ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ ಮಹಾಸಾಗರದಲ್ಲಿ ಚೀನಾದ ಬೇಹುಗಾರಿಕೆ ಹಡಗಿನ ಸಂಚಾರ

|
Google Oneindia Kannada News

ನವದೆಹಲಿ, ಡಿಸೆಂಬರ್ 14: ಚೀನಾದ ಕ್ಷಿಪಣಿ ಮತ್ತು ಉಪಗ್ರಹ ಟ್ರ್ಯಾಕಿಂಗ್ ಹಡಗು 'ಯುವಾನ್ ವಾಂಗ್ ವಿ' ಈ ಪ್ರದೇಶದಲ್ಲಿ ಒಂದು ವಾರ ಕಳೆದ ನಂತರ ಹಿಂದೂ ಮಹಾಸಾಗರದಿಂದ ನಿರ್ಗಮಿಸಿದೆ ಎಂದು ಈ ಕುರಿತು ತಿಳಿದ ಜನರು ಬುಧವಾರ ಹೇಳಿದ್ದಾರೆ.

ವಿವಿಧ ಟ್ರ್ಯಾಕಿಂಗ್ ಮತ್ತು ಕಣ್ಗಾವಲು ಸಾಧನಗಳನ್ನು ಅಳವಡಿಸಲಾಗಿರುವ ಚೀನಾದ ಬೇಹುಗಾರಿಕಾ ಹಡಗು ಡಿಸೆಂಬರ್ 5ರ ಸುಮಾರಿಗೆ ಹಿಂದೂ ಮಹಾಸಾಗರವನ್ನು ಪ್ರವೇಶಿಸಿದ್ದು, ಬಂಗಾಳಕೊಲ್ಲಿಯಲ್ಲಿ ದೀರ್ಘ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪ್ರಯೋಗಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ವಿಕ್ರಾಂತ್ ಆಯ್ತು, ಬರಲಿದೆ ವಿಶಾಲ್; ಇದಾಗಲಿದೆ ವಿಶ್ವದ 4ನೇ ಅತಿದೊಡ್ಡ ಯುದ್ಧನೌಕೆವಿಕ್ರಾಂತ್ ಆಯ್ತು, ಬರಲಿದೆ ವಿಶಾಲ್; ಇದಾಗಲಿದೆ ವಿಶ್ವದ 4ನೇ ಅತಿದೊಡ್ಡ ಯುದ್ಧನೌಕೆ

ಈ ಹಡಗಿನ ಚಲನವಲನದ ಮೇಲೆ ಭಾರತೀಯ ನೌಕಾಪಡೆ ತೀವ್ರ ನಿಗಾ ಇರಿಸಿತ್ತು. ಕಳೆದ ಆಗಸ್ಟ್‌ನಲ್ಲಿ ಹಂಬನ್‌ತೋಟ ಬಂದರಿನಲ್ಲಿ ಹಡಗಿನ ಡಾಕಿಂಗ್ ಭಾರತ ಮತ್ತು ಶ್ರೀಲಂಕಾ ನಡುವೆ ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವಾಗಿತ್ತು.

How China spy ship exits Indian Ocean Region

ಹಿಂದೂ ಮಹಾಸಾಗರ ಪ್ರವೇಶಿಸಿದ ಚೀನಾ ಹಡಗು:

"ಯುವಾನ್ ವಾಂಗ್ 5, ಚೀನಾದ ಕ್ಷಿಪಣಿ ಮತ್ತು ಉಪಗ್ರಹ ಟ್ರ್ಯಾಕಿಂಗ್ ನೌಕೆಯಾಗಿದ್ದು ಭಾರತೀಯ ಸಾಗರ ಪ್ರದೇಶವನ್ನು ಪ್ರವೇಶಿಸಿದೆ," ಎಂದು ಓಪನ್ ಸೋರ್ಸ್ ಗುಪ್ತಚರ ತಜ್ಞ ಡೇಮಿಯನ್ ಸೈಮನ್ ಸೋಮವಾರ ಟ್ವೀಟ್ ಮಾಡಿದ್ದಾರೆ. ಹಿಂದೂ ಮಹಾಸಾಗರ ಪ್ರದೇಶದಿಂದ ಹಡಗಿನ ಪ್ರವೇಶ ಅಥವಾ ನಿರ್ಗಮನದ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಸಿಕ್ಕಿಲ್ಲ.

ರಕ್ಷಣಾ ಸಂಬಂಧ ಬಲಪಡಿಸುತ್ತಿರುವ ಭಾರತ:

ಹಿಂದೂ ಮಹಾಸಾಗರಕ್ಕೆ ಚೀನಾದ ಹಡಗಿನ ಭೇಟಿಯು ಚೀನಾದ ಮಿಲಿಟರಿ ಮತ್ತು ಸಂಶೋಧನಾ ಹಡಗುಗಳಿಂದ ಈ ಪ್ರದೇಶದಲ್ಲಿ ಬೆಳೆಯುತ್ತಿರುವ ಆಕ್ರಮಣಗಳ ಬಗ್ಗೆ ಕಳವಳವನ್ನು ಹೆಚ್ಚುವಂತೆ ಮಾಡಿದೆ. ಭಾರತೀಯ ನೌಕಾಪಡೆಯ ಹಿಂಭಾಗದಲ್ಲಿದೆ ಎಂದು ಪರಿಗಣಿಸಲಾದ ಈ ಪ್ರದೇಶದಲ್ಲಿ ಚೀನಾದ ಬೆಳೆಯುತ್ತಿರುವ ಆಕ್ರಮಣಗಳ ಬಗ್ಗೆ ಕಳವಳದ ಹಿನ್ನೆಲೆಯಲ್ಲಿ ಸಮಾನ ಮನಸ್ಕ ರಾಷ್ಟ್ರಗಳೊಂದಿಗೆ ಭಾರತವು ಹಿಂದೂ ಮಹಾಸಾಗರದಲ್ಲಿ ರಕ್ಷಣಾ ಮತ್ತು ಭದ್ರತಾ ಸಂಬಂಧಗಳನ್ನು ಬಲಪಡಿಸುತ್ತಿದೆ.

English summary
How China spy ship exits Indian Ocean Region. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X