಲುಕಿದ್ದರು. ಇದೀಗ ಅವರೆಲ್ಲಾ ಸುರಕ್ಷಿತವಾಗಿದ್ದಾರೆ ಎಂದು ಹೂಸ್ಟನ್ ಭಾರತೀಯ ರಾಯಭಾರ ಕಚೇರಿಯ ಕಾನ್ಸುಲ್ ಜನರಲ್ ಅನುಪಮ್ ರೇ ಟ್ವೀಟ್ ಮಾಡಿದ್ದಾರೆ.

ಪ್ರವಾಹದಲ್ಲಿ ಸಿಲುಕಿದ್ದ 200 ಭಾರತೀಯರು

ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ 200 ಭಾರತೀಯ ವಿದ್ಯಾರ್ಥಿಗಳು ಅಪಾಯದಲ್ಲಿ ಸಿಲುಕಿದ್ದರು. ಅವರ ಸುತ್ತ ಕುತ್ತಿಗೆಯವರೆಗೆ ಮುಳುಗುವಷ್ಟು ನೀರು ಆವರಿಸಿತ್ತು. ಈ ಕುರಿತು ಗಮನ ಹರಿಸುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೂಸ್ಟನ್ ರಾಯಭಾರ ಕಚೇರಿಯ ಕಾನ್ಸುಲ್ ಜನರಲ್ ಅನುಪಮ್ ರೇ ಗೆ ಸೂಚಿಸಿದ್ದರು.

ವಿದ್ಯಾರ್ಥಿಗಳಿಗೆ ಆಹಾರ ನೀಡಲು ಪ್ರಯತ್ನಪಟ್ಟೆವು, ಆದರೆ ಜನರನ್ನು ರಕ್ಷಿಸಬೇಕಾದ ಕಾರಣ ಬೋಟ್ ನೀಡಲು ಅಲ್ಲಿನ ನೌಕಾ ಸೇನೆ ನಿರಾಕರಿಸಿದೆ ಎಂದು ಈ ಹಿಂದೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದರು.

200 ವಿದ್ಯಾರ್ಥಿಗಳ ರಕ್ಷಣೆ

ಇದಾದ ನಂತರ ಟ್ವೀಟ್ ಮಾಡಿರುವ ಅನುಪಮ್ ರೇ, "ನಾನು 200 ವಿದ್ಯಾರ್ಥಿಗಳ ಜತೆಗಿದ್ದೇನೆ. ಅವರಿಗೆ ಆಹಾರಕ್ಕೆ ವ್ಯವಸ್ಥೆ ಮಾಡುತ್ತಿದ್ದೇನೆ," ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳು ಸುರಕ್ಷಿತ ಪ್ರದೇಶಕ್ಕೆ ಶಿಫ್ಟ್ ಮಾಡಲಾಗಿದ್ದು, ಸ್ಥಳೀಯ ಭಾರತೀಯರು ಆಹಾರ ವ್ಯವಸ್ಥೆ ಮಾಡಿದ್ದಾರೆ.

ಇದರಿಂದ ಭಾರತೀಯರ ಆತಂಕ ನಿವಾರಣೆಯಾಗಿದ್ದು ಹೂಸ್ಟನ್ ಪ್ರವಾಹದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ.

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಭಾರತೀಯರು

ಟೆಕ್ಸಾಸ್ ನಲ್ಲಿರುವ ಲೇಕ್ ಬ್ರಯಾನ್ ಎಂಬ ಸರೋವರದಲ್ಲಿ ಈಜಲು ತೆರಳಿದ್ದ ಪ್ರವಾಹಕ್ಕೆ ಸಿಲುಕಿದ್ದ ಶಾಲಿನಿ ಹಾಗೂ ನಿಖಿಲ್ ಭಾಟಿಯಾ ಎಂಬ ಇಬ್ಬರು ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ.

