ಸ್ತಬ್ದವಾದ ನ್ಯೂಯಾರ್ಕ್, ಶೀತಗಾಳಿ ಹೊಡೆತಕ್ಕೆ ತತ್ತರ

ನ್ಯೂಯಾರ್ಕ್, ಜ.27: ನ್ಯೂಯಾರ್ಕ್ ಸೇರಿದಂತೆ ಈಶಾನ್ಯ ಅಮೆರಿಕದಲ್ಲಿ ಹಿಮಪಾತ, ಶೀತಗಾಳಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಾರಿಗೆ ಸಂಪರ್ಕ ಕಡಿತಗೊಂಡಿದ್ದು, ತುರ್ತುಪರಿಸ್ಥಿತಿ ರೀತಿ ವಾತಾವರಣ ಉಂಟಾಗಿದೆ.

ಅಮೆರಿಕ ಪೂರ್ವ ಕರಾವಳಿಯ ಸುಮಾರು 6,500ಕ್ಕೂ ಅಧಿಕ ವಿಮಾನಯಾನ ರದ್ದಾಗಿದೆ. ಸೋಮವಾರ ಹಿಮಪಾತದ ಕಾರಣದಿಂದ ವಿಮಾನ ನಿಲ್ದಾಣದಲ್ಲಿ ಮಂಜು ಮುಸುಕಿದ ವಾತಾವರಣ ಉಂಟಾಗಿದೆ. ಶಾಲಾ, ಕಾಲೇಜುಗಳು ಬಂದ್ ಆಗಿವೆ, ವ್ಯಾಪಾರ, ವಹಿವಾಟಿಗೆ ತೊಂದರೆಯಾಗಿದೆ. ಶೀತಮಾರುತ ಬೋಸ್ಟನ್ ಕಡೆಗೆ ಧಾವಿಸುತ್ತಿದೆ. ಚಂಡಮಾರುತದಂಥ ಶೀತಗಾಳಿ 80 ಮೈಲಿ ಪ್ರತಿ ಗಂಟೆ ವೇಗದಲ್ಲಿ ಬೀಸುತ್ತಿದೆ.

New York shuts down as 'historic' snowstorm approaches

ಮೆಸ್ಸಾಚುಸೆಟ್ಸ್ ನಲ್ಲಿ ಸುಮಾರು 15 ರಿಂದ 30 ಇಂಚಿನಷ್ಟು ಹಿಮರಾಶಿ ಆವರಿಸಿದೆ. ನ್ಯೂಯಾರ್ಕ್, ನ್ಯೂಜೆರ್ಸಿ, ಕನೆಕ್ಟಿಕಟ್, ಮೆಸ್ಸಾಚುಸೆಟ್ಸ್ ನಾಗರಿಕರಿಗೆ ಪ್ರತಿಕೂಲ ಹವಾಮಾನದ ಬಗ್ಗೆ ಸ್ಥಳೀಯ ಆಡಳಿತ ಎಚ್ಚರಿಕೆ ನೀಡಿದೆ. ಕನಕ್ಟಿಕಟ್ ಗವರ್ನರ್ ನೀಡಿರುವ ಸಂದೇಶ ಇಲ್ಲಿ ಓದಿರಿ

ನ್ಯೂಯಾರ್ಕ್ ನ ಪಶ್ಚಿಮ ಭಾಗದಲ್ಲಿ ಕಳೆದ ವಾರ ಉಂಟಾಗಿದ್ದ ಶೀತಮಯ ವಾತಾವರಣ ಎಚ್ಚರಿಕೆ ಗಂಟೆ ಬಾರಿಸಿ, ಪ್ರತಿಕೂಲ ವಾತಾವರಣದ ಮುನ್ಸೂಚನೆ ನೀಡಿತ್ತು. ಬಫೆಲೋ ಪ್ರದೇಶದ ಹೆದ್ದಾರಿಗಳು ಬಂದ್ ಆಗಿತ್ತು. ನ್ಯೂಯಾರ್ಕ್ ನ ಪಶ್ಚಿಮ ಭಾಗದಲ್ಲಿ ಶೀತ ಮಾರುತದ ಹೊಡೆತ ನಿರೀಕ್ಷಿಸಿ ಎಂದು ರಾಷ್ಟ್ರೀಯ ಹವಾಮಾನ ಕಳೆದ ವಾರವೇ ವರದಿ ನೀಡಿತ್ತು.

Norwood Avenue in Buffalo

ರಸ್ತೆ ಸಂಚಾರ ಮಾಹಿತಿ ಪಡೆಯಲು ಏನು ಮಾಡಬೇಕು?: 511ny.ಆರ್ಗ್ ವೆಬ್ ತಾಣದ ಹೈವೇ ರೂಟ್ ಪ್ಲಾನರ್ ಕ್ಲಿಕ್ ಮಾಡಿ ಮಾಹಿತಿ ಪಡೆದುಕೊಳ್ಳಿ. ಅಥವಾ 5-1-1, or 800-847-8929 ಕರೆ ಮಾಡಿ.

ನ್ಯೂಜೆರ್ಸಿ ಜನತೆ : ನ್ಯೂಜೆರ್ಸಿ ಟ್ರಾಫಿಕ್ ಮ್ಯಾಪ್ ನೋಡಿ ಅಥವಾ ಹೆಚ್ಚಿನ ಮಾಹಿತಿಗೆ 800-336-5875.ಕರೆ ಮಾಡಿ

1947ರಲ್ಲಿ 25 ಇಂಚು ಹಿಮರಾಶಿ...

ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ

ನ್ಯೂಯಾರ್ಕ್ ನಲ್ಲಿ ಸಂಚಾರ ಅಸ್ತವ್ಯಸ್ತ


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+