ಪಾಕಿಸ್ತಾನದ ಹಾಸ್ಟೆಲ್‌ನಲ್ಲಿ ಹಿಂದೂ ವಿದ್ಯಾರ್ಥಿನಿ ಶವ ಪತ್ತೆ
ಇಸ್ಲಾಮಾಬಾದ್, ಸೆಪ್ಟೆಂಬರ್ 17: ಪಾಕಿಸ್ತಾನ ಕಾಲೇಜಿನ ಕೋಣೆಯೊಂದರಲ್ಲಿ ಹಿಂದೂ ವೈದ್ಯಕೀಯ ವಿದ್ಯಾರ್ಥಿನಿ ಶವ ಪತ್ತೆಯಾಗಿದ್ದು ಎಲ್ಲರಲ್ಲೂ ಆತಂಕ ಮೂಡಿದೆ.
ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಬಾಲಕಿಯ ಶವ ಪತ್ತೆಯಾಗಿದೆ.ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬುದನ್ನು ಪ್ರಾಥಮಿಕ ವರದಿಯಲ್ಲಿ ತಿಳಿಸುವುದು ಕಷ್ಟ ಎಂದು ಪೊಲೀಸರು ಹೇಳಿದ್ದಾರೆ.
ಆದರೆ ಇದು ಆತ್ಮಹತ್ಯೆ ಅಲ್ಲ ಎಂದು ನಮ್ರತಾ ಅವರ ಸಹೋದರ ಡಾ.ವಿಶಾಲ್ ಸುಂದರ್ ಹೇಳಿದ್ದಾರೆ.ನಮ್ರತಾ ಲಾರ್ಕಾನಾದ ಬಿಬಿ ಆಸಿಫಾ ಡೆಂಟಲ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಳು.

ಬಲವಂತದ ಮತಾಂತರದಿಂದಾಗಿ ಈ ಕೊಲೆ ನಡೆದಿದೆ ಎಂದು ಹೇಳಲಾಗಿದೆ. ಮೃತ ಹುಡುಗಿಯ ಹೆಸರು ನಮ್ರತಾ ಚಂದಾನಿ ಮತ್ತು ಅವಳು ಘೋಟ್ಕಿಯ ಮಿರ್ಪುರ್ ಮ್ಯಾಥೆಲೊ ನಿವಾಸಿಯಾಗಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ.
ಬೆಳಿಗ್ಗೆ, ನಮ್ರತಾಳ ಸ್ನೇಹಿತರು ಅವಳ ಕೋಣೆಯ ಬಾಗಿಲು ತಟ್ಟಿದರೂ ಕೆಲ ಸಮಯದವರೆಗೂ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಘಟನೆಯ ತನಿಖೆ ನಡೆಸುವಂತೆ ಲಾರ್ಕಾನಾ ಡಿಐಜಿ ಇರ್ಫಾನ್ ಅಲಿ ಬಲೂಚ್ ಎಸ್‌ಎಸ್‌ಪಿ ಮಸೂದ್ ಅಹ್ಮದ್ ಬಂಗಾಶ್ ಅವರಿಗೆ ಆದೇಶಿಸಿದ್ದಾರೆ.
ಕೆಲವು ದಿನಗಳ ಹಿಂದೆ ಹಿಂದೂಗಳ ಮೇಲಿನ ದೌರ್ಜನ್ಯದ ಸಂದರ್ಭದಲ್ಲಿ ಸಿಂಧ್‌ನ ಘೋಟ್ಕಿ ಪ್ರದೇಶವು ಮುಖ್ಯಾಂಶಗಳಲ್ಲಿತ್ತು. ಸೆಪ್ಟೆಂಬರ್ 15 ರಂದು ಘೋಟ್ಕಿಯಲ್ಲಿಯೇ ಹಿಂದೂ ದೇವಾಲಯ ಮತ್ತು ಶಾಲೆಯನ್ನು ಧ್ವಂಸ ಮಾಡಲಾಯಿತು.












Click it and Unblock the Notifications