ಪ್ರವಾಹಕ್ಕೆ ಸಿಲುಕಿ ಇವರಿಬ್ಬರು ನಿತ್ರಾಣರಾಗಿದ್ದು ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಭೇಟಿಗೆ ಪೋಷಕರು ಭಾರತದಿಂದ ತೆರಳಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಭಾರತೀಯ ಧೂತವಾಸ ಕಚೇರಿ ಅಗತ್ಯ ಏರ್ಪಾಟು ಮಾಡಿದೆ.

ಪ್ರವಾಹಕ್ಕೆ ತತ್ತರಿಸಿದ ಹೂಸ್ಟನ್

ಪ್ರವಾಹಕ್ಕೆ ತತ್ತರಿಸಿದ ಹೂಸ್ಟನ್

ಚಂಡ ಮಾರುತದಿಂದಾಗಿ ಶುಕ್ರವಾರದಿಂದ ಟೆಕ್ಸಾಸ್ ನಗರದಲ್ಲಿ 30 ಇಂಚಿಗೂ ಹೆಚ್ಚು ಮಳೆ ಸುರಿದ್ದು ಇಲ್ಲಿಯವರೆಗೆ ಕಂಡು ಕೇಳರಿಯದ ಪ್ರವಾಹಕ್ಕೆ ಸಿಲುಕಿದೆ.

ಪ್ರವಾಹದಿಂದ 4.50 ಲಕ್ಷ ಜನರು ತೊಂದರೆಗೆ ಸಿಲುಕಿದ್ದು 30 ಸಾವಿರ ಜನರನ್ನು ಸ್ಥಳಾಂತರ ಮಾಡಲಾಗಿದೆ. ತಜ್ಞರ ಪ್ರಕಾರ ಈ ಪ್ರವಾಹದಿಂದ ಚೇತರಿಸಿಕೊಳ್ಳಲು ಟೆಕ್ಸಾಸ್ ಗೆ ಕನಿಷ್ಟ 1 ವರ್ಷ ಬೇಕು ಎನ್ನಲಾಗಿದೆ.

ಇನ್ನು ಪ್ರವಾಹದಿಂದ ಸಾವಿರಾರು ಕೋಟಿ ನಷ್ಟ ಉಂಟಾಗಿದ್ದು, ರಾಸಾಯನಿಕ ಕಾರ್ಖಾನೆಗಳಿಂದ ರಾಸಾಯನಿಕಗಳು ಹರಡುವ ಅಪಾಯವೂ ಇದೆ.

ಚಂಡ ಮಾರುತದ ಅಬ್ಬರಕ್ಕೆ 9 ಬಲಿ

ಚಂಡ ಮಾರುತದ ಅಬ್ಬರಕ್ಕೆ 9 ಬಲಿ

ಹಾರ್ಲೆ ಚಂಡ ಮಾರುತ ಹಾಗೂ ಇದರಿಂದ ಸೃಷ್ಟಿಯಾದ ಪ್ರವಾಹಕ್ಕೆ ಸತ್ತವರ ಸಂಖ್ಯೆ ಸೋಮವಾರಕ್ಕೆ 9ನ್ನು ತಲುಪಿದೆ. ಇನ್ನು ಪ್ರವಾಹದಲ್ಲಿ ಸಿಲುಕಿದ್ದ 3,000 ಜನರನ್ನು ರಕ್ಷಣೆ ಮಾಡಲಾಗಿದೆ. 12,000 ಸಾವಿರ ಸೈನಿಕರು ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಯಲ್ಲಿ ತೊಡಗಿದ್ದಾರೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆ

ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆ

ಇದೇ ವೇಳೆ ವಾರಪೂರ್ತಿ ಹೂಸ್ಟನ್ ನಗರ ಸೇರಿದಂತೆ ಟೆಕ್ಸಾಸ್ ನಲ್ಲಿ ಭಾರೀ ಮಳೆಯಾಗಲಿದೆ ಎಂದು ಅಮೆರಿಕಾದ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕೆಲವು ಭಾಗಗಳಲ್ಲಿ 50 ಇಂಚಿಗೂ ಹೆಚ್ಚು ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